-->
ಬಾಳೆಹಣ್ಣಿನ ಮೂಲಕ ಇಲಿಯನ್ನು ಓಡಿಸಬಹುದು  , ಇಲಿಗೆ ಬಾಳೆಹಣ್ಣು ಮಾಡುವ ಮೋಡಿಯ ಬಗ್ಗೆ ಇಲ್ಲಿದೆ ವಿವರ

ಬಾಳೆಹಣ್ಣಿನ ಮೂಲಕ ಇಲಿಯನ್ನು ಓಡಿಸಬಹುದು , ಇಲಿಗೆ ಬಾಳೆಹಣ್ಣು ಮಾಡುವ ಮೋಡಿಯ ಬಗ್ಗೆ ಇಲ್ಲಿದೆ ವಿವರ


ಮನೆಯಲ್ಲಿ ಇರುವ ಇಲಿಗಳನ್ನು ಓಡಿಸಲು  ಇಲಿ ಪಾಷಾಣ ಸಹ ಬಳಕೆ ಮಾಡಲಾಗುತ್ತದೆ. ಆದ್ರೆ ಇಲಿಯನ್ನು ಕೊಲ್ಲದೇ ಮನೆಯಿಂದ ಹೊರ ಹಾಕಬಹುದು ಎಂದು ಅಧ್ಯಯನವೊಂದು ಹೇಳಿದೆ ಇದನ್ನು ತಿಳಿದ್ದಾರೆ ನಿಮ್ಗೆ  ಅಚ್ಚರಿ ಆಗುವುದು ಕಂಡಿತಾ 
ಬೇಸಿಗೆ ಆರಂಭವಾಗಿದ್ದು, ಮನೆಯೊಳಗೆ ಇಲಿಗಳು ಎಂಟ್ರಿ ಕೊಡುವ ಸಮಯ ಇದಾಗಿದೆ . ಸಾಧ್ಯವಾದಷ್ಟು ಇಲಿಯನ್ನು ಮನೆಯಿಂದ ಹೊರ ಹಾಕುವ ಪ್ರಯತ್ನಕ್ಕೆ ಮುಂದಾಗಬೇಕು.ಮನೆಯ ಲೈಟ್ ಆಫ್ ಆಗುತ್ತಿದ್ದಂತೆ ಇಲಿಗಳ ಓಡಾಟ ಹೆಚ್ಚಾಗುತ್ತದೆ. ಮನೆಯಲ್ಲಿನ ಆಹಾರ ಸಾಮಾಗ್ರಿಗಳನ್ನು ಸಹ ಇಲಿಗಳು ಹಾಳು ಮಾಡುತ್ತವೆ. ಮಕ್ಕಳ ಪುಸ್ತಕಗಳನ್ನು ಇಲಿಗಳು ಚೂರು ಚೂರು ಮಾಡುತ್ತವೆ ಅದಲ್ಲದೆ ರೋಗಣು ಗಳನ್ನು ಹರಡುತ್ತದೆ.
ಇಲಿ ಓಡಿಸಲು ವಿಷ ಇಟ್ಟರೆ ವಿಷ ತಿಂದ ಇಲಿ ಸತ್ತ ಮೇಲೆ ಅದನ್ನು ಹುಡುಕಿ ಹೊರಗೆ ಎಸೆಯಬೇಕಾಗುತ್ತದೆ  ಇದು ದೊಡ್ದ ಸವಾಲಿನ ಕೆಲಸ  ಅದು ಸಿಗೋವರೆಗೂ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬರುತ್ತದ
ಆದ್ದರಿಂದ ವಿಷ ಹಾಕಿ ಇಲಿಗಳನ್ನು ಕೊಲ್ಲಲು ಜನರು ಹಿಂದೇಟು ಹಾಕುತ್ತಾರೆ. 
ಇತ್ತೀಚಿನ ವರದಿಯ ಪ್ರಕಾರ ಇಲಿಗಳನ್ನು ವಿಶೇಷ ರೀತಿಯಲ್ಲಿ ಮನೆಯಿಂದ ಹೊರಗೆ ಹಾಕಬಹುದು. ಆದರೆ ಈ ವಿಧಾನ ಕೇವಲ ಗಂಡು ಇಲಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಹೆಣ್ಣು ಇಳಿಗಳಿಗೆ ಅಲ್ಲ.ಹೌದು, ಮನೆಯಲ್ಲಿ ಸೇರಿಕೊಂಡಿರುವ ಗಂಡು ಇಲಿಗಳನ್ನು ಬಾಳೆಹಣ್ಣಿನ ಮೂಲಕ ಸಾಧ್ಯ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಬಾಳೆಹಣ್ಣು ಕಂಡರೆ ಗಂಡು ಇಲಿಗಳು ಓಡಿ ಹೋಗುತ್ತವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.2022 ರಲ್ಲಿ ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯದ ಅಧ್ಯಯನವು ಗಂಡು ಇಲಿಗಳು ಬಾಳೆಹಣ್ಣಿಗೆ ಹೆದರುತ್ತವೆ ಎಂದು ಹೇಳಿದೆ. ಸಂಶೋಧನಾ ಪ್ರಬಂಧವು ಕಳೆದ ವರ್ಷ ಮೇ 20 ರಂದು ‘ಸೈನ್ಸ್ ಅಡ್ವಾನ್ಸಸ್’ ಜರ್ನಲ್‌ನಲ್ಲಿ ಪ್ರಕಟವಾಗಿತ್ತು. ಆದ್ದರಿಂದ ಗಂಡು ಇಲಿಗಳನ್ನು ಓಡಿಸಲು ಬಾಳೆಹಣ್ಣು ಬಳಕೆ ಮಾಡಬಹುದಾಗಿದೆ.ಗರ್ಭಿಣಿ ಇಲಿಗಳ ಸುತ್ತ ಇರುವ ಗಂಡು ಇಲಿಗಳಲ್ಲಿ ಒತ್ತಡದ ಹಾರ್ಮೋನುಗಳು ಏಕೆ ಹೆಚ್ಚಾಗುತ್ತವೆ ಎಂಬುದನ್ನು ವಿಶ್ಲೇಷಿಸುವಾಗ ವಿಜ್ಞಾನಿಗಳಿಗೆ ಈ ವಿಷಯ ಗೊತ್ತಾಗಿದೆ ಎಂದು ವರದಿಯಾಗಿದೆ.ಸಂದರ್ಭದಲ್ಲಿ, ಸಂಶೋಧನಾ ವರದಿಯ ಹಿರಿಯ ಲೇಖಕ ಮತ್ತು ಮೆಕ್‌ಗಿಲ್ ವಿಶ್ವವಿದ್ಯಾಲಯದ ಮನೋವಿಜ್ಞಾನದ ಪ್ರಾಧ್ಯಾಪಕ ಜೆಫ್ರಿ ಮೊಗಿಲ್, ಈ ವಿಷಯ ನಮಗೆ ಆಶ್ಚರ್ಯಕರವಾಗಿತ್ತು. ಏಕೆಂದರೆ ಇದು ನಮ್ಮ ಸಂಶೋಧನೆಯ ಗುರಿ ಇದಾಗಿರಲಿಲ್ಲ. ಆದರೆ ನಾವು ಇದನ್ನು ಆಕಸ್ಮಿಕವಾಗಿ ಕಂಡುಹಿಡಿದಿದ್ದೇವೆ ಎಂದು ಹೇಳುತ್ತಾರೆ.ಗರ್ಭಿಣಿ ಇಲಿಗಳು ತಮ್ಮ ಮರಿಗಳನ್ನು ಗಂಡು ಇಲಿಗಳಿಂದ ರಕ್ಷಿಸಲು ಮೂತ್ರದಲ್ಲಿ ವಿಶೇಷ ರಾಸಾಯನಿಕವನ್ನು ಸ್ರವಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಗರ್ಭಿಣಿ ಮತ್ತು ಹಾಲುಣಿಸುವ ಇಲಿಗಳ ಮೂತ್ರದಲ್ಲಿ ಎನ್-ಪೆಂಟೈಲ್ ಅಸಿಟೇಟ್ ಎಂಬ ರಾಸಾಯನಿಕವಿರುವುದರಿಂದ ಗಂಡು ಇಲಿಗಳು ಮರಿಗಳ ಸಮೀಪ ಬರಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆಸಂಯುಕ್ತವು ಇಲಿಗಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಬಾಳೆಹಣ್ಣಿನಲ್ಲಿ ಎನ್-ಪೆಂಟೈಲ್ ಸಂಯುಕ್ತಗಳು ಕಂಡುಬರುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಅದಕ್ಕಾಗಿಯೇ ಗಂಡು ಇಲಿಗಳು ಬಾಳೆಹಣ್ಣಿಗೆ ಹೆದರುತ್ತವೆ. ಬಾಳೆಹಣ್ಣು ಕಂಡರೆ ಇಲಿಗಳು ಓಡಿ ಹೋಗುತ್ತವೆ. ಈಗ ನೀವು ಮನೆಯಲ್ಲಿರೋ ಗಂಡು ಇಲಿಗಳನ್ನು ಓಡಿಸಲು ಬಾಳೆಹಣ್ಣು ಬಳಸಬಹುದಾಗಿದೆ.ಮನೆಯಲ್ಲಿ ಈಗಾಗಲೇ ಇಲಿಗಳಿದ್ದರೆ, ನೀವು ಬಾಗಿದ ಬಾಳೆಹಣ್ಣುಗಳನ್ನು ಆ ಸ್ಥಳದಲ್ಲಿ ಇಡಬಹುದು. ಇಲಿಗಳನ್ನು ಕೊಲ್ಲದೇ ಹೋಗಲಾಡಿಸಲು ಉತ್ತಮ ಮಾರ್ಗವೆಂದರೆ ಬಾಳೆಹಣ್ಣು.

Ads on article

Advertise in articles 1

advertising articles 2

Advertise under the article