ಬಾಳೆಹಣ್ಣಿನಿಂದ ದೇಹಕ್ಕೆ ಸಿಗುವ ಉಪಯೋಗಗಳು ಏನು. ಬಾಳೆಹಣ್ಣು ತಿಂದ್ರೆ ದಪ್ಪ ಆಗ್ತಾರ
Monday, March 18, 2024
ಹಣ್ಣಿನ ಮೇಲೆ ಜನರ ವ್ಯಾಮೋಹ ಹೆಚ್ಚು ಅದರಲ್ಲಿ ಬಾಳೆಹಣ್ಣು ಎಲ್ಲರಿಗೆ ಇಸ್ಟ ಪಡುತ್ತಾರೆ . ಬಾಳೆಹಣ್ಣು ವಾಸ್ತವವಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್, ಫೈಬರ್, ಆರೋಗ್ಯಕರ ಕೊಬ್ಬು ಮತ್ತು ವಿಟಮಿನ್‌ಗಳು ಸಮೃದ್ಧವಾಗಿವೆ ಪರಿಣಾಮವಾಗಿ, ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ .
ಸೀಸನ್ ಅನ್ನು ಲೆಕ್ಕಿಸದೆ ಅಗ್ಗದ ದರದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಏಕೈಕ ಹಣ್ಣು ಅಂದ್ರೆ ಅದು ಬಾಳೆಹಣ್ಣು. ಈ ಬಾಳೆಹಣ್ಣು ತೂಕ ಇಳಿಕೆ ಮತ್ತು ಹೆಚ್ಚಳ ಎರಡಕ್ಕೂ ಸಹಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ಅವು ಕಾರ್ಬೋಹೈಡ್ರೆಟ್‌ಗಳು ಮತ್ತು ಕ್ಯಾಲೋರಿಗಳ ಸರಿಯಾದ ಸಮತೋಲನವನ್ನು ಹೊಂದಿವೆ.
ಬಾಳೆಹಣ್ಣು ಹೆಚ್ಚು ತಿಂದರೆ ಈ ಸಮಸ್ಯೆಗಳು ಗ್ಯಾರಂಟಿ!:
READ
ಏಕೆಂದರೆ ಬಾಳೆಹಣ್ಣಿನಲ್ಲಿ ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚು . ದೇಹವು ಅದನ್ನು ತ್ವರಿತವಾಗಿ ಹೀರಿಕೊಳ್ಳುವುದಿಲ್ಲ. ಒಂದು ಸಾಮಾನ್ಯ ಬಾಳೆಹಣ್ಣು ಸುಮಾರು 105 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಅಂದರೆ ಪ್ರತಿನಿತ್ಯ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿಂದರೆ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿ ಸಿಗುತ್ತದೆ. ಅಂದರೆ ಪ್ರತಿದಿನ 2 ರಿಂದ 3 ಬಾಳೆಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ 350 ಹೆಚ್ಚುವರಿ ಕ್ಯಾಲೊರಿ ಒದಗಿಸುತ್ತದೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ತೂಕ ಇಳಿಕೆಗೆ ಬಾಳೆಹಣ್ಣು ಹೇಗೆ ಸಹಾಯ ಮಾಡುತ್ತದೆ :
ತೂಕ ಇಳಿಸಲು ಬಯಸುವವರಿಗೆ ಬಾಳೆಹಣ್ಣು ತುಂಬಾ ಉಪಯುಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ಇದರಲ್ಲಿ ಫೈಬರ್ ಮತ್ತು ಪ್ರೋಟೀನ್‌ಗಳು ಸಮೃದ್ಧವಾಗಿವೆ. ಪರಿಣಾಮವಾಗಿ ಅವುಗಳನ್ನು ತಿಂದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಾ ಹೊತ್ತು ತುಂಬಿದ ಅನುಭವವಾಗುವಂತೆ ಮಾಡುತ್ತದೆ. ಹೀಗಾಗಿ ಕ್ಯಾಲೊರಿಗಳನ್ನು ಹೆಚ್ಚಾಗಿ ಸೇವಿಸುವ ಅಪಾಯ ಇರುವುದಿಲ್ಲ. ಇದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.