ಮಾಟ ಮಾಡುತ್ತಿದ್ದಾನೆಂದು ಮಾಟಗಾರನನ್ನೇ ನಿಗಿನಿಗಿ ಕೆಂಡದ ಮೇಲೆ ನರ್ತನ ಮಾಡುವಂತೆ ಮಾಡಿದ ಜನ
Friday, March 8, 2024
ಥಾಣೆ: ಮಾಟ ಮಾಡುತ್ತಿದ್ದಾನೆ ಎಂದು 75 ವರ್ಷದ ಮಾಂತ್ರಿಕನಿಗೆ ಶಿಕ್ಷೆಯಾಗಿ ಬೆಂಕಿಯಿಂದ ಕಾದು ಕೆಂಪಗಾಗಿದ್ದ ಕಲ್ಲಿದ್ದಲಿನ ಮೇಲೆ ಬಲವಂತವಾಗಿ ನರ್ತಿಸುವಂತೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುರ್ಬಾದ್ ತಾಲೂಕಿನ ಕೆರ್ವೆಲೆ ಗ್ರಾಮದಲ್ಲಿ ಮಾರ್ಚ್ 4 ರಂದುನಡೆದಿದೆ.
ಘಟನೆಯಲ್ಲಿ ಮಾಂತ್ರಿಕನಿಗೆ ಸುಟ್ಟ ಗಾಯಗಳಾಗಿದ್ದು, ಪೊಲೀಸರು ಕೆಲವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದಾರೆ.
ವೀಡಿಯೊದಲ್ಲಿ, ಕೆಲವರು ಮಾಂತ್ರಿಕನನ್ನು ಹಿಡಿದುಕೊಂಡಿದ್ದಾರೆ. ಅಲ್ಲದೆ, ಉರಿಯುತ್ತಿರುವ ಕಲ್ಲಿದ್ದಲಿನ ಮೇಲೆ ನೃತ್ಯ ಮಾಡಲು ಬಲವಂತವಾಗಿ ಒತ್ತಾಯಿಸುತ್ತಿರುವುದು ಕಂಡುಬಂದಿದೆ. ಗ್ರಾಮದ ದೇವಸ್ಥಾನದ ಬಳಿ ಸ್ಥಳೀಯರು ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ 15-20 ಮಂದಿ ಮಾಂತ್ರಿಕನ ಮನೆಗೆ ನುಗ್ಗಿ, ಅವನನ್ನು ಹೊರಗೆಳೆದು ಕಾರ್ಯಕ್ರಮದ ಸ್ಥಳಕ್ಕೆ ಬಲವಂತವಾಗಿ ಕರೆದೊಯ್ದು ಕಲ್ಲಿದ್ದಲಿನ ಮೇಲೆ ಬಲವಂತವಾಗಿ ನೃತ್ಯ ಮಾಡಲು ಒತ್ತಾಯಿಸಿದ್ದಾರೆ ಎಂದು ಮುರ್ಬಾದ್ ಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಹೇಳಿದರು.
ಈತ ಮಾಟಮಂತ್ರ ಮಾಡುತ್ತಿದ್ದಾನೆ ಎಂದು ಆರೋಪಿಸಿ ಗ್ರಾಮದ ಕೆಲವರು ಥಳಿಸಿದ್ದಾರೆ. ಅಲ್ಲದೆ ಉರಿಯುತ್ತಿದ್ದ ಕಲ್ಲಿದ್ದಲಿನ ಮೇಲೆ ನರ್ತನ ಮಾಡಿಸಿದ್ದರಿಂದ ವ್ಯಕ್ತಿಯ ಕಾಲು ಮತ್ತು ಬೆನ್ನಿನ ಮೇಲೆ ಸುಟ್ಟ ಗಾಯಗಳಾಗಿದೆ. ಈ ಬಗ್ಗೆ ಮಾಟಗಾರನ ಕುಟುಂಬದವರು ದೂರು ದಾಖಲಿಸಿದ್ದಾರೆ. ಅದರಂತೆ ಪೊಲೀಸರು ಕೆಲವು ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 452, 323, 324, 341, 143, 147 ಮತ್ತು ಮಹಾರಾಷ್ಟ್ರದ 2013 ರ ನಿಬಂಧನೆಗಳ ಪ್ರಕಾರ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.