-->
ರಾತ್ರಿ ಲೇಟ್ ಆಗಿ ಮಲಗಿದರೆ ಆರೋಗ್ಯದಲ್ಲಿ ಆಗುವ ಏರುಪೇರುಗಳ ಬಗ್ಗೆ ಇಲ್ಲಿದೆ ವಿವರ

ರಾತ್ರಿ ಲೇಟ್ ಆಗಿ ಮಲಗಿದರೆ ಆರೋಗ್ಯದಲ್ಲಿ ಆಗುವ ಏರುಪೇರುಗಳ ಬಗ್ಗೆ ಇಲ್ಲಿದೆ ವಿವರ



ಒತ್ತಡದ ಜೀವನದಲ್ಲಿ ಜನರು ಆರೋಗ್ಯದ ಕಡೆ ಗಮನ ಹರಿಸುವುದನ್ನು ಕಡಿಮೆ ಮಾಡಿದ್ದಾರೆ . ಕಚೇರಿಯಲ್ಲಿ ಕೆಲಸ ಮಾಡುವುದಲ್ಲದೇ, ಮತ್ತೆ ಮನೆಗೆ ಬಂದು ರಾತ್ರಿಯಿಡೀ ನಿದ್ದೆ ಬಿಟ್ಟು ವರ್ಕ್ ಮಾಡುವುದು . ಮತ್ತೆ ಕೆಲವರಿಗೆ ಬೇಗ ಮಲಗಿದರೂ ನಿದ್ದೆಯೇ ಬರದ್ದಿರುವುದು 
ಏನೇ ಇರಲಿ  ಈ ಎಲ್ಲ ಕಾರಣಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಎಂದು ತಿಳಿಯುವುದು ಅಗತ್ಯ  
ಮನುಷ್ಯನ ಜೀವನದಲ್ಲಿ ನಿದ್ದೆ ತುಂಬಾ ಅಗತ್ಯ  ಮನುಷ್ಯರಿಗೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆಯಾದರೂ ಬೇಕು. ಬೇಕಾದರೆ ನೀವೇ ಒಂದು ಬಾರಿ ಗಮನಿಸಿ ನೋಡಿ. ನಿದ್ದೆ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಬೇಗ ಪರಿಣಾಮ ಬೀರುತ್ತದೆ. ತಡವಾಗಿ ನಿದ್ದೆ ಮಾಡಿದರೆ ಅ  ದಿನ ಪೂರ್ತಿ ಸರಿಯಾಗಿ ಇರುವುದಿಲ್ಲ ಏನಾಗುತ್ತದೆ ಎಂಬುದನ್ನು ವಿವರವಾಗಿ ಹೈದರಾಬಾದ್‌ನ ಹಿರಿಯ ಸಲಹೆಗಾರ ವೈದ್ಯ ಡಾ. ದಿಲೀಪ್ ಗುಡೆ ತಿಳಿಸಿದ್ದಾರೆ.
ಸಿರ್ಕಾಡಿಯನ್ ರಿದಮ್/ಲಯ ತಪ್ಪುತ್ತದೆ : ಇಡೀ ದಿನದಲ್ಲಿ ನಮ್ಮ ದೇಹದಲ್ಲಾಗುವ ಬದಲಾವಣೆಗಳನ್ನು ಇದು ನಿಯಂತ್ರಿಸುವ ಸಿರ್ಕಾಡಿಯನ್ ರಿದಮ್ ನಲ್ಲಿ ಬದಲಾವಣೆ ಆಗುತ್ತದೆ.ಇದೊಂದು ದೇಹದಲ್ಲಿರುವ ನೈಸರ್ಗಿಕ ಪ್ರಕ್ರಿಯೆ.  ಇನ್ನೊಂದು ರೀತಿಯಲ್ಲಿ ಇದನ್ನು ನಮ್ಮ ದೇಹದ ಗಡಿಯಾರ ಎನ್ನಬಹುದು. ಪ್ರತಿನಿತ್ಯ ಮಧ್ಯರಾತ್ರಿಯ ನಂತರ ಮಲಗುವವರ ದೇಹದಲ್ಲಿ ಸಿರ್ಕಾಡಿಯನ್ ರಿದಮ್ ತಪ್ಪುತ್ತದೆ ಎಂದು ಡಾ.ದಿಲೀಪ್ ಗುಡೆ ಹೇಳುತ್ತಾರೆ. ಹಾರ್ಮೋನ್ ಬಿಡುಗಡೆ, ಚಯಾಪಚಯ ಮತ್ತು ದೇಹದ ಉಷ್ಣತೆಯ ನಿಯಂತ್ರಣದಂತಹ ಪ್ರಮುಖ ದೇಹದ ಕಾರ್ಯಗಳ ಮೇಲೆ ಇದು ಪರಿಣಾಮ ಬೀರುತ್ತದೆ

ಮೆದುಳಿಗೆ ತೊಂದರೆ  ಉಂಟುಮಾಡುತ್ತದೆ : 
ರಾತ್ರಿ 12 ಗಂಟೆ ಕಳೆದ ನಂತರ ನಿದ್ದೆ ಮಾಡುವುದ್ದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದರಿಂದ ಏಕಾಗ್ರತೆ, ಜ್ಞಾಪಕ ಶಕ್ತಿ ನಷ್ಟ ಮತ್ತು ಮನಸ್ಸಿನಲ್ಲಿ ಅಸುರಕ್ಷತೆಯ ಭಾವನೆ ಬರುತ್ತದೆ.

ಹಾರ್ಮೋನ್ ಬದಲಾವಣೆಗಳು:
 ಮಧ್ಯರಾತ್ರಿಯ ನಂತರ ಮಲಗುವ ಜನರಲ್ಲಿ ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳ ಮಟ್ಟ ಹೆಚ್ಚುತ್ತದೆ. ಇದು ಕೂಡ ಮಾನಸಿಕ ಆತಂಕಕ್ಕೆ ಕಾರಣವಾಗುತ್ತೆ. ಅಲ್ಲದೇ ಕೆಲವರಿಗೆ ತೂಕ ಹೆಚ್ಚಾಗುವುದೂ ಉಂಟು. ಈ ಸಮಸ್ಯೆ ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆಯಂತೆ
ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ  :
 ದೀರ್ಘಾವಧಿಯ ನಿದ್ರೆಯ ಕೊರತೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ನಾನಾ ಆರೋಗ್ಯ ಸಮಸ್ಯೆಗಳು, ಸೋಂಕುಗಳು ಹರಡುವ ಸಾಧ್ಯತೆ ಇದೆ. ನೀವು ಮಾನಸಿಕವಾಗಿ ಸ್ಟ್ರಾಂಗ್ ಆಗಿ ಇದ್ದರೂ ನಿಮ್ಮ ದೇಹ ಮಾತ್ರ ತುಂಬಾ ವೀಕ್ ಆಗುತ್ತದೆ. ಹಾಗೇ ಚಯಾಪಚಯ ಸಮಸ್ಯೆಗಳು ಎದುರಾಗುತ್ತವೆ.ಹಾಗೆ ಕಣ್ಣಿನ ಮೇಲೆ ಅತಿಯಾದ ದುಷ್ಪರಿಣಾಮ ಬೀರುತ್ತದೆ. ನಿಮಗೆ ನಿದ್ದೆ ಬೇಡ ಎನಿಸಿದರು ನಿಮ್ಮ ಕಣ್ಣಿಗೆ ಮಾತ್ರ ಇಡೀ ದಿನ ತೆರೆದಿದ್ದು ವಿಶ್ರಾಂತಿಯ ಅಗತ್ಯವಿರುತ್ತದೆ . ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುವ ಅಪಾಯವಿದೆ ಎಂದು ಹೇಳಲಾಗುತ್ತದೆ.
ಹೀಗೆ ಹಲವು ತೊಂದರೆಗಳು ದೇಹದಲ್ಲಿ ಉಂಟಾಗುತ್ತದೆ ಆದರೆ ನಮ್ಮ ಚಟುವಟಿಕೆಯಲ್ಲಿ ನಾವು ಬದಲಾವಣೆತಂದರೆ ಯಾವುದೇ ತೊಂದರೆ ಇಲ್ಲದೆ ಜೀವನ ನಡೆಸಬಹುದು 

Related Posts

Ads on article

Advertise in articles 1

advertising articles 2

Advertise under the article