ಗೋಬಿ ಪ್ರಿಯರೇ ಇಲ್ಲಿ ಗಮನಿಸಿ
Saturday, March 16, 2024
ಗೋಬಿ ಮಂಚೂರಿಯನ್ನು ಇಷ್ಟ ಪಡದವರು ಯಾರು ಇಲ್ಲ. ಸಾಮಾನ್ಯವಾಗಿ ಎಲ್ಲರೂ ಕೆಂಪು ಸುಂದರಿ ಗೋಬಿಯ ರುಚಿಯನ್ನು ನೋಡಿರುತ್ತಾರೆ. ಆದರೆ ಗೋಬಿ ತಯಾರಿಸಲು ಬಳಸುವ ಬಣ್ಣದ ಬಗ್ಗೆ ಯಾರೂ ಗಮನಿಸುವುದಿಲ್ಲ. ಗೋಬಿಗೆ ಬಳಸುವ ಬಣ್ಣದ ರಾಸಾಯನಿಕವು ಅಪಾಯಕಾರಿಯಾಗಿದೆ.
ಅದರಿಂದಲೇ
ಎಲ್ಲರ ಮೆಚ್ಚಿನ ಗೋಬಿ ಮಂಚೂರಿ ಮತ್ತು ಕೋಟನ್ ಕ್ಯಾಂಡಿಯಲ್ಲಿ ಅತಿಯಾಗಿ ಕೃತಕ ಬಣ್ಣದ ಬಳಕೆ ಮಾಡುವ ಕಾರಣದಿಂದ ಕರ್ನಾಟಕ ಸರ್ಕಾರವು ಇವುಗಳ ಮೇಲೆ ನಿಷೇಧ ಹೇರಿದೆ.
ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಬಳಸಲಾಗುವ ಕೃತಕ ಬಣ್ಣಗಳಲ್ಲಿ ರೋಡಮೈನ್ ಬಿ ಎನ್ನುವ ಅಂಶವು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.
ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳುತ್ತಾರೆ. ದೀರ್ಘಕಾಲದ ತನಕ ಕೃತಕ ಬಣ್ಣದ ಬಳಕ್ಕೆ ಮಕ್ಕಳಲ್ಲಿ ಕ್ಯಾನ್ಸರ್ ತರಬಹುದು ಎಂದು ಸರ್ಕಾರಿ ಆದೇಶದಲ್ಲಿ ವಿವರಿಸಲಾಗಿದೆ.
ರೊಡಮೈನ್ ಬಿ ಎಂದರೇನು?
ರೊಡಮೈನ್ ಬಿ(ಆರ್‌ಎಚ್‌ಬಿ) ಎನ್ನುವ ರಾಸಾಯನಿಕವು ಸಾಮಾನ್ಯವಾಗಿ ಸಿಲ್ಕ್, ಗೋಣಿನಾರು, ಚರ್ಮ, ಹತ್ತಿ ಮತ್ತು ಉಣ್ಣೆ, ಅದೇ ರೀತಿಯಾಗಿ ಕಾಸ್ಕೆಟಿಕ್ ಹಾಗೂ ಪ್ಲಾಸ್ಟಿಕ್ ಗಳಲ್ಲಿ ಇದನ್ನು ಬಣ್ಣವಾಗಿ ಬಳಕೆ ಮಾಡಲಾಗುತ್ತದೆ. ಇದು ತುಂಬಾ ಅಗ್ಗದಲ್ಲಿ ಸಿಗುವ ಕಾರಣದಿಂದಾಗಿ ಆಹಾರಕ್ಕೆ ಅತಿಯಾಗಿ ಬಳಕೆ ಮಾಡಲಾಗುತ್ತದೆ.
ರೊಡಮೈನ್ ಬಿ ಹೇಗೆ ಹಾನಿಕಾರಕವಾಗಿದೆ
ರೊಡಮೈನ್ ಬಿ ಆಹಾರದಲ್ಲಿ ಬಣ್ಣವಾಗಿ ಬಳಕೆ ಮಾಡಲಾಗುತ್ತದೆ ಇದನ್ನ ಸಾಮನ್ಯವಾಗಿ ಮೆಣಸಿನ ಹುಡಿ ಮತ್ತು ಮೆಣಸಿನ ಎಣ್ಣೆಯಲ್ಲಿ ಬಳಸುವರು. ಇದರಿಂದ ಹಲವಾರು ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನಗಳು ತಿಳಿಸಿವೆ ಅಷ್ಟೇ ಅಲ್ಲದೆ ಚರ್ಮ ಮತ್ತು ಕಣ್ಣಿನ ಕಿರಿಕಿರಿ ಉಂಟು ಮಾಡುವ ಜೊತೆಗೆ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗ ಬಹುದು
ರೋಡಮೈನ್ ನಿಷೇಧಿಸಿರುವುದು ಯಾಕೆ?
ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಐ) ಪ್ರಕಾರ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ 2011 ರಲ್ಲಿ ಇರುವ ಬಣ್ಣಗಳನ್ನು ಮಾತ್ರ ಆಹಾರದಲ್ಲಿ ಬಳಕೆ ಮಾಡಬಹುದು. ಬೇರೆ ಬಣ್ಣಗಳನ್ನು ಬಳಕೆ ಮಾಡುವಂತಿಲ್ಲ. ಇಂತಹ ಕೆಲವು ಬಣ್ಣಗಳಿಗೆ ಎಫ್‌ಎಸ್‌ಎಸ್ ಐ ಅನುಮತಿ ನೀಡಿದೆ.
ಅವುಗಳು ಈ ರೀತಿಯಲ್ಲಿ ಇವೆ.
ಕೆಂಪು: ಪೊನ್ನೆಯು 4R, ಕಾರ್ಮೋಸಿನ್, ಎರಿಥೋಸಿನ್
• ಹಳದಿ: ಟಾಟ್ರ್ರಾಜೈನ್, ಸನ್ಸೆಟ್ ಯಲ್ಲೊ ಎಸ್ಸಿಎಫ್
ನೀಲಿ: ಇಂಡಿಗೋ ಕಾರ್ಮೈನ್, ಬ್ರಿಲಿಯಂಟ್ ಬ್ಲೂ ಎಫ್‌ಸಿಎಫ್
• ಹಸಿರು: ಫಾಸ್ಟ್ ಗ್ರೀನ್ ಎಫ್ ಸಿಎಫ್
ರೊಡಮೈನ್ ಆಹಾರದಲ್ಲಿ ಇದೆ ಎನ್ನುವುದನ್ನು ತಿಳಿಯುವುದು ಹೇಗೆ?
ಮೆಣಸಿನ ಹುಡಿಯಲ್ಲಿ ರೊಡಮೈನ್ ಪತ್ತೆ
. ಎರಡು ಗ್ರಾಂನಷ್ಟು ಮೆಣಸಿನ ಹುಡಿಯನ್ನು ಟೆಸ್ಟ್ ಟ್ಯೂಬ್ ನಲ್ಲಿ ತೆಗೆದುಕೊಳ್ಳಿ.
. ಇದಕ್ಕೆ ೫ ಮಿ.ಲೀ ಅಸಿಟೊನ್ ಹಾಕಿ
ಈಗ ಅಸಿಟೊನ್ ಪದರದ ಬಣ್ಣ ಗಮನಿಸಿ
ಕೆಂಪು ಬಣ್ಣವು ಪದರದಲ್ಲಿ ಕಾಣಿಸಿಕೊಂಡರೆ ಆಗ ಇದರಲ್ಲಿ ರೊಡಮೈನ್ ಬಿ ಇದೆ ಎಂದು ಹೇಳಬಹುದು.
ಹೊರಗಡೆಯ ತಿಂಡಿ ತಿನ್ನುವಾಗ ಎಚ್ಚರವಿರಲ್ಲಿ