-->
ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ಡಿಗ್ರಿ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ಡಿಗ್ರಿ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಮತ್ತು ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಕಿರಿಯ ತಾಂತ್ರಿಕ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರಿಗೆ ಅವರ ಸೇವಾವಧಿ ಹಾಗೂ ಶೈಕ್ಷಣಿಕ ಅರ್ಹತೆ ಆಧರಿಸಿ ಕನಿಷ್ಠ 5 ಸಾವಿರರು.ನಿಂದ ಗರಿಷ್ಠ 8 ಸಾವಿರದ ವರೆಗೆ ವೇತನ ಹೆಚ್ಚಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

 ಈ ಹಿಂದೆ ನೀಡಿದ್ದ ಭರವಸೆಯಂತೆ ಎಲ್ಲ ಅತಿಥಿ ಉಪನ್ಯಾಸಕರಿಗೂ ತಲಾ 5 ಲಕ್ಷ ರು. ಆರೋಗ್ಯ ವಿಮಾ ಸೌಲಭ್ಯ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 60 ವರ್ಷ ಮೀರಿದ ನಂತರ ಭದ್ರತಾ ರೂಪದಲ್ಲಿ ವಾರ್ಷಿಕ 50 ಸಾವಿರ ರು. ನಂತರ ಗರಿಷ್ಠ 5 ಲಕ್ಷ ರು.ಗಳ ಇಡುಗಂಟು ಮಂಜೂರು ಮಾಡಲು ಉನ್ನತ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳು ಆದೇಶಿಸಿವೆ.

 ಆದೇಶಾನುಸಾರ ಸೇವಾವಧಿ ಮತ್ತು ವಿದ್ಯಾರ್ಹತೆ ಆಧಾರದಲ್ಲಿ ಕ್ರಮವಾಗಿ 5, 6,7 ಮತ್ತು8 ಸಾವಿರದಂತೆ ನಾಲ್ಕು ರೀತಿಯಲ್ಲಿ ವೇತನ ಹೆಚ್ಚಿಸಲಾಗಿದೆ. ಪದವಿ ಕಾಲೇಜುಗಳಲ್ಲಿ 5 ವರ್ಷಕ್ಕಿಂತ ಕಡಿಮೆ ಸೇವಾವಧಿ ಸಲ್ಲಿಸಿದ್ದು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ ಮಾಸಿಕ ಗೌರವ ಧನ 35 ಸಾವಿರರು., ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 31 ಸಾವಿರ ರು., 5ರಿಂದ 10 ವರ್ಷಗಳ ಕಾಲ ಸೇವಾವಧಿ ಸಲ್ಲಿಸಿರುವವರ ಪೈಕಿ ಯುಜಿಸಿ ವಿದ್ಯಾರ್ಹತೆ ಇರುವವರಿಗೆ 38 ಸಾವಿರ ರು., ಯುಜಿಸಿ ವಿದ್ಯಾರ್ಹತೆ ಇಲ್ಲದವ ರಿಗೆ 34 ಸಾವಿರ ರು., 10ರಿಂದ 15 ವರ್ಷ ಸೇವಾವಧಿ ಸಲ್ಲಿಸಿರುವವರಲ್ಲಿ ಯುಜಿಸಿ ವಿದ್ಯಾರ್ಹತೆಯುಳ್ಳವರಿಗೆ 39 ಸಾವಿರ ರು., ಯುಜಿಸಿ ವಿದ್ಯಾರ್ಹತೆ ಇಲ್ಲದವರಿಗೆ 35 ಸಾವಿರ ರು., 15 ವರ್ಷಕ್ಕಿಂತ ಹೆಚ್ಚು ಕಾಲಸೇವೆಸಲ್ಲಿಸಿದ್ದು ಯುಜಿಸಿ ವಿದ್ಯಾರ್ಹತೆ ಇರುವವರಿಗೆ 40 ಸಾವಿರ ರು. ಹಾಗೂ ಯುಜಿಸಿ ವಿದ್ಯಾರ್ಹತೆ ಇಲ್ಲದವರಿಗೆ 36 ಸಾವಿರ ರು.ಗಳಿಗೆ ವೇತನ ಹೆಚ್ಚಳವಾಗಲಿದೆ.

Ads on article

Advertise in articles 1

advertising articles 2

Advertise under the article