ಕಾಫಿ ಕಪ್ ನಲ್ಲಿ ಇರುವ ಹಠಮಾರಿಯನ್ನು ಹೋಗಲಾಡಿಸುವುದು ಹೇಗೆ
ಕಾಫಿ ಟೀ ನ ಕಲೆಯನ್ನು ತೆಗೆಯಲು ಎಷ್ಟು ಕಷ್ಟ ಎಂದು ಸಾಮನ್ಯವಾಗಿ ಎಲ್ಲರಿಗೂ ಗೊತ್ತು ಕಾಫಿ, ಟೀ ಕೈ ಜಾರಿ ಎಲ್ಲಾದರೂ ಬಿದ್ದರೆ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ ಉಳಿದು ಬಿಡುತ್ತದೆ ಇದರ ಪರಿಣಾಮ ಯಾರಾದರೂ ಅತಿಥಿಗಳು ಬಂದಾಗ ಈ ಕಪ್ ಗಳಲ್ಲಿ ಅವರಿಗೆ ಕಾಫಿ ಕೊಡಲು ಮುಜುಗರವಾಗುತ್ತದೆ.
ಇಂಥ ಹಟಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ಟಿಪ್ಸ್.
* ಬೇಕಿಂಗ್ ಸೋಡಾ ಅಥವಾ ವಿನಿಗರ್ ಬೆರೆಸಿದ ಬಿಸಿ ನೀರಿನಲ್ಲಿ ಕಲೆಯಾಗಿರುವ ಕಪ್ ಗಳನ್ನು ನೆನೆಸಿಟ್ಟು ನಂತರ ತೊಳೆದರೆ ಕಲೆಗಳು ನಿವಾರಣೆಯಾಗುತ್ತವೆ.
* ಒದ್ದೆ ಬಟ್ಟೆಯನ್ನು ಉಪ್ಪಿನಲ್ಲಿ ಅದ್ದಿ ಕಾಫಿ ಅಥವಾ ಚಹಾ ಕಲೆಯನ್ನು ಒರೆಸಿದರೆ ಅವು ಮರೆಯಾಗುತ್ತವೆ.
* ಬಿಸಿ ನೀರಿಗೆ ಅರ್ಧ ಕಪ್ ನಿಂಬೆರಸ ಸೇರಿಸಿ ಅದರಲ್ಲಿ ಕಲೆಗಳಿರುವ ಕಪ್ ಗಳನ್ನು ಒಂದು ರಾತ್ರಿ ನೆನೆಸಿಟ್ಟು ಮರುದಿನ ತೊಳೆದರೆ ಕಲೆಗಳು ಮಾಯವಾಗುತ್ತವೆ.
ಬೇಕಿಂಗ್ ಸೋಡಾ ಮತ್ತು ನಿಂಬೆರಸ ಬೆರೆಸಿ ಕಲೆಯ ಮೇಲೆ ಹಚ್ಚಿ ಒರೆಸಿದರೂ ಈ ಕಲೆಗಳು ನಿವಾರಣೆಯಾಗುತ್ತದೆ