ಮಂಗಳೂರು: ಸಂಸದ ನಳಿನ್ ವಿರುದ್ಧ ಕಾರ್ಯಕರ್ತನ ಆಕ್ರೋಶದ ಆಡಿಯೋ ವೈರಲ್
Monday, March 4, 2024
ಮಂಗಳೂರು: ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿರುವ ಆಡಿಯೋ ವೈರಲ್ ಆಗಿದೆ.
ಬಿಜೆಪಿಯ ಸಂಪರ್ಕ ಅಭಿಯಾನದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯ ಕಚೇರಿಯಿಂದ ಫೋನ್ ಕರೆ ಬರುತ್ತಿದೆ. ಈ ಫೋನ್ ಕರೆಗೆ ಕಾರ್ಯಕರ್ತ ಚಂದ್ರಹಾಸ ರೈ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಡಿಯೋ ಈಗ ವೈರಲ್ ಆಗುತ್ತಿದೆ.
ಬಿಜೆಪಿ ರಾಜ್ಯ ಕಚೇರಿಯಿಂದ ಫೋನ್ ಮಾಡಿದವರಿಗೆ ಕಾರ್ಯಕರ್ತ ಚಂದ್ರಹಾಸ ರೈ ಅವರು 'ಪುತ್ತಿಲ ಪರಿವಾರ, ಅರುಣ್ ಕುಮಾರ್ ಪುತ್ತಿಲ ಸಮಸ್ಯೆ ಸರಿಪಡಿಸಿ ಆಮೇಲೆ ಫೋನ್ ಮಾಡಿ' ಎಂದು ದಬಾಯಿಸಿದ್ದಾರೆ. ಅಲ್ಲದೆ 'ಕಳ್ಳ ನಳಿನ್‌ಗೆ ಟಿಕೆಟ್ ಕೊಡುದಾದರೆ ನಾವು ಈ ಬಾರಿ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಬರೆದಿಟ್ಟುಕೊಳ್ಳಿ. ರಾಜ್ಯಾಧ್ಯಕ್ಷ ವಿಜಯೇಂದ್ರನಿಗೆ ಹೋಗಿ ಹೇಳಿ. ನೀವು ಫೋನ್ ಮಾಡಿದಾಗ ಮಾತನಾಡಲು ಬಿಜೆಪಿ ಕಾರ್ಯಕರ್ತರು ನಿಮ್ಮ ಕೆಲಸದವರಲ್ಲ ಎಂದು
ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.