ಹಸೆಮಣೆಯೇರಿ ಅಭಿಮಾನಿಗಳಿಗೆ ಶಾಕ್ ನೀಡಿದ ಬಿಗ್ ಬಾಸ್ ಸ್ಪರ್ಧಿಗಳಾದ ಕಾರ್ತಿಕ್ - ನಮೃತಾ ಜೋಡಿ
Friday, March 1, 2024
ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-10 ಪ್ರೇಕ್ಷಕರ ಹಲವು ವಿಚಾರಕ್ಕೆ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಬಿಗ್‌ಬಾಸ್ ಸೀಸನ್-10ರ ಸ್ಪರ್ಧಿಗಳಾಗಿದ್ದ ಕಾರ್ತಿಕ್ ಹಾಗೂ ನಮೃತಾ ಗೌಡ ಹಸೆಮಣೆ ಏರಿರುವ ವೀಡಿಯೋ ಹಾಗೂ ಫೋಟೊ ವೈರಲ್ ಆಗುತ್ತಿದೆ.
ಫಿನಾಲೆ ಹತ್ತಿರವಾಗುತ್ತಿದ್ದಂತೆ ಕಾರ್ತಿಕ್ ಹಾಗೂ ನಮ್ರತಾ ಗೌಡ ನಡುವೆ ಬಾಂಧವ್ಯ ತುಸು ವೃದ್ಧಿಸಿತ್ತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಚಾರಕ್ಕೆ ಟೀಕೆ ವ್ಯಕ್ತವಾದ ಕಾರಣ ಇಬ್ಬರು ಪರಸ್ಪರ ದೂರಾಗಿದ್ದರು. ಆದರೆ, ಇವರ ಸ್ನೇಹ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವೂ ಮುಂದುವರೆದಿದೆ. ಈ ನಡುವೆ ಇವರಿಬ್ಬರು ಹಸೆಮಣೆ ಏರಿರುವ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ನಮ್ರತಾ ಮತ್ತು ಕಾರ್ತಿಕ್ ಸಾಂಪ್ರದಾಯಿಕ ಉಡುಪು ಧರಿಸಿ ಮದುಮಕ್ಕಳಂತೆ ಕಾಣಿಸುತ್ತಾ ತೆಗೆದಿರುವ ವೀಡಿಯೋ ಹಾಗೂ ಫೋಟೊ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದೆ. ಫೋಟೋಗಳನ್ನು ನೋಡಿದ ಕೆಲವರು ಇಬ್ಬರಿಗೂ ಶುಭಾಶಯಗಳನ್ನು ಕೋರಿದ್ದಾರೆ.
ಆದರೆ, ಈ ಫೋಟೋಗಳ ಅಸಲಿಯತ್ತು ಬೇರೆಯದ್ದೇ ಇದೆ. ನಮ್ರತಾ ಹಾಗೂ ಕಾರ್ತಿಕ್ ಇಬ್ಬರು ಜಾಹೀರಾತೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭ ತೆಗೆಯಲಾದ ಫೋಟೋಗಳು ಎಂದು ಹೇಳಲಾಗಿದೆ. ಇಬ್ಬರೂ ವಧು-ವರರಂತೆ ವಸ್ತ್ರ ಧರಿಸಿ ಮೈತುಂಬ ಚಿನ್ನಾಭರಣಗಳನ್ನು ತೊಟ್ಟು ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ರೆಸಾರ್ಟ್ ಒಂದರಲ್ಲಿ ಈ ಜಾಹೀರಾತಿನ ಚಿತ್ರೀಕರಣ ನಡೆದಿದೆ. ಜಾಹೀರಾತು ಚಿತ್ರೀಕರಣದ ವಿಡಿಯೋ ಹಾಗೂ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ವಧು- ವರರಾಗಿ ಕಾಣಿಸಿಕೊಂಡಿರುವ ಕಾರ್ತಿಕ್-ನಮ್ರತಾರ ಜೋಡಿ ಕಂಡು ಒಳ್ಳೆಯ ಜೋಡಿಯೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.