-->
ಕೊತ್ತಂಬರಿ ಸೊಪ್ಪು ಮಾರುತ್ತಿದ್ದವ ಈಗ ಬಾಲಿವುಡ್ ನ ಸೂಪರ್ ಸ್ಟಾರ್ ನಟ: ಈ ಬಹುಬೇಡಿಕೆಯ ನಟ ಯಾರು ಗೊತ್ತಾ?

ಕೊತ್ತಂಬರಿ ಸೊಪ್ಪು ಮಾರುತ್ತಿದ್ದವ ಈಗ ಬಾಲಿವುಡ್ ನ ಸೂಪರ್ ಸ್ಟಾರ್ ನಟ: ಈ ಬಹುಬೇಡಿಕೆಯ ನಟ ಯಾರು ಗೊತ್ತಾ?


ಮುಂಬೈ: ಬಡ ಕುಟುಂಬದಲ್ಲಿ ಜನಿಸಿ, ಬಡತನದಲ್ಲಿಯೇ ಬೆಳೆದು ಜೀವನೋಪಾಯಕ್ಕಾಗಿ, ಕುಟುಂಬವನ್ನು ಪೋಷಿಸಲು ಕೊತ್ತಂಬರಿ ಸೊಪ್ಪು ಮಾರಾಟ ಮಾಡುವುದರೊಂದಿಗೆ ವಿವಿಧ ಉದ್ಯೋಗಗಳನ್ನು ಮಾಡಿದ್ದ ವ್ಯಕ್ತಿ ಇದೀಗ ಬಾಲಿವುಡ್ ನ ಖ್ಯಾತ ಹೀರೋಗಳಲ್ಲಿ ಒಬ್ಬರಾಗಿದ್ದಾರೆ.  ಯಾರು ಈ ನಟ? ಎನ್ನುವ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ.....

ನವಾಜುದ್ದೀನ್ ಸಿದ್ದಿಕಿ ತಮ್ಮ ವಿಶಿಷ್ಟ ನಟನೆಯ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ಆದ ಟ್ರೆಂಡ್ ಅನ್ನು ಸೃಷ್ಟಿಸಿದ್ದಾರೆ.  ಆದರೆ ಬಾಲಿವುಡ್ ನಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಅವರಿಗೆ ಒಂದು ದಶಕಕ್ಕೂ ಅಧಿಕ ಸಮಯ ಬೇಕಾಯಿತು. ಈ ನಡುವೆ ಅವರು ಸಾಕಷ್ಟು ಅವಮಾನಗಳು ಮತ್ತು ನಿರಾಕರಣೆಗಳನ್ನು ಅನುಭವಿಸಿದರು‌. ಅದರ ಹೊರತಾಗಿಯೂ, ಸಿದ್ದಿಕಿ ನಟನೆಯನ್ನು ಮಾತ್ರ ಬಿಡಲಿಲ್ಲ.

ನವಾಜುದ್ದೀನ್ ಉತ್ತರಪ್ರದೇಶದ ಬುಧಾನಾ ಪ್ರದೇಶದಲ್ಲಿ ಜನಸಿದರು. 8 ಮಂದಿ ಒಡಹುಟ್ಟಿದವರಲ್ಲಿ ಇವರೇ ಹಿರಿಯರು. ಬಿಎಸ್ಸಿ ಕೆಮಿಸ್ಟ್ರಿ ವ್ಯಾಸಂಗ ಮಾಡಿದ್ದಾರೆ. ಬಳಿಕ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್ಟಿ)ಗೆ ಸೇರಿದರು. ಈ ವೇಳೆ ಕುಟುಂಬದ ನಿರ್ವಹಣೆ ಜವಾಬ್ದಾರಿಯು ಇವರ ಹೆಗಲ ಮೇಲೆಯೇ ಇತ್ತು.

ಆದ್ದರಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ರು, ಕೊತ್ತಂಬರಿ ಸೊಪ್ಪು ಸಹ ಮಾರಾಟ ಮಾಡಿದ್ದರು.  ನವಾಜುದ್ದೀನ್, ದೆಹಲಿಗೆ ಬಂದು ನಟನೆಯತ್ತ ಗಮನ ಹರಿಸಿದ್ರು. ಆದರೆ ಕೆಲಸ ಬಿಟ್ಟ ಬಳಿಕ ಹಣದ ತೊಂದರೆ ಕಾಡಿತು. ಆ ಸಮಯದಲ್ಲಿ ನಾನು ಸ್ನೇಹಿತರ ಬಳಿ ಸಾಲ ಪಡೆಯುತ್ತಿದ್ದೆ. ಬಳಿಕ ಬೇರೆಯವರಿಂದ ಸಾಲ ಪಡೆದು ಹಿಂದಿನ ಸಾಲಗಾರನಿಗೆ ಸಾಲ ಪಾವತಿಸುತ್ತಿದ್ದರು. ಒಂದು ಚಿಕ್ಕ ಫ್ಲಾಟ್ ನಲ್ಲಿ 4 ಜನರೊಂದಿಗೆ ವಾಸಿಸುತ್ತಿದ್ದರು.

ನವಾಜುದ್ದೀನ್ ಸಿದ್ದಿಕಿ 1999ರಲ್ಲಿ ಚಿತ್ರರಂಗ ಪ್ರವೇಶಿಸಿದರು. 'ಸರ್ಫರೋಶ್' ಅವರ ಮೊದಲ ಸಿನಿಮಾ. ಬಳಿಕ ಅವರು ರಾಮ್ ಗೋಪಾಲ್ ವರ್ಮಾ ಅವರ 'ಶೂಲ್', 2000ನೇ ಇಸವಿಯಲ್ಲಿ 'ಜಂಗಲ್' ಮತ್ತು ರಾಜ್ ಕುಮಾರ್ ಹಿರಾನಿ ಅವರ ಮುನ್ನಾಭಾಯ್ ಎಂಬಿಬಿಎಸ್ (2003) ನಲ್ಲಿ ಕಾಣಿಸಿಕೊಂಡರು. ಬಳಿಕ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಆದರೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಅನುರಾಗ್ ಕಶ್ಯಪ್ ಅವರ ಗ್ಯಾಂಗ್ಟ‌ರ್ ಚಿತ್ರ 'ಗ್ಯಾಂಗ್ಸ್ ಆಫ್ ವಾಸೇಪುರ್' (2012) ನಲ್ಲಿ ಅಭಿನಯಿಸಿದ ನವಾಜುದ್ದೀನ್ ಸೂಪ‌ರ್ ಹಿಟ್ ಪಡೆದರು. ಅಂದಿನಿಂದ ಅವರು ಹಿಂತಿರುಗಿ ನೋಡಲೇ ಇಲ್ಲ. 

ಈಗ ನವಾಜುದ್ದೀನ್ ಬ್ಯುಸಿ ನಟರಲ್ಲಿ ಒಬ್ಬರಾಗಿದ್ದಾರೆ. ಟಾಪ್ ಒಟಿಟಿ ನಟರಾಗಿರುವ ನವಾಜುದ್ದೀನ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ.‌ ಸದ್ಯ ನವಾಜುದ್ದೀನ್ ಸಿದ್ದಿಕಿಯವರ ನಿವ್ವಳ ಮೌಲ್ಯ ಸುಮಾರು 125 ಕೋಟಿ ರೂ. ಸಂಭಾಷಣೆ ಮತ್ತು ಪಾತ್ರಕ್ಕೆ ಜೀವ ತುಂಬಲು ನವಾಜುದ್ದೀನ್ ಸಿದ್ದಿಕಿ ಉತ್ತಮ ಉದಾಹರಣೆ. ಸದ್ಯ ಅವರ ಕೈಯಲ್ಲಿ ನಾಲೈದು ಚಿತ್ರಗಳಿವೆ. ನವಾಜುದ್ದೀನ್ ಇತ್ತೀಚೆಗೆ ತಮ್ಮ ವೈಯಕ್ತಿಕ ಸುದ್ದಿಯಲ್ಲಿದ್ದರು.

Ads on article

Advertise in articles 1

advertising articles 2

Advertise under the article