ಮೆಟ್ರೋದಲ್ಲಿ ಯುವತಿಯರಿಂದ ಅಶ್ಲೀಲ ವರ್ತನೆ: ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು
Tuesday, March 26, 2024
ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದ ರಾಜಧಾನಿ ನವದೆಹಲಿಯ ಮೆಟ್ರೋದಲ್ಲಿ ನಡೆಯುತ್ತಿರುವ ಘಟನೆಗಳು ಒಂದಿಲ್ಲೊಂದು ಕಾರಣಕ್ಕೆ ದೇಶದ ಜನರ ಗಮನವನ್ನು ಸೆಳೆಯುತ್ತಿದೆ. ಇದೀಗ ಇಬ್ಬರು ಯುವತಿಯರು ರೀಲ್ಸ್ ಗಾಗಿ ಮೆಟ್ರೋದಲ್ಲಿಯೇ ಅಶ್ಲೀಲವಾಗಿ, ಸಹ ಪ್ರಯಾಣಿಕರಿಗೆ ಮುಜುಗರವಾಗುವಂತೆ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಇದರ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ಯುವತಿಯರು ಹೋಲಿ ಹಬ್ಬಕ್ಕಾಗಿ ರೀಲ್ಸ್ ಮಾಡುವುದನ್ನು ನೋಡಬಹುದು. ಈ ವೇಳೆ ಮೆಟ್ರೋದಲ್ಲಿ ಪ್ರಯಾಣಿಕರಿದ್ದರೂ ಯುವತಿಯರಿಬ್ಬರು ಪರಸ್ಪರ ಬಣ್ಣ ಹಚ್ಚಿಕೊಂಡು ಬಳಿಕ ಅಶ್ಲೀಲವಾಗಿ ವರ್ತಿಸಲು ಆರಂಭಿಸಿದ್ದಾರೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಮೆಟ್ರೋ ಕಾರ್ಪೊರೇಶನ್ ಅನ್ನು ದೂಷಿಸಿ ನೆಟ್ಟಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಆಶ್ಲೀಲ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ವೀಡಿಯೋ ನೋಡುತ್ತಿರುವ ನಮಗೆ ಇಷ್ಟು ಮುಜುಗರವಾಗುತ್ತಿದೆ. ಇನ್ನೂ ಅಲ್ಲಿರುವ ಪ್ರಯಾಣಿಕರ ಸ್ಥಿತಿ ಏನು ಎಂದು ನೆಟ್ಟಿಗರು ಕಮೆಂಟ್‌ಗಳ ಮೂಲಕ ಪ್ರಶ್ನಿಸಿದ್ದಾರೆ.