ಬಾದಾಮಿ ಮಿಲ್ಕ್ ಶೇಕ್ ಮಾಡುವ ವಿಧಾನ
ಬಾದಾಮಿ ಎಂಬುದು ಪೌಷ್ಠಿಕಾಂಶದ ಕಣಜ ಅದರ ಜೊತೆ ಹಾಲು ಅದರ ಜೊತೆ ಸೇರಿಸಿದ್ದಾರೆ ಇನ್ನೂ ಕೂಡ ಆರೋಗ್ಯಕ್ಕೆ ಒಳ್ಳೆಯದು.
ಬಾದಾಮಿಗಳು ಹೆಚ್ಚು ಪೌಷ್ಟಿಕಾಂಶಗಳಿಂದ ತುಂಬಿರುತ್ತವೆ. ಜೊತೆಗೆ ಫೈಬರ್, ಪ್ರೋಟೀನ್, ವಿಟಮಿನ್ ಇ, ಮ್ಯಾಂಗನೀಸ್, ಮೆಗ್ನಿಷಿಯಂ, ತಾಮ್ರ ಮತ್ತು ರಂಜಕದ ಅತ್ಯುತ್ತಮ ಮೂಲವನ್ನು ಹೊಂದಿರುವುದರಿಂದ ಉತ್ತಮ ಆರೋಗ್ಯ ನೀಡುತ್ತದೆ.
ಹಾಲಿನಲ್ಲಿ ಅಪಾರವಾದ ಪೌಷ್ಟಿಕ ಸತ್ವಗಳು ಹೊಂದಿದ್ದೆ ಇದು ಮೂಳೆಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ . ಜೊತೆಗೆ ಹಾಲಿನಲ್ಲಿ ಇರುವಂತಹ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ಪಾಸ್ಪರಸ್ ಎಲ್ಲವೂ ದೇಹಕ್ಕೆ ಸಿಕ್ಕಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಇಂತಹ ಹಾಲು ಹಾಗೂ ಬಾದಾಮಿಯನ್ನು ಸೇರಿಸಿ ಮಾಡುವ ಬಾದಾಮಿ ಮಿಲ್ಕ್ ಶೇಕ್ ಈ ಬೇಸಿಗೆಯ ಸಮಯದಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬಾದಾಮಿ ಮಿಲ್ಕ್ ಶೇಕ್ ಮಾಡಲು ಬೇಕಾದ ಪದಾರ್ಥ ಯಾವುವು
ಬಾದಾಮಿ 20
ಏಲಕ್ಕಿ . 2
ನೀರು-1 ಕಪ್
ಸಬ್ಬಾ ಬೀಜಗಳು- 2 ಚಮಚ
ಬಾದಾಮಿ ಮಿಲ್ಕ್ ಶೇಕ್ ಮಾಡುವುದು ಹೇಗೆ..?
ನೆನೆಸಿಡ ಬಾದಾಮಿಯನ್ನು ನೆನೆದ ನಂತರ ಅವುಗಳ ಸಿಪ್ಪೆ ತೆಗೆದು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಬಾದಾಮಿಗೆ ಸ್ವಲ್ಪ ಏಲಕ್ಕಿಯನ್ನು ಹಾಗೂ ಅಗತ್ಯವಿರುಷ್ಟು ನೀರನ್ನು ಸೇರಿಸಿ ನುಣ್ಣಗೆ ಪೇಸ್ಟ್ ಆಗುವ ರೀತಿ ರುಬ್ಬಿಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ ಹಾಲನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ನೀರಿಗೆ ರುಬ್ಬಿಕೊಂಡ ಬಾದಾಮಿ ಪೇಸ್ಟ್ ಸೇರಿಸಿ ನಂತರ ಸಕ್ಕರೆ ಸೇರಿಸಿ ಪದೇ ಪದೇ ಬೆರೆಸುತ್ತಾ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ತಣ್ಣಗಾಗಲು ಬಿಟ್ಟು ಬಳಿಕ ನೆನೆಸಿದ ಸಜ್ಜಾ ಬೀಜಗಳನ್ನು ಸೇರಿಸಿದರೆ ಬಾದಾಮಿ ಮಿಲ್ಕ್ ಶೇಕ್ ಸವಿಯಲು ಸಿದ್ಧ. ಒಂದು ವೇಳೆ ನಿಮಗೆ ಇಷ್ಟವಾದರೆ ಫ್ರಿಡ್ಜ್ ನಲ್ಲಿಟ್ಟು ತಣ್ಣಗಿನ ಬಾದಾಮಿ ಮಿಲ್ಕ್ ಶೇಕ್ ಕೂಡ ಕುಡಿಯಬಹುದು.