ಚಿಕ್ಕ ವಯಸ್ಸಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಪ್ರಪಂಚದ ಚಿಕ್ಕ ಸರ್ಜನ್ ಎಂಬ ಕರೆಸಿಕೊಂಡ ಪಾತ್ರನಾದ ಅಕ್ರಿತ್ ಪ್ರಾಣ್ ಜಸ್ವಾಲ್ ಬಗ್ಗೆ ನಿಮಗೆ ಗೊತ್ತಾ
ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಮಾಡಲು ಅಸಾಧ್ಯವಾದ ಸಾಧನೆ ಮಾಡಿ ತೋರಿಸಿದ ಅಕ್ರಿತ್ ಪ್ರಾಣ್ ಜಸ್ವಾಲ್
ತನ್ನ ಏಳನೇ ವಯಸ್ಸಿಗೆ ನುರಿತ ವೈದ್ಯರಂತೆ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ವಿಶ್ವದ ಅತ್ಯಂತ ಕಿರಿಯ ಸರ್ಜನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ವಿಶ್ವದ ಅತ್ಯಂತ ಚಿಕ್ಕ ವೈದ್ಯರ ಬಗ್ಗೆ ವಿವರ ಇಲ್ಲಿದೆ .
ಏಳೆಂಟು ವರ್ಷದ ಮಕ್ಕಳು ಸಾಮಾನ್ಯವಾಗಿ ಆಟವಾಡುತ್ತಾ ಮೋಜು ಮಾಡುತ್ತಾ ಮತ್ತು ತರ್ಲೆ ಕೆಲಸ ಮಾಡಿದ್ದಕ್ಕಾಗಿ ಹೋಮ್ ವರ್ಕ್ ಮಾಡದಿದ್ದಕ್ಕಾಗಿ ಅಮ್ಮನ ಕೈ ಯಿಂದ ಪೆಟು ತಿನ್ನುತ್ತಾ ತಮ್ಮದೇ ಲೋಕದಲ್ಲಿ ತೇಲಾಡುತ್ತಾ ಸಮಯವನ್ನು ಕಳೆಯುತ್ತಿರುತ್ತಾರೆ. ಹೆಚ್ಚೆಂದರೆ ಡಾನ್ಸ್, ಸಂಗೀತ, ಚಿತ್ರಕಲೆ ಇತ್ಯಾದಿ ತಮ್ಮ ತಮ್ಮ ಪ್ರತಿಭೆಗಳನ್ನು ತೋರ್ಪಡಿಸುತ್ತಿರುತ್ತಾರೆ.
ಆದರೆ ಅಕ್ರಿತ್ ಪ್ರಾಣ್ ಜಸ್ವಾಲ್ ಎಂಬವರು ತನ್ನ ಏಳನೇ ವಯಸ್ಸಿಗೆ ನುರಿತ ವೈದ್ಯರಂತೆ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ವಿಶ್ವದ ಅತ್ಯಂತ ಕಿರಿಯ ಸರ್ಜನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಅರೇ ಇದೇನಪ್ಪಾ ಇಷ್ಟು ಸಣ್ಣ ವಯಸ್ಸಿಗೆ ಮಕ್ಕಳಿಗೆ ಓದಿದ್ದೇ ನೆನಪಿರಲ್ಲ, ಅಂತದ್ರಲ್ಲಿ ಈ ಹುಡುಗ ಇಷ್ಟು ಸಣ್ಣ ಪ್ರಾಯದಲ್ಲಿ ಹೇಗೆ ಸರ್ಜನ್ ಆಗೋಕೆ ಸಾಧ್ಯವಾಯಿತು ಅಂತ ಯೋಚನೆ ಮಾಡ್ತಿದ್ದೀರಾ
ಬಲು ಜೀನಿಯಸ್ ಅಂತೆ ಅಕ್ರಿತ್:
ಹಿಮಾಚಲ ಪ್ರದೇಶದ ಅಕ್ರಿತ್ ಪ್ರಾಣ್ ಜಸ್ವಾಲ್ ತನ್ನ 7 ನೇ ವಯಸ್ಸಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಮೂಲಕ ವಿಶ್ವದ ಅತ್ಯಂತ ಕಿರಿಯ ಸಜರ್ನ್ ಎಂಬ ಹೆಗ್ಗಳಿಕೆಗೆ ಪಾತ್ರನಾದ ಪೋರ. ಅನೇಕ ವರದಿಗಳ ಪ್ರಕಾರ 10 ತಿಂಗಳ ಮಗುವಾಗಿದ್ದಾಗಲೇ ಮಾತನಾಡುವುದನ್ನು ಮತ್ತು ನಡೆದಾಡುವುದನ್ನು ಕಲಿತ ಅಕ್ರಿತ್ ತನ್ನ ಎರಡನೇ ವಯಸ್ಸಿಗೆ ಓದಲು ಮತ್ತು ಬರೆಯುವುದನ್ನು ಸಹ ಕಲಿತಿದ್ದರಂತೆ. ಮೊದಲಿನಿಂದಲೂ ವಿಜ್ಞಾನ ಮತ್ತು ಅಂಗರಚನಾಶಾಸ್ತ್ರ ವಿಭಾಗದಲ್ಲಿ ಆಸಕ್ತಿಯನ್ನು ಹೊಂದಿದ್ದ ಅಕ್ರಿತ್ ಅವರ ಬುದ್ದಿವಂತಿಕೆಯನ್ನು ಕಂಡು ಅಲ್ಲಿನ ಸ್ಥಳೀಯ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಸರ್ಜರಿಯ ಪ್ರಕ್ರಿಯೆಗಳನ್ನು ನೋಡಲು ಅಕ್ರಿತ್ ಅವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದರಂತೆ.
ತನ್ನ ಎಳನೇ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಜಗತ್ತಿನ ಗಮನ ಸೆಳೆದ
ನವೆಂಬರ್ 19, 2000 ರಂದು ಅಚಾನಕ್ಕಾಗಿ ಎಂಟು ವರ್ಷದ ಬಾಲಕಿಯೊಬ್ಬಳ ಕೈ ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಸಂದರ್ಭದಲ್ಲಿ ಅಕ್ರಿತ್ ಆ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಸಖತ್ ಸುದ್ದಿಯಾಗಿದ್ದರು. ಶಸ್ತ್ರಚಿಕಿತ್ಸೆ ಪ್ರಕ್ರಿಯೆ ವಿಡಿಯೋವನ್ನು ಅಕ್ರಿತ್ ತಂದೆ ಆಸ್ಟೈನ್ ಅಲ್ಲಿ ಹಂಚಿಕೊಂಡಿದ್ದರು.
ಆ ಸಮಯದಲ್ಲಿ ಈ ವಿಡಿಯೋ ಇಡೀ ವಿಶ್ವದ ಗಮನ ಸಳೆದಿತ್ತು. ಇದಾದ ನಾಲ್ಕು ವರ್ಷಗಳ ಬಳಿಕ ಅಕ್ರಿತ್ ತನ್ನ 11 ನೇ ವಯಸ್ಸಿನಲ್ಲಿ ಪಂಜಾಬ್ ವಿಶ್ವವಿದ್ಯಾಲಯಕ್ಕೆ ಪ್ರವೇಶವನ್ನು ಪಡೆಯುವ ಮೂಲಕ ಹೊಸ ದಾಖಲೆಯನ್ನು ಸಹ ಬರೆದರು.
ಅಕ್ರಿತ್ 13 ನೇ ವಯಸ್ಸಿನಲ್ಲಿ ಐಕ್ಯೂ ಪರೀಕ್ಷೆಗೂ ಕೂಡಾ ಒಳಗಾಗಿದ್ದರು. ಮತ್ತು ಈ ಪರೀಕ್ಷೆಯಲ್ಲಿ ಇವರ ಐಕ್ಯೂ ಮಟ್ಟವು 146 ರಷ್ಟಿದೆ ಎಂಬುದು ತಿಳಿದು ಬಂದಿದೆ. ಹೀಗೆ ಸಣ್ಣ ವಯಸ್ಸಿನಲ್ಲಿಯೇ ಅಸಾಧಾರಣ ಬುದ್ಧಿಮಟ್ಟವನ್ನು ಹೊಂದಿದ್ದ ಅಕ್ರಿತ್ ಅವರನ್ನು ಭಾರತದ ಅತ್ಯಂತ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ
ಬಾಲ್ಯದಿಂದಲೂ ತನ್ನ ಅಸಾಧಾರಣ ಪ್ರತಿಭೆಯಿಂದ ಗುರುತಿಸಿಕೊಂಡಿದ್ದ ಅಕ್ರಿತ್ ತನ್ನ 17 ನೇ ವಯಸ್ಸಿನಲ್ಲಿ ಕಾನ್ಸುರದ ಪ್ರತಿಷ್ಠಿತ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಸ್ತುತ 31 ರ ಹರೆಯದ ಅಕ್ರಿತ್ ಕ್ಯಾನ್ಸರ್ ರೋಗಕ್ಕೆ ಔಷಧಿಯನ್ನು ಕಂಡು ಹಿಡಿಯುವ ಸಂಶೋಧನೆಯನ್ನು ಮಾಡುತ್ತಿದ್ದಾರೆ