ಹೋಳಿ ಹಬ್ಬದ ಬಗ್ಗೆ ನಿಮಗೆಷ್ಟು
ಭಾರತೀಯರಾದ ನಾವು ಹತ್ತೂ ಹಲವು ಹಬ್ಬಗಳನ್ನು ಆಚರಿಸುತ್ತಾರೆ. ಅದರಲಿ ಬಣ್ಣಗಳ ಹಬ್ಬ ಹೋಳಿ ಸಹ ಪ್ರಮುಖವಾದ ಹಬ್ಬ. ಇದು ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಅತಿ ಹೆಚ್ಚು ಆಚರಣೆಯಲ್ಲಿ ಇರುವ ಹಬ್ಬವಾಗಿದೆ.
ಈ ಹಬ್ಬವನ್ನು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯೆಂದು ಆಚರಿಸಲಾಗುತ್ತದೆ. ಹೋಳಿ ಹಬ್ಬಕ್ಕೆ ಕಾಮನ ಹಬ್ಬ ಎಂದು ಸಹ ಕರೆಯುತ್ತಾರೆ.
ಇಂತಹ ಹೋಳಿ ಆಚರಣೆ ಭಾರತ ಮಾತ್ರವಲ್ಲದೆ, ಜಗತ್ತಿನ ಹಲವು ರಾಷ್ಟ್ರಗಳಲ್ಲೂ ಜನಪ್ರಿಯಗೊಳ್ಳುತ್ತಿದೆ.
ಕಾಮನ ಹಬ್ಬದ ಬಗ್ಗೆ ಪುರಾಣದಲ್ಲಿ ಇರುವ ಉಲ್ಲೇಖಗಳು ಏನು..?
ಭಾರತದಲ್ಲಿ ಹತ್ತೂ ಹಲವು ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಅದಕ್ಕೆಲ್ಲದ ತನ್ನದೇ ಆದ ಪುರಾಣ ಪ್ರಸಿದ್ದವಾದ ಕಥೆಗಳೂ ಇವೇ ಹಾಗೇ ಈ ಹೋಳಿ ಹಬ್ಬಕ್ಕೂ ಸಹ ಪುರಾಣ ಕಥೆಗಳು ಇವೆ .
ಪುರಾಣದ ಒಂದು ಉಲ್ಲೇಖದ ಪ್ರಕಾರ ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದಿಂದ ಸೊಕ್ಕಿ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಸಂಹಾರಕ್ಕೆ ಕಾರಣವಾಯಿತು. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ಸತಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಪಾರ್ವತಿ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ಆಗ ದೇವತೆಗಳು ಕಾಮ ಅಂದರೆ ಮನ್ಮಥನ ಮೊರೆ ಹೋದರು. ತನ್ನ ಸಾವು ಖಚಿತ ಎಂದು ಅರಿವಿದ್ದೂ, ಲೋಕಕಲ್ಯಾಣಕ್ಕಾಗಿ. ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಕಣ್ಣು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನ ಪತ್ನಿ ರತಿದೇವಿಯು ಶಿವನಲ್ಲಿ ಗಂಡನನ್ನು ಉಳಿಸುವಂತೆ ಕೇಳಿದಳು ಅಗ ಶಿವ ಕಾಮನು ದೇಹ ರಹಿತ ವಾಗಿಯೆ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನು ಕಾಮನು ಬಸ್ಮಾ ಆಗಿದ್ದರಿಂದ ಈ ದಿನವನ್ನು ಕಾಮನ ಹಬ್ಬ ಏನುವರು ಎಂದು ಪುರಾಣ ಉಲ್ಲೇಖಯಿದ್ದೆ.
ನಾರಾಯಣ ಪುರಾಣದ ಪ್ರಕಾರ ಹರಿಯ ಶತ್ರು ಅದ ಹಿರಣ್ಯಕಶ್ಯನು ತನ ಮಗ ಹರಿ ಭಕ್ತ ಎಂದು ಕೊಲ್ಲಲು ಮುಂದಾಗುತ್ತಾನೆ ಅಗ ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿರುವ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅಜ್ಞೆಯಂತೆ ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆಗ ವಸ್ತ್ರವು ಹಾರಿಹೋಗುತ್ತದೆ, ಹೋಳಿಕಾಳ ದಹನವಾಗುತ್ತದೆ. ವಿಷ್ಣು ಭಕ್ತಾ ಪ್ರಹ್ಲಾದ ಬದುಕುಳಿಯುತ್ತಾನೆ. ಹಾಗಾಗಿ ಈ ದಿನವನ್ನು ಹೋಳಿ ಹಬ್ಬ ಎಂದು ಆಚರಿಸುತ್ತಾರೆ ಎಂದು ಈ ಪುರಾಣ ತಿಳಿಸುತ್ತದೆ.
ಅಚರಣೆ.
ಒಂದೊಂದು ಪ್ರದೇಶದಲ್ಲಿ ಒಂದೊಂದು ತರ ಈ ಕಾಮನ ಹಬ್ಬವನ್ನು ಆಚರಿಸಲಾಗುತ್ತದೆ.
ದೆಹಲಿಯ ಸುತ್ತಮುತ್ತ ಈ ದಿನದಂದು ಹತ್ತು ತಲೆಯ ರಾವಣನ್ನೂ ಬಿದಿರಿನಿಂದ ತಯಾರಿಸಿ, ಅದಕ್ಕೆ ಹಳೇ ಬಟ್ಟೆಗಳನ್ನೇಲ್ಲ ಧರಿಸಿ ಗಣ್ಯರನ್ನೇಲ್ಲ ಕರೆದು,ಸುಡುವುದು ವಾಡಿಕೆ.
ಮತ್ತೆ ಸಾಮನ್ಯವಾಗಿ ಎಲ್ಲ ಕಡೆ ಬಣ್ಣಗಳಿಂದ ರಂಗಿನ ಆಟವನ್ನ ಯಾವುದೇ ಬೇಧ ಇಲ್ಲದೇ ಒಟ್ಟಿಗೆ ಆಡುತ್ತಾರೆ.
ಹೀಗೆ ನಾನಾ ರೀತಿಯಲ್ಲಿ ಈ ಕಾಮನ ಹಬ್ಬ ಆಚರಿಸಲಾಗುತ್ತದೆ.
ಕಥೆ ಪುರಾಣ ಏನೇ ಇರಲಿ ಕೆಟ್ಟದು ದಹನವಾಗಿ ಒಳ್ಳೆ ಅಂಶಗಳು ಉಳಿಯುವುದು ಎಂದು ಈ ಸಾರುತ್ತದೆ ಈ ಹೋಳಿ ಹಬ್ಬ.
ಜನರೂ ತಮ್ಮ ಕೆಲಸದ ಜಂಜಾಟವನ್ನು ಬಿಟ್ಟು ಎಲ್ಲ ಒಟ್ಟಿಗೆ ಸೇರಿ ಸಮಯ ಕಳೆಯುವಂತೆ ಮಾಡುತ್ತದೆ ಇಂಥಹ ಹತ್ತು