ಕಡಬ: ಸಿಡಿಲು ಬಡಿದು ತೆಂಗಿನ ಮರ ಬೆಂಕಿಗಾಹುತಿ
Sunday, March 24, 2024
ಕಡಬ: ತಾಲೂಕಿನ ಕುದ್ಮಾರು ಗ್ರಾಮದಲ್ಲಿ ನಿನ್ನೆ ರಾತ್ರಿ ಗುಡುಗು ಸಹಿತ ಭಾರೀ ಮಳೆ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ತೆಂಗಿನಮರವೊಂದು ಸಂಪೂರ್ಣ ಬೆಂಕಿಗಾಗುತಿಯಾಗಿದೆ.
ನಿನ್ನೆ ರಾತ್ರಿ ಕಡಬ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಈ ವೇಳೆ ಜೋರಾಗಿ ಸಿಡಿಲೊಂದು ಬಡಿದು ಕುದ್ಮಾರು ಪ್ರದೇಶದಲ್ಲಿನ ತೆಂಗಿನ ಮರದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕ್ಷಣಾರ್ಧದಲ್ಲಿ ಮರ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇದನ್ನು ಸ್ಥಳೀಯರು ವೀಡಿಯೋ ಚಿತ್ರೀಕರಿಸಿದ್ದು, ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ.