-->
ಬೆವರಿನ ದುರ್ವಾಸನೆಯಿಂದ ದೂರ ಆಗೋದು ಹೇಗೆ

ಬೆವರಿನ ದುರ್ವಾಸನೆಯಿಂದ ದೂರ ಆಗೋದು ಹೇಗೆ



ಈ ಬೇಸಿಗೆ ಕಾಲದಲ್ಲಿ ಬೆವರುವಿಕೆಯ ಕಾರಣದಿಂದ ದುರ್ವಾಸನೆ ಸಮಸ್ಯೆಯನ್ನು ಸಾಮಾನ್ಯವಾಗಿ ಎಲ್ಲ ಎದುರಿಸುತ್ತಿದ್ದಾರೆ. ದುರ್ವಾಸನೆಯಿಂದ ದೂರ ಮಾಡಲು ಹಲವು ಮಂದಿ ಬಾಡಿ ಸ್ನೇಗಳನ್ನು ಬಳಸುತ್ತಾರೆ.  
ನೈಸರ್ಗಿಕವಾಗಿ ದೇಹದ  ದುರ್ವಾಸನೆ ಹೋಗಲಾಡಿಸಲು ಈ ಟಿಪ್ಸ್ ಫಾಲೋ ಮಾಡಿ.
ಟೀಟ್ರೇ ಆಯಿಲ್:
ಸಮಯಂ ವರದಿ ಪ್ರಕಾರ, ಎರಡು ಟೀ ಸ್ಪೂನ್ ಟೀ ಟೀ ಆಯಿಲ್ ಅನ್ನು ತೆಗೆದುಕೊಳ್ಳಿ. ಅದಕ್ಕೆ ಸಮಾನ ಪ್ರಮಾಣದ ನೀರನ್ನು ಬೆರೆಸಿ. ಬೆವರು ಇರುವ ಜಾಗದಲ್ಲಿ ಹಚ್ಚಿಕೊಳ್ಳಿ. ಟೀ ಟ್ರೇ ಎಣ್ಣೆಯ ನೈಸರ್ಗಿಕ ನಂಜುನಿರೋಧಕ ಮತ್ತು ಬ್ಯಾಕ್ಟಿರಿಯಾ ವಿರೋಧಿ ಗುಣಲಕ್ಷಣಗಳು ಬೆವರುವ ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಜೋಳದ ಪಿಷ್ಟ: 
ಕಾರ್ನ್ಸಾರ್ಚ್ (ಜೋಳದ ಪಿಷ್ಟ) ಮತ್ತು ನಿಂಬೆ ರಸವು ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಎರಡು ಸ್ಪೂನ್ ನಿಂಬೆ ರಸ ಮತ್ತು ಎರಡು ಸ್ಪೂನ್ ಕಾರ್ನ್ ಪಿಷ್ಟವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಅಂಡರ್ ಆರ್ಮ್ಸ್ ಗೆ ಹಚ್ಚಿ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಸ್ವಚ್ಛಗೊಳಿಸಿ. ಇದರಿಂದ ವಾಸನೆ ಕಡಿಮೆಯಾಗುತ್ತದೆ.
ಟೊಮೆಟೋ ರಸ: ಸ್ನಾನದ ನೀರಿಗೆ ತಾಜಾ ಟೊಮೆಟೊ ರಸವನ್ನು ಸೇರಿಸಿ. ಈ ನೀರಿನಿಂದ ಸ್ನಾನ ಮಾಡಿ ಅಥವಾ ಟೊಮೆಟೊ ರಸವನ್ನು ಟಬ್ ನೀರಿಗೆ ಸುರಿದು, ಅದರಲ್ಲಿ 20 ನಿಮಿಷಗಳ ಕಾಲ ಕುಳಿತುಕೊಳ್ಳಿ. ಇದು ವಾಸನೆಯನ್ನು ಉಂಟುಮಾಡುವ ಬ್ಯಾಕ್ಟಿರಿಯಾವನ್ನು ಕಡಿಮೆ ಮಾಡುತ್ತದೆ. ತ್ವಚೆಯ ಆರೋಗ್ಯಕ್ಕೂ 
ಹಸಿರು ಚಹಾ: 
ನೀರನ್ನು ಚೆನ್ನಾಗಿ ಕುದಿಸಿ, ಅದರಲ್ಲಿ ಕೆಲವು ಹಸಿರು ಚಹಾ (ಗ್ರೀನ್ ಟೀ) ಎಲೆಗಳನ್ನು ಸೇರಿಸಿ. 5 ನಿಮಿಷಗಳ ಕಾಲ ಹಾಗೆಯೇ ತಣ್ಣಗಾಗಲು ಬಿಡಿ. ನಂತರ ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಅದನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ. ಗ್ರೀನ್ ಟೀ ಚರ್ಮವನ್ನು ಒಣಗಿಸುತ್ತದೆ ಮತ್ತು ವಾಸನೆಯನ್ನು ನಿವಾರಿಸುತ್ತದೆ. ಹೀಗೆ ವಾರಕ್ಕೆ ಎರಡು ಬಾರಿ ಮಾಡಿ.
ಅಡಿಗೆ ಸೋಡಾ:
 ಅದೇ ರೀತಿ ಬೇಕಿಂಗ್ ಸೋಡಾ ಕೂಡ ಬೆವರಿನ ವಾಸನೆಯನ್ನು ಹೋಗಲಾಡಿಸುತ್ತದೆ. ಇದಕ್ಕಾಗಿ ಎರಡು ಚಮಚ ಅಡಿಗೆ ಸೋಡಾವನ್ನು ಒಂದು ಕಪ್ ನೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸ್ಟೇ ಬಾಟಲಿಗೆ ಹಾಕಿ, ಕಂಕುಳಗೆ ಪ್ರತಿದಿನ ಸ್ನೇ ಮಾಡಿ. ಇದು ಒಣಗಿದ ನಂತರ ಬಟ್ಟೆಗಳನ್ನು ಧರಿಸಿ.
ಆಪಲ್ ಸೈಡರ್ ವಿನೆಗರ್:
 ನೀವು ತುಂಬಾ ಬೆವರುತ್ತಿದ್ದರೆ, ಒಂದು ಟೀ ಸ್ಪೂನ್ ಆಪಲ್ ಸೈಡರ್ ವಿನೆಗರ್ ಅನ್ನು ತೆಗೆದುಕೊಂಡು ಅದೇ ಪ್ರಮಾಣದಷ್ಟು ನೀರನ್ನು ಸೇರಿಸಿ. ಹತ್ತಿ ಉಂಡೆಯನ್ನು ಅದರೊಳಗೆ ಅದ್ದಿ. ಇದನ್ನು ದೇಹಕ್ಕೆ ಹಚ್ಚಿಕೊಂಡರೆ ಪಿಎಚ್ ಬ್ಯಾಲೆನ್ಸ್ ಆಗುವುದರ ಜೊತೆಗೆ ಬ್ಯಾಕ್ಟಿರಿಯಾ ದೂರವಾಗುತ್ತದೆ. ಜೊತೆಗೆ ದುರ್ವಾಸನೆ ಕೂಡ ಬರುವುದಿಲ್ಲ

Ads on article

Advertise in articles 1

advertising articles 2

Advertise under the article