ಹಿಂದೂ ಧರ್ಮದಲ್ಲಿ ಹೆಣ್ಣಿಗೆ ಇರುವ ಮಹತ್ವ ವೇನು ? ಹೆಣ್ಣನ್ನು ಯಾಕೆ ಗೌರವಿಸಬೇಕು?
ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಮಹತ್ವವಿದ್ದೆ ಈ ಧಾರ್ಮಿಕ ಸಂಸ್ಕೃತಿಯಲ್ಲಿ, ಹೆಣ್ಣುಮಕ್ಕಳನ್ನು ದೇವರ ಆಶೀರ್ವಾದವೆಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ ಹೆಣ್ಣು ಎಂಬುದು ಕುಟುಂಬದ ಸಂತೋಷ ಹಾಗೂ ಸಂಪತ್ತಿನ ಸಂಕೇತ ಎಂದು ಹಿಂದೂ ಧರ್ಮದಲ್ಲಿ ನಂಬಲಾಗುತ್ತದೆ.
ಸನಾತನ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಜ್ಞಾನ, ಧರ್ಮ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಜವಬ್ದಾರಿಯನ್ನು ನೀಡಲಾಗಿದೆ. ಅವರಿಗೆ ಸಮಾಜದಲ್ಲಿ ಸಮಾನತೆಯ ಜೊತೆಗೆ ಶಿಕ್ಷಣ ಮತ್ತು ಸಂಸ್ಕೃತಿಯ ಬಗೆಗಿನ ತಿಳುವಳಿಕೆಯನ್ನು ನೀಡಲಾಗುತ್ತದೆ.
ಸನಾತನ ಧರ್ಮದಲ್ಲಿ, ಹೆಣ್ಣು ಮಗುವಿನ ಜನನವನ್ನು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸನಾತನ ಧರ್ಮದಲ್ಲಿಟ್ ಧರ್ಮದಲ್ಲಿ ಹೆಣ್ಣು ಮಗುವಿನ ಮಹತ್ವವೇನೆಂಬುದನ್ನು ತಿಳಿದುಕೊಳ್ಳಿ..
. ಹೆಣ್ಣು ಮಗುವಿನ ಧಾರ್ಮಿಕ ಮಹತ್ವವೇನು
ಹೆಣ್ಣು ಮಗುವನ್ನು ಲಕ್ಷ್ಮಿ ದೇವಿಯ ರೂಪವೆಂದು ನಂಬಲಾಗುತ್ತದೆ . ಹೆಣ್ಣು ಲಕ್ಷ್ಮಿ ದೇವಿಯ ಹಾಗೆ ಸಂಪತ್ತು, ಸಮೃದ್ಧಿ ಮತ್ತು ಸಂತೋಷದ ದೇವತೆ ಎಂದು ನಮ್ಮ ಸನಾತನ ಧರ್ಮದಲ್ಲಿ ಹೇಳಲಾಗುತ್ತದೆ.
- ಹೆಣ್ಣು ಮಗು ಪಿತೃ ಋಣ ತೀರಿಸುವ ಸಾಧನ ಎಂಬುದು
- ಮದುವೆ: ಮಗಳ ಮದುವೆಯನ್ನು ಪ್ರಮುಖ ಧಾರ್ಮಿಕ ವಿಧಿ ಎಂಬುದು ಸನಾತನ ಧರ್ಮದಲ್ಲಿ ಹೇಳಲಾಗಿದೆ
ಒಂದು ಕನ್ಯಾದಾನ ಮಾಡಿದರೆ ಜನ್ಮ ಜನ್ಮಗಳ ಪಾಪಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆಯಿದೆ ಇದು ವಿಶೇಷ
. ಹೆಣ್ಣು ಮಗುವಿನ ಸಾಂಸ್ಕೃತಿಕ ಪ್ರಾಮುಖ್ಯತೆ:
- ಸ್ತ್ರಿ. ಶಕ್ತಿ: ಹೆಣ್ಣು ಮಕ್ಕಳನ್ನು ಸ್ತ್ರೀ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
- ಕಲೆ ಮತ್ತು ಸಂಸ್ಕೃತಿ: ಹೆಣ್ಣುಮಕ್ಕಳು ಕಲೆ ಮತ್ತು ಸಂಸ್ಕೃತಿಯನ್ನು ಮುನ್ನಡೆಸುವವರು ಎಂದು ಹೇಳಲಾಗುತ್ತದೆ.
- ಮೌಲ್ಯಗಳು: ಹೆಣ್ಣು ಮಕ್ಕಳು ಮುಂದೊಂದು ದಿನ ಸಮಾಜಕ್ಕೆ ಅಪಾರ ಮೌಲ್ಯವನ್ನು ತಂದುಕೊಡುತ್ತಾರೆ
ಹೆಣ್ಣು ಮಗುವಿನ ಸಾಮಾಜಿಕ ಪ್ರಾಮುಖ್ಯತೆ:
- ಕುಟುಂಬದ ಅಡಿಪಾಯ: ಹೆಣ್ಣುಮಕ್ಕಳು ಕುಟುಂಬದ ಅಡಿಪಾಯ. ಅವರು ತಮ್ಮ ಹೆತ್ತವರು ಮತ್ತು ಒಡಹುಟ್ಟಿದವರನ್ನು ನೋಡಿಕೊಳ್ಳುತ್ತಾರೆ.
- ಪ್ರೀತಿ ಮತ್ತು ವಾತ್ಸಲ್ಯ:
ಹೆಣ್ಣುಮಕ್ಕಳು ಕುಟುಂಬಕ್ಕೆ ಪ್ರೀತಿ ಮತ್ತು ವಾತ್ಸಲ್ಯವನ್ನು ಹೊತ್ತು ತರುತ್ತಾಳೆ
- ಸಮಾಜಿಕ ಅಭಿವೃದ್ಧಿ: ಹೆಣ್ಣು ಮಕ್ಕಳು ಸಮಾಜವನ್ನು ಅಭಿವೃದ್ಧಿಪಡಿಸುವಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನ ವಿದ್ದೆ . ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ಲಕ್ಷ್ಮಿ ದೇವಿಯ ಹಾಗೂ ಸ್ತ್ರೀ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ನವರಾತ್ರಿಯಂತಹ ವಿಶೇಷ ಹಬ್ಬಗಳಲ್ಲಿ ಕನ್ಯ ಪೂಜೆಯನ್ನು ಮಾಡಲಾಗುತ್ತದೆ.
ಹೆಣ್ಣಿಗೆ ಗೌರವನ್ನು ನೀಡಿದ್ದಾರೆ ದೇವರ ಕೃಪೆಗೆ ಪಾತ್ರರಾಗುತ್ತಾರೆ