ನೀತಿ ಸಂಹಿತೆ ಬಗ್ಗೆ ನಿಮಗೆಷ್ಟು ಗೊತ್ತು
ಚುನಾವಣೆ ಆರಂಭ ಅದರಂತೆ ಎಲ್ಲರಿಗೂ ನೀತಿ ಸಂಹಿತೆ ಸಂಕಟ ಶುರುವಾಗಿದೆ ನೀತಿ ಸಂಹಿತೆ ಅಂಗವಾಗಿ ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ರಾಜಕಾರಣಿಗಳ ವರೆಗೆ ಹತ್ತಾರು ನಿರ್ಬಂಧಗಳುಯಿವೆ
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಕಳೆದ ಶನಿವಾರ ಚುನಾವಣೆ ದಿನಾಂಕವನ್ನು ಪ್ರಕಟ ಮಾಡಿದ್ದೇ ಅದರ ಜೊತೆ ಮಾದರಿ ನೀತಿ ಸಂಹಿತೆ ಕೂಡಾ ಜಾರಿ ಆಗಿದೆ. ಹಾಗಾದ್ರೆ ನೀತಿ ಸಂಹಿತೆ ಎಂದರೇನು
ಕಳೆದ ಶನಿವಾರದಿಂದ ಜಾರಿಗೆ ಬಂದಿರುವ ಚುನಾವಣಾ ನೀತಿ ಸಂಹಿತೆ ಜನ ಸಾಮಾನ್ಯರಿಗೆ ಹಲವು ರೀತಿ ಸಂಕಷ್ಟಗಳನ್ನು ತಂದೊಡ್ಡಿದೆ ಅವುಗಳೆಂದರೆ
*ಮದುವೆ ಸಮಾರಂಭ ಆಯೋಜನೆ ಮಾಡಿದ್ದವರಿಗೆ ಹಲವು ರೀತಿಯ ತಲೆನೋವು ಮದುವೆ ಕಾರ್ಯಕ್ರಮ ನಡೆಸಬೇಕಿದ್ದರೆ ಸರ್ಕಾರದಿಂದ ಅನುಮತಿ ಪಡೆಯೋದು ಕಡ್ಡಾಯವಾಗಿದೆ.
* ಮದುವೆ ಮಾತ್ರವಲ್ಲ ಯಾವುದೇ ಜಾತ್ರೆ, ಸಮಾರಂಭ, ನಡೆಸೋದಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಇರುವ ಎಆರ್‌ಒಗಳ ಬಳಿ ಮೊದಲೇ ಅನುಮತಿ ಪಡೆಯಬೇಕಿದೆ.
* ಇನ್ನು ಈ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಆಹ್ವನಿಸುವಂತೆ ಇಲ್ಲ.
* ಇನ್ನು ಧ್ವನಿ ವರ್ಧಕ ಬಳಕೆಗೆ ಹಲವು ರೀತಿಯ ನಿರ್ಬಂಧ ವಿಧಿಸಲಾಗಿದೆ.
* ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿ ವರ್ಧಕ ಬಳಕೆ ಮಾಡಬೇಕು. ಜಾತ್ರೆ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವವರಿಗೆ ಇದರ ಬಿಸಿ ತಟ್ಟುತ್ತಿದೆ.
* ಇನ್ನು ಕರಾವಳಿ ಭಾಗದಲ್ಲಿ ಯಕ್ಷಗಾನ ರಾತ್ರಿ ಹೊತ್ತಲ್ಲೇ ನಡೆಯುತ್ತೆ. ಹೀಗಾಗಿ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ.
ರಾಜಕಾರಣಿಗಳಿಗೆ ಉಂಟು ನಿರ್ಬಂಧ ಚು
ನಾವಣೆ ಹೊತ್ತಲ್ಲಿ ನೀತಿ ಸಂಹಿತೆ ಬಿಸಿ ಅತಿ ಹೆಚ್ಚು ತಟ್ಟೋದು ರಾಜಕಾರಣಿಗಳಿಗೆ, ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ.. ಯಾವುದೇ ರೀತಿಯಲ್ಲೂ ಚುನಾವಣಾ ಅಕ್ರಮಗಳು ನಡೆಯಬಾರದು ಅನ್ನೋ ಕಾರಣಕ್ಕೆ ಹಲವು ರೀತಿಯ ನಿರ್ಬಂಧಗಳನ್ನು ಆಯೋಗ ವಿಧಿಸಿದೆ.
* ಯಾವುದೇ ರಾಜಕಾರಣಿ ಪ್ರಚೋದನಕಾರಿ ಹೇಳಿಕೆಗಳನ್ನ ನೀಡಬಾರದು.
* ಕೋಮು ಸಂಘರ್ಷಕ್ಕೆ ಕಾರಣ ಆಗುವಂತಾ ಘೋಷಣೆ ಹೊರಡಿಸಬಾರದು. ಮತದಾರರಿಗೆ ಲಂಚ, ಆಮಿಷ, ಉಡುಗೊರೆ ನೀಡಬಾರದು.
* ಸರ್ಕಾರಿ ಕಚೇರಿ, ವಾಹನ ಸೇರಿದಂತೆ ಸಾರ್ವಜನಿಕ ಸ್ವತ್ತನ್ನು ರಾಜಕಾರಣಿಗಳು ಬಳಸಬಾರದು.
* ಸಾರ್ವಜನಿಕ ಶಾಂತಿ ಕದಡುವ ಕೆಲಸ ಮಾಡಬಾರದು.
* ಪೋಸ್ಟರ್, ಬ್ಯಾನರ್, ಕರಪತ್ರ ಸೇರಿದಂತೆ ಯಾವುದೇ ರೀತಿಯ ಪ್ರಚಾರ ಸಾಮಗ್ರಿ ಬಳಕೆಗೆ ನಿರ್ಬಂಧ ಹೇರಲಾಗಿದೆ.
* ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಪಕ್ಷ ಹಾಗೂ ರಾಜಕಾರಣಿಗಳಿಗೆ ಸಮಾನ ಅವಕಾಶ ಸಿಗಬೇಕು.
* ಮಾಧ್ಯಮಗಳಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿ ಪರ ಪ್ರಕಟಣೆ ಇರಬಾರದು.
* ಚುನಾವಣಾ ಪ್ರಕ್ರಿಯೆಗಳು ಪಾರದರ್ಶಕವಾಗಿ ಇರಬೇಕು.
* ಚುನಾವಣಾ ಪ್ರಣಾಳಿಕೆ ಮತದಾರರನ್ನು ಪ್ರಭಾವಿಸುವಂತೆ ಇರಬಾರದು. ಸರ್ಕಾರಿ ಯೋಜನೆಗಳನ್ನ ರಾಜಕಾರಣಿಗಳು
ಉದ್ಘಾಟನೆ ಮಾಡಬಾರದು.
* ಚುನಾವಣೆ ವೇಳೆ ಸರ್ಕಾರಿ ನೇಮಕಾತಿಗೆ ಹಲವು ನಿರ್ಬಂಧ ಹೇರಲಾಗಿದೆ.
* ಪೂಜಾ ಸ್ಥಳಗಳಲ್ಲಿ ಪ್ರಚಾರಕ್ಕೆ ಅವಕಾಶ ಇಲ್ಲ.
* ಮತಗಟ್ಟೆಯ 100 ಮೀಟರ್ ದೂರದವರೆಗೆ ಪ್ರಚಾರಕ್ಕೆ ಅವಕಾಶವಿಲ್ಲ.
* ಇನ್ನು ಹಣ ಹಂಚಿಕೆ ತಡೆಯಲು ತೀವ್ರ ನಿಗಾ ವಹಿಸಲಾಗಿದೆ.
ಒಮ್ಮೆ ಮತದಾನ ಮುಗಿದ ಮೇಲೆ ರಾಜಕಾರಣಿಗಳು ಮತದಾರರನ್ನು ಏಕೆ ಪ್ರಭಾವಿಸ್ತಾರೆ. ಈ ಕಾರಣಕ್ಕಾಗಿ ಮತದಾನ ಮುಗಿದ ಬಳಿಕ ನೀತಿ ಸಂಹಿತೆಯನ್ನ ಸ್ವಲ್ಪ ಸಡಿಲಿಕೆ ಮಾಡಬಹುದೇ ಅನ್ನೋ ಪ್ರಶ್ನೆ ರಾಜ್ಯ ಚುನಾವಣಾ ಆಯೋಗದ ಮುಂದೆ ಬಂತು.
ಅದರಲ್ಲೂ ಜೂನ್‌ನಲ್ಲಿ ಮುಂಗಾರು ಆರಂಭ ಆಗುವ ಮುನ್ನ ಕೃಷಿಕರು ರಸಗೊಬ್ಬರ ಖರೀದಿ ಸೇರಿದಂತೆ ಹಲವು ತಯಾರಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಈಗಾಗಲೇ ಬರಗಾಲವಿದೆ, ಕುಡಿಯುವ ನೀರಿನ ಕೊರತೆ ಇದೆ. ಶಾಲೆಗಳೂ ಜೂನ್ ಒಳಗಾಗಿ ಪುನಾರಂಭ ಆಗುತ್ತವೆ
ಚುನಾವಣ ಆಯೋಗ ನೀತಿ ಸಂಹಿತೆಯನ್ನ ಎಷ್ಟೇ ಕಠಿಣವಾಗಿ ಜಾರಿಗೆ ತಂದಿದ್ದರೂ ಕೂಡಾ ಅಗತ್ಯ ಸೇವಾ ಕಾರ್ಯಗಳಿಗೆ ಯಾವುದೇ ಸಮಸ್ಯೆ ಇರೋದಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬರಗಾಲ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮಗಳನ್ನ ಕೈಗೊಳ್ತಾರೆ.
ಕೆಲವು ಇಲಾಖೆಗಳ ಅಧಿಕಾರಿಗಳು ಚುನಾವಣಾ ಕೆಲಸದಲ್ಲಿ ನಿರತರಾಗಿದ್ದರೂ ಕೂಡಾ ಬಾಕಿ ಇಲಾಖೆಗಳ ಅಧಿಕಾರಿಗಳು ಜನ ಪರ ಕೆಲಸ ಕಾರ್ಯಗಳು ಹಾಗೂ ಅಭಿವೃದ್ದಿ ಕಾರ್ಯಗಳ ಕುರಿತಾಗಿ ಕೆಲಸ ಮಾಡಬಹುದಾಗಿದೆ. ಜನರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಅಡ್ಡಿ ಆಗೋದಿಲ್ಲ ಜನ ಪರ ಕೆಲಸಗಳಿಗೆ ಯಾವುದೇ ಅಡ್ಡಿ ಇಲ್ಲ ಎನ್ನುತ್ತಾರೆ