ಕೆನಡಾ: ಅಗ್ನಿ ದುರಂತದಲ್ಲಿ ಭಾರತ ಮೂಲದ ದಂಪತಿ, ಪುತ್ರಿ ಸಾವು
Saturday, March 16, 2024
ನವದೆಹಲಿ: ಕಟ್ಟಡವೊಂದರಲ್ಲಿ ಸಂಭವಿಸಿರುವ ಭೀಕರ ಅಗ್ನಿಅವಘಡದಲ್ಲಿ ಭಾರತ ಮೂಲದ ದಂಪತಿ ಸೇರಿದಂತೆ ಅವರ ಪುತ್ರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ದಾರುಣ ಘಟನೆ ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಮಾರ್ಚ್ 7ರಂದು ನಡೆದಿದೆ. ಒಂದೇ ಕುಟುಂಬದ ಈ ಮೂವರ ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದೆ.
ಭಾರತ ಮೂಲದ ರಾಜೀವ್ ವಾರಿಕೂ (51), ಶಿಲ್ಪಾ ಕೋಥಾ (47) ಮತ್ತು ಮಾಹೆಕ್ ವಾರಿಕೂ (16) ಮೃತಪಟ್ಟವರು. ಇವರ ಮೃತದೇಹವನ್ನು ಮಾರ್ಚ್ 15ರಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡವಲ್ಲ ಎಂದು ತಿಳಿದು ಬಂದಿದೆ. ಮೂವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ತನಿಖೆ ನಡೆಸಲಾಗುತ್ತಿದೆ. ನೆರೆಹೊರೆಯವರು ಸ್ಪೋಟ ಆಗಿದ ಎಂದು ಹೇಳಿದ್ದು, ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.