ಜಗತ್ತಿನಲ್ಲಿ ಇರುವ ಕೆಲವು ಮೂಡನಂಬಿಕೆ ಬಗ್ಗೆ ಇಲ್ಲಿ ತಿಳಿಯಿರಿ
ಮೂಡನಂಬಿಕೆ ವೈಜ್ಞಾನಿಕ ದೃಷ್ಟಿಕೋನಕ್ಕೆ ವಿರೋದ ವಾದದ್ದು ಆದರೆ ವಿಮರ್ಯಸ ಅಂದರೆ ಜನ ನಂಬಿಕೆ ಕ್ಕಿಂತ ಮೂಡ ನಂಬಿಕೆಗಳನ್ನು ನಂಬುದು ಹೆಚ್ಚು ಹಾಗೆ ಪ್ರಪಂಚದಲ್ಲಿರುವ ವಿಚಿತ್ರ ಮೂಢನಂಬಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ
ನಂಬಿಕೆ ಯಾಷ್ಟೆ ಕೆಲವರು ಮೂಡನಂಬಿಕೆಗಳನ್ನುನಂಬಿದ್ದಾರೆ. ದೇವರು, ದೆವ್ವ, ಮಂತ್ರಗಳು, ಪ್ರಕೃತಿಯ ಶಕ್ತಿಗಳು, ಪದ್ಧತಿಗಳು, ಸಂಪ್ರದಾಯಗಳು ಹೀಗೆ ಎಲ್ಲವನ್ನು ನಂಬುತ್ತಾರೆ
. ನಮ್ಮ ಅಜ್ಜ ಅಜ್ಜಿಯರು ಅನುಸರಿಸಿದ ಕೆಲವು ಸಂಪ್ರದಾಯಗಳನ್ನು ನಾವು ಅನುಸರಿಸುತ್ತೇವೆ. ಕೆಲವರು ಅವುಗಳನ್ನು ಹುಚ್ಚು ನಂಬಿಕೆಗಳು ಎಂದು ಕರೆಯುತ್ತಾರೆ ಮತ್ತು `ಇತರರು ಅವುಗಳನ್ನು ಅನುಸರಿಸದಿದ್ದರೆ ಅಪಾಯಕಾರಿ ಎನ್ನುವರು.
ಲ್ಯಾಟಿನ್ ಅಮೇರಿಕನ್ ದೇಶಗಳು ಮಂಗಳವಾರ ಮದುವೆಯಾಗುವುದಿಲ್ಲ. ಅಂದು ಮದುವೆ ಮಾಡಿದರೆ ದಾಂಪತ್ಯ ಹಾಳಾಗುತ್ತದೆ ಎಂಬ ನಂಬಿಕೆ ಇದೆ ಅದರಂತೆ ಮಂಗಳವಾರದಂದು ಜನ ಮದುವೆಗೂ ಹೋಗುವುದಿಲ್ಲ.
ಜಪಾನ್‌ನಲ್ಲಿ ಯಾರೂ ಉತ್ತರ ಅಥವಾ ಪಶ್ಚಿಮಕ್ಕೆ ಮುಖ ಮಾಡಿ ಮಲಗುವುದಿಲ್ಲ. ಏಕೆಂದರೆ ಜಪಾನ್‌ನಲ್ಲಿ ಸತ್ತವರ ತಲೆಯನ್ನು ಉತ್ತರಾಭಿಮುಖವಾಗಿ ಇರಿಸಲಾಗುತ್ತದೆ. ಆಫ್ರಿಕಾದಲ್ಲಿ ಇದನ್ನು ಪಶ್ಚಿಮಾಭಿಮುಖವಾಗಿ ಇರಿಸಲಾಗಿದೆ. ಅದಕ್ಕಾಗಿಯೇ ಜಪಾನಿಯರು ಹಾಗೆ ಮಲಗುವುದಿಲ್ ಇದು ಭಾರತದಲ್ಲಿಯೂ ಈರೀತಿಯ ನಂಬಿಕೆ ಉಂಟು
ಮನೆಗಳು, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಶಿಳ್ಳೆ ಹೊಡೆಯುವುದು ಲಿಥುವೇನಿಯಾದಲ್ಲಿ ಸಮಸ್ಯೆಯಾಗಿದೆ. ಹಾಗೆ ಮಾಡಿದರೆ ರಾಕ್ಷಸರನ್ನು ಕರೆಸಿದಂತೆ ಆಗುತ್ತದೆ, ಬರುವ ಪಿಶಾಚಿಗಳು ಶಿಳ್ಳೆ ಹೊಡೆಯುವವರ ಪಕ್ಕದಲ್ಲೇ ಇರುತ್ತವೆ ಎಂಬುದು ಮೂಢ ನಂಬಿಕೆ.
ಜರ್ಮನಿಯಲ್ಲಿ ಮೇಣದಬತ್ತಿಗಳೊಂದಿಗೆ ಸಿಗರೇಟುಗಳನ್ನು ಹಚ್ಚ ಬಾರದು ಇದರಿಂದ ಆಯಸ್ಸು ಕಡಿಮೆ ಆಗುತ್ತೆ ಎಂಬ ನಂಬಿಕೆಯಿದ್ದೆ.
ಆಫ್ರಿಕನ್ ದೇಶವಾದ ರವಾಂಡಾದಲ್ಲಿ, ಮಹಿಳೆಯರು ಆಡಿನ ಮಾಂಸವನ್ನು ತಿನ್ನದಿರುವುದು ಉತ್ತಮ. ಅತಿಯಾಗಿ ಆಡಿನ ಮಾಂಸ ತಿಂದರೆ ಮುಖದಲ್ಲಿ ಕೂದಲು ಬೆಳೆಯುತ್ತದೆ ಎಂಬುದು ಮೂಢನಂಬಿಕೆ.
ಮನೆಯಿಂದ ಹೊರಗೆ ಹೋಗುವಾಗ ಮಳೆ ಬಂದ್ರೆ ನಾವು ಛತ್ರಿ ತೆಗೆದುಕೊಂಡು ಹೋಗುತ್ತೇವೆ. ಆದರೆ ಮನೆಯಲ್ಲಿದ್ದಾಗ ಕೊಡೆ ತೆರೆದರೆ ದುರಾದೃಷ್ಟ ಕಾಡುತ್ತದೆ.ಏಣಿಯ ಕೆಳಗಿನಿಂದ ಹೋಗುವುದು ಒಳ್ಳೆಯದಲ್ಲ ಎಂಬ ನಂಬಿಕೆಯೂ ಇದೆ. ಮಧ್ಯಯುಗದಲ್ಲಿ, ಜನರನ್ನು ಏಣಿಗಳಿಂದ ಗಲ್ಲಿಗೇರಿಸಲಾಯಿತು. ಆದ್ದರಿಂದ, ಅನೇಕ ದೇಶಗಳಲ್ಲಿ ಗೋಡೆಗೆ ಜೋಡಿಸಲಾದ ಏಣಿಯ ಕೆಳಗಿನಿಂದ ಯಾರೂ ಏರುವುದಿಲ್ಲ.
ಅಜರ್‌ಬೈಜಾನ್‌ನಲ್ಲಿ ಆಹಾರದ ಮೇಲೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸಿಂಪಡಿಸುವುದಿಲ್ಲ. ಅವುಗಳನ್ನು ಎರಚಿದರೆ ಗಾಳಿಗೆ ಚೆಲ್ಲಾಪಿಲ್ಲಿಯಾಗಿ ಹಾಳಾಗಿ ಹೋಗುತ್ತವೆ ಎಂಬ ಕಾರಣಕ್ಕೆ ಜನ ಹಾಗೆ ಮಾಡುವುದಿಲ್ಲ.ದಕ್ಷಿಣ ಕೊರಿಯಾದಲ್ಲಿ ಎಲ್ಲಿಯಾದರೂ ಕುಳಿತು ನಿಮ್ಮ ಕಾಲುಗಳನ್ನು ಅಲ್ಲಾಡಿಸುವಂತಿಲ್ಲ. ಹಾಗೆ ಮಾಡಿದ್ದರೆ ಸಂಪತ್ತು ಕೈ ತಪ್ಪಿ ಹೋಗುತ್ತೆ ಎಂಬ ನಂಬಿಕೆಯಿದೆ
ಇವುಗಳು ಕೆಲವು ಅಷ್ಟೇ ಪ್ರದೇಶದಿಂದ ಪ್ರದೇಶಕ್ಕೆ ಹೋದಂತೆ ನಂಬಿಕೆಯ ಜೊತೆ ಮೂಡನಂಬಿಕೆಗಳು ಬದಲಾಗುತ್ತದೆ