-->
ಡ್ರೈ ಐಸ್ ಸೇವೆನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ

ಡ್ರೈ ಐಸ್ ಸೇವೆನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ

 

ಗುರುಗ್ರಾಮದ ಕೆಫೆಯೊಂದರಲ್ಲಿ ಮೌತ್​ ಫ್ರೆಶರ್​​ ಎಂದು ಡ್ರೈ ಐಸ್​​ ನೀಡಲಾಗಿದೆ. ಇದನ್ನು ಸೇವಿಸಿದ ಐದು ಮಂದಿ ಗಂಭೀರವಾಗಿ ರಕ್ತದ ವಾಂತಿ ಮಾಡಿದ್ದು, ಅವರ ಬಾಯಲ್ಲಿ ಉರಿಯೂತದ ಅನುಭವ ಆಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇತ್ತೀಚಿನ ದಿನದಲ್ಲಿ ನಡೆದ  ಘಟನೆ ಆಹಾರ ಪ್ರಿಯರ ಪ್ರಿಯರಿಗೆ ಶಾಕ್ ನೀಡಿತು . ಈ ಘಟನೆಯ ಆಹಾರ ಪ್ರಿಯರನ್ನು ಆಕರ್ಷಿಸುತ್ತಿರುವ ಡ್ರೈ ಐಸ್​, ಲಿಕ್ವಿಡ್​​ ನೈಟ್ರೋಜನ್​​ ಸೇವಿಸುವುದು ಸುರಕ್ಷಿತವಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. 

ಏಕೆ ಸುರಕ್ಷಿತವಲ್ಲ ಡ್ರೈ ಐಸ್​ 
ಡ್ರೈ ಐಸ್​ ಎಂಬುದು ಘನೀಕೃತ ಇಂಗಾಲದ ಡೈ ಆಕ್ಸೈಡ್​ (ಸಿಇ2) ಆಗಿದ್ದು, -109.3 ಫ್ಯಾರನ್​ಹೀಟ್​​​ ತಾಪಮಾನದಲ್ಲಿರುತ್ತದೆ. ಇಂಗಾಲದ ಡೈ ಆಕ್ಸೈಡ್​​ ಅಧಿಕ ತಾಪಮಾನದಲ್ಲಿ ಹೆಚ್ಚಿನ ಒತ್ತಡದೊಂದಿಗೆ ಸಂಕುಚಿತಗೊಳಿಸಿ ತಂಪಾಗಿಸಿ ಉತ್ಪಾದನೆ ಮಾಡಲಾಗುವುದು. ಈ ಡ್ರೈ ಐಸ್​ ಮುರಿದಾಗ ಇದು ದ್ರವವಾಗುವ ಬದಲಾಗಿ ನೇರವಾಗಿ ಇಂಗಾಲದ ಡೈ ಆಕ್ಸೈಡ್​​​ ಅನಿಲವಾಗುತ್ತದೆ. ಹೆಚ್ಚಿನ ತಂಪು ತಾಪಮಾನ ಮತ್ತು ಇದರ ಲಕ್ಷಣಗಳು ರೆಫ್ರಿಜರೇಟರ್​ನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
ಈ ಡ್ರೈ ಐಸ್​​ ತ್ವಚೆ ಮತ್ತು ದೇಹದ ಒಳಗಿನ ಅಂಗಾಂಗ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಡ್ರೈ ಐಸ್​ ಕೈಯಲ್ಲಿ ಹಿಡಿದಾಗ ಇದು ಕೆಲವೇ ಸೆಕೆಂಡ್​​ನಲ್ಲಿ ಚರ್ಮದ ಕೋಶವನ್ನು ಘನೀಕರಿಸಿ, ಸಾಯುವಂತೆ ಮಾಡುತ್ತದೆ. ಅಲ್ಲದೇ ಈ ಡ್ರೈ ಐಸ್​​​ ಸುಡುವಿಕೆ ಮತ್ತು ಗಾಯಗಳಿಗೆ ಕಾರಣವಾಗುತ್ತದೆ ಎಂದು ಗುರುಗಾಂವ್​​ನ ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್ನಲ್​ ಮೆಡಿಸಿನ್​ ವಿಭಾಗದ ಡಾ ತುಷಾರ್​ ಟಯಲ್​ ತಿಳಿಸಿದ್ದಾರೆ.

ಕೆಲವು ರೆಸ್ಟೋರೆಂಟ್​ ಮತ್ತು ಕೆಫೆಗಳಲ್ಲಿ ಕೆಲವು ಆಹಾರಗಳನ್ನು ಸೇವಿಸಿದಾಗ ಬಾಯಿಂದ ಹೊಗೆ ಬರಲು (ಸ್ಮೋಕ್​ ಎಫೆಕ್ಟ್​​) ಡ್ರೈ ಐಸ್​ ಮತ್ತು ದ್ರವೀಕೃತ ನೈಟ್ರೋಜನ್​​​ ಬಳಕೆ ಮಾಡಲಾಗುತ್ತದೆ. ಇದು ಇತ್ತೀಚಿನ ದಿನದಲ್ಲಿ ಫ್ಯಾನ್ಸಿ ಆಗಿದ್ದು, ಟ್ರೆಡಿಂಗ್​​ ಆಗಿದೆ. ಡ್ರೈ ಐಸ್​ ಮತ್ತು ಲಿಕ್ವಿಡ್​ ನೈಟ್ರೋಜನ್​​​ ಸೇವನೆಯು ಅನೇಕ ಬಾರಿ ಗಂಭೀರ ಪರಿಣಾಮ ಬೀರುತ್ತದೆ ಎಂದು ಗುರುಗಾವ್​ನ ಕ್ಲಿನಿಕಲ್​ ನ್ಯೂಟ್ರಿಷಿಯನ್​ ನೀಲಿಮಾ ಬಿಶ್ತಾ ತಿಳಿಸಿದ್ದಾರೆ.

ಲಿಕ್ವಿಡ್​ ನೈಟ್ರೋಜನ್​​​ ಅನ್ನು ಇತ್ತೀಚಿನ ದಿನದಲ್ಲಿ ಆಹಾರ ಫ್ಯಾನ್ಸಿ, ಆಕರ್ಷಣಿಯವಾಗಿಸಲು ಬಳಕೆ ಮಾಡಲಾಗುತ್ತಿದೆ. ಆದರೆ, ಇದನ್ನು ಸರಿಯಾಗಿ ನಿರ್ವಹಣೆ ಮಾಡದೇ ಹೋದಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದು ದೇಹದ ಒಳಗಿನ ಅಂಗಾಂಶದ ಮೇಲೆ ಹಾನಿ ಉಂಟು ಮಾಡುತ್ತದೆ. ಡ್ರೈ ಐಸ್​ ಮತ್ತು ಲಿಕ್ವಿಡ್​ ನೈಟ್ರೋಜನ್​ ವಾಂತಿ, ರಕ್ತಸ್ರಾವ ಮತ್ತು ಇತರ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು.
ಆರೋಗ್ಯದ ಗಮನವಿರಲಿ

Ads on article

Advertise in articles 1

advertising articles 2

Advertise under the article