ಸೋನು ಗೌಡ ಬಂಧನ
ಬಿಗ್ ಬಾಸ್ ಕನ್ನಡ ಒಟಿಟಿ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರು ಸೇವಂತಿ ಎನ್ನುವ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ವಿಚಾರ ಗೊತ್ತಿದೆ ಇದರ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಸೋನು ಗೌಡ ವಿರುದ್ಧ ದೂರ ದಾಖಲಾಗಿದೆ.
ಉತ್ತರಕರ್ನಾಟಕದ 8 ವರ್ಷದ ಮಗುವನ್ನ ಸೋನು ಗೌಡ ದತ್ತು ತೆಗೆದುಕೊಂಡಿದ್ದು, ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳುವಂತಿಲ್ಲ. ಆದರೆ ಸೋನುಗೌಡ ವಿಡಿಯೊದಲ್ಲಿ ಮಗುವಿನ ಮಾಹಿತಿ ಹಂಚಿಕೊಂಡಿದ್ದರು. ಈಗ ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದಾರೆ. ಜೆಜೆ ಕಾಯ್ದೆ ಅಡಿಯಲ್ಲಿ ಸೋನು ಗೌಡ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಸೋನು ಗೌಡ ಅವರು ಸೇವಂತಿ ಎನ್ನುವ ಹುಡುಗಿಗೆ ಮನೆಯಲ್ಲಿ ಊಟ ಹಾಕಿಸೋದು, ಮೂಗು ಸುಚ್ಚಿಸಿ ಮೂಗುತಿ ಹಾಕೋದು, ಊಟ ಮಾಡಿಸುವ ವಿಡಿಯೊ ಮಾಡಿ, ಅದನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. "ಮನೆಯ ಸುತ್ತ ಇರುವ ನಾಯಿಗಳಿಗೆ ಬಿಸ್ಕಟ್ ಹಾಕುವಾಗ ನನಗೆ ಸೇವಂತಿ ಎನ್ನುವ 7 ವರ್ಷದ ಮಗುವಿನ ಪರಿಚಯ ಆಯ್ತು ಎಂದು ಸೋನು ಹೇಳಿಕೊಂಡಿದ್ದರು. ಮಾತ್ರವಲ್ಲ ಈ ಮುಂಚೆ ಸೇವಂತಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದರೆ ಅವರ ತಾಯಿ ಒಪ್ಪಿಲ್ಲ. ಬಳಿಕ ಕಾನೂನ ಪ್ರಕಾರ ಸೇವಂತಿಯನ್ನು ಪಡೆದೆ. ಅದಕ್ಕೆ 3 ತಿಂಗಳುಗಳೇ ತೆಗೆದುಕೊಂಡಿದೆ. ಬಡ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದೀನಿ ಅಂತ ಅಂದ್ರೆ ಮೆಚ್ಚುಗೆ ಸೂಚಿಸಿ, ಇಲ್ಲ ಅಂದ್ರೆ ಸುಮ್ಮನೆ ಇರಿ. ನೆಗೆಟಿವ್ ಕಮೆಂಟ್ ಮಾಡುವರಿಗೆ ನಾನು ಸೈಬರ್ ಕ್ರೈಂ ಕೊಡ್ತೀನಿ ಎಂದು ಸೋನು ಈ ಹಿಂದೆ ವಿಡಿಯೊ ಮೂಲಕ ಹೇಳಿಕೊಂಡಿದ್ದರು.
ಮಗು ದತ್ತು ಸಂಬಂಧ ಸೋನು ಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ದೂರು ದಾಖಲಾಗಿತ್ತು. ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ತಮ್ಮ ಫೋಟೊ, ರೀಲ್ಸ್, ವಿಡಿಯೊ ಮೂಲಕ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ.