ಬಾಳೆಕಾಯಿಯಲ್ಲಿ ಇರುವ ಪೌಷ್ಟಿಕತೆ ಬಗ್ಗೆ ನಿಮಗೆ ಏಷ್ಟು ತಿಳಿದಿದೆ
Friday, March 8, 2024
ಸಾಮಾನ್ಯವಾಗಿ ಎಲ್ಲ ಅಚ್ಚುಮೆಚ್ಚಿನ ಹಣ್ಣು ಅಂದರೆ ಅದು ಬಾಳೆಹಣ್ಣು. ರುಚಿಯಾಷ್ಟೆ ಪೌಷ್ಟಿಕತೆಯಲ್ಲು ಬಾಳೆಹಣ್ಣು ಮುಂದಿದ್ದೆ ಎಂದು ಎಲ್ಲರಿಗೂ ಗೊತ್ತು ಆದರೇ ಕಾಯಿ ಬಾಳೆಕಾಯಿಯಲ್ಲಿ ಇರುವ ಆರೋಗ್ಯಕರ ಅಂಶಗಳ ಬಗ್ಗೆ ಗೊತ್ತಾ
ಬಾಳೆಕಾಯಿ ತಿನ್ನುವುದರಿಂದ ಆಗುವ ಲಾಭಗಳ ಕುರಿತಾಗಿ ತಿಳಿದುಕೊಳ್ಳೋಣ...
1) ಬಾಳೆಕಾಯಿಯಲ್ಲಿ ಫೈಬರ್ ಅಂಶಗಳು ಇರುವುದರಿಂದ ಇದು ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ
2) ಬಾಳೆಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹೆಚ್ಚು ಹಸಿವನ್ನೂ ನಿಯಂತ್ರಿಸುತ್ತದೆ ಇದರಿಂದ ತೂಕ ಕಡಿಮೆಮಾಡಲು ಇ ತುಂಬಾ ಪ್ರಯೋಜನಕಾರಿಯಾಗಿದೆ.
3) ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಹೆಚ್ಚು ಇರುವುದರಿಂದ ಮುಖದ ಮೇಲಿನ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ಚರ್ಮವು ಹೊಳೆಯುತ್ತದೆ.
4) ಬಾಳೆಕಾಯಿ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತದೆ.
5) ಧ್ವನಿಯಲ್ಲಿ ಏರುಪೇರಾಗಿ ಮಾತನಾಡಲು ಕಷ್ಟವಾದಾಗ ಹಸಿಬಾಳೆಕಾಯಿಯನ್ನು ತಿಂದರೆ ಧ್ವನಿ ಸರಿಯಾಗುತ್ತೆ.
ಬಾಳೆಹಣ್ಣು ಅತ್ಯಂತ ಪೌಷ್ಟಿಕ ಹಾಗೂ ರುಚಿಕರ ಹಣ್ಣು. ವರ್ಷದ ಎಲ್ಲಾ ದಿನಗಳಲ್ಲಿ, ಎಲ್ಲಾ ಕಡೆ ಸಿಗುವ ಬಾಳೆಹಣ್ಣನ್ನು ಹಾಗೇ ಸೇವಿಸಬಹುದು ಅಥವಾ ಸೂಥಿ, ಪಾಯಸ, ಫೂಟ್ ಸಾಲಾಡ್, ವಿವಿಧ ಸಿಹಿತಿನಿಸುವಳು, ಕಡುಬು ಮೊದಲಾದ ಖಾದ್ಯಗಳ ಮೂಲಕವೇ ಸೇವಿಸಬಹುದು.
ಇದೇ ಬಾಳೆಕಾಯಿ ಇದ್ದಾಗಲೇ, ಸೇವಿಸಿದರೆ ಹಣ್ಣಾದ ಬಳಿಕ ಸಿಗದ ಕೆಲವಾರು ಆರೋಗ್ಯಕರ ಪ್ರಯೋಜನಗಳೂ ಇವೆ
ಬಾಳೆಕಾಯಿಯನ್ನು ಸೇವಿಸುವುದು ಹೇಗೆ?:
ಬಾಳೆಕಾಯಿಯ ಸಿಪ್ಪೆ ಸುಲಿದು ಒಳಗಿನ ತಿರುಳನ್ನು ತರಕಾರಿಯ ರೂಪದಲ್ಲಿ ವಿವದ್ಯ ತಯಾರಿಸಬಹುದು. ಹುರಿದರೆ ಅಥವಾ ಕರಿದು, ಪಲ್ಯ ಮಾಡಿ ಅಥವಾ ಬಾಳೆಕಾಯಿ ಕಟ್ ಮಾಡಿ ಹಸಿಯಾಗಿ ಸೇವಿಸಬಹುದಾಗಿದೆ.
ಬಾಳೆಕಾಯಿಯ ಸಿಪ್ಪೆಯನ್ನು ಬೇರ್ಪಡಿಸಿ ಅದಕ್ಕೆ ಉಪ್ಪು, ಮೆಣಸು, ಕುತ್ತೊಂಬರಿ ಸೊಪ್ಪು ಮತ್ತು ಈರುಳ್ಳಿಯನ್ನು ಸೇರಿಸಿ ತಿನ್ನಬೇಕು.