ಶುಭ ಸಂಕೇತ ಕನಸುಗಳು ಯಾವುವು
ಪ್ರತಿಯೊಬ್ಬರು ಕನಸು ಕಾಣುತ್ತಾರೆ ಆದರೆ ಕೆಲವು ಕನಸು ನಮಗೆ ಅರ್ಥವಾದರು ಕೇಲವು ಅರ್ಥ ಆಗುವುದಿಲ್ಲ. ಕೆಲವೊಂದು ಕನಸುಗಳ ಅರ್ಥ ತಿಳಿದು ಕೊಳ್ಳುವುದು ತುಂಬಾನೇ ಅವಶ್ಯಕ. ಕನಸಿನಲ್ಲಿ ನೋಡುವ ಘಟನೆಗಳು ಮುಂಬರುವ ಭವಿಷ್ಯದ ಬಗ್ಗೆ ನಮ್ಮನ್ನು ಎಚ್ಚರಿಸುತ್ತವೆ ಎಂಬಾ ನಂಬಿಕೆ ಸ್ವಪ್ನ ಶಾಸ್ತ್ರದ ಪ್ರಕಾರ ವಿದ್ದೆ
ಕನಸಿನಲ್ಲಿ ಬಿಳಿ ಆನೆ ಬರುವುದು
ನೀವು ನಿಮ್ಮ ಕನಸಿನಲ್ಲಿ ಬಿಳಿ ಅನೆ ಬಂದರೆ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಕನಸು ನಿಮ್ಮ ದುರಾದೃಷ್ಟ ಶೀಘ್ರದಲ್ಲೇ ದೂರ ಸರಿಯಲಿದೆ ಎಂಬುದನ್ನು ಸೂಚಿಸುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಬಿಳಿ ಆನೆಯು ಕನಸಿನಲ್ಲಿ ಕಾಣಿಸಿಕೊಳ್ಳುವುದು ತುಂಬಾನೇ ಮಂಗಳಕರವಾಗಿದೆ ಮತ್ತು ನೀವು ಶೀಘ್ರದಲ್ಲೇ ಹಣವನ್ನು ಪಡೆಯಲಿದ್ದೀರಿ ಎಂದು ಕನಸು ಸೂಚಿಸುತ್ತದೆ. ಈ ಕನಸು ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದೆ ಎಂಬುದರ ಸಂಕೇತವಾಗಿದೆ ನಂಬಲಾಗಿದೆ
ಕನಸಿನಲ್ಲಿ ಹಸು :
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಸುವನ್ನು ನೋಡುವುದು ಕೂಡ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ನಿಮ್ಮ ಕನಸಿನಲ್ಲಿ ಗೋಮಾತೆಯನ್ನು ನೋಡಿದರೆ ದೇವರು ನಿಮ್ಮೊಂದಿಗೆ ಸಂತೋಷವಾಗಿರುತ್ತಾನೆ ಎಂದು ಅರ್ಥಮಾಡಿಕೊಳ್ಳಿ. ಏಕೆಂದರೆ ಎಲ್ಲಾ ದೇವಾನು ದೇವತೆಗಳು ಗೋಮಾತೆಯಲ್ಲಿ ನೆಲೆಸಿದ್ದಾರೆ. ಇಂತಹ ಕನಸು ಕಾಣಿಸಿಕೊಂಡರೆ ಆ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳಲಿವೆ ಮತ್ತು ಲಕ್ಷ್ಮಿ ದೇವಿಯು ಮನೆಗೆ ಆಗಮಿಸಲಿದ್ದಾಳೆ ಎಂಬುದನ್ನು ನಿಮಗೆ ಹೇಳುತ್ತದೆ.
ಕನಸಿನಲ್ಲಿ ದೇವಾಲಯ ಬರುವುದು :
ನೀವು ನಿಮ್ಮ ಕನಸಿನಲ್ಲಿ ಪದೇ ಪದೇ ದೇವಸ್ಥಾನವನ್ನು ಅಥವಾ ದೇವಾಲಯವನ್ನು ನೋಡುತ್ತಿದ್ದರೆ ಅದು ನಿರ್ಲಕ್ಷಿಸಬೇಕಾದ, ಅಥವಾ ಅಸಡ್ಡೆ ತೋರಬೇಕಾದ ಕನಸಲ್ಲ. ಬದಲಾಗಿ, ದೇವರು ನಿಮಗೆ ಅವನ ಆಶೀರ್ವಾದವನ್ನು ನೀಡಲಿದ್ದಾನೆ ಎಂಬುದಾಗಿದೆ. ಸ್ವಪ್ನ ಶಾಸ್ತ್ರದಲ್ಲಿ ಇಂತಹ ಕನಸನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲು ಹಣಕಾಸಿನ ಸಮಸ್ಯೆಗಳು ಮುಕ್ತಾಯವಾಗಲಿದೆ ಎಂಬುದನ್ನು ಸೂಚಿಸುತ್ತದೆ. ಇದು ನಿಮ್ಮ ಪಾಲಿಗೆ ಶುಭದ ಸಂಕೇತವಾಗಿದೆ.
4. ಕನಸಿನಲ್ಲಿ ಮಳೆ ಬರುವುದು :
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಮಳೆಯನ್ನು ನೋಡುವುದು ತುಂಬಾ ಮಂಗಳಕರ ಮತ್ತು ಇದು ಶುಭ ಸಂಕೇತವೆಂದು ಪರಿಗಣಿಸಲಾಗುವುದು. ನೀವು ನಿಮ್ಮ ಕನಸಿನಲ್ಲಿ ಮಳೆಯನ್ನು ನೋಡಿದರೆ, ದೇವರು ನಿಮ್ಮ ಮೇಲೆ ಆತನ ಆಶೀರ್ವಾದದ ಮಳೆಯನ್ನು ಸುರಿಸಲು ಸಿದ್ದನಿದ್ದಾನೆ ಎಂಬುದಾಗಿದೆ. ಮತ್ತು ಶೀಘ್ರದಲ್ಲೇ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ಅರ್ಥಮಾಡಿಕೊಳ್ಳಬೇಕು. ಇದು ನಿಮಗೆ ಹಣಕಾಸಿನ ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಹಣವನ್ನು ಗಳಿಸುವ ಹೊಸ ಮಾರ್ಗಗಳು ಸೃಷ್ಟಿಸಿಕೊಡುತ್ತದೆ
ನೀವು ನಿಮ್ಮ ಕನಸಿನಲ್ಲಿ ಈ ಮೇಲಿನ ವಿಷಯಗಳನ್ನು ನೋಡಿದರೆ ಅದು ನಿಮಗೆ ಭವಿಷ್ಯದಲ್ಲಿ ಅತ್ಯಂತ ಶುಭ ಸೂಚನೆಯಾಗಿದೆ. ಇಂತಹ ಕಸನುಗಳು ನಿಮ್ಮ ಅದೃಷ್ಟದ ಕನಸುಗಳಾಗಿವೆ. ನಿಮ್ಮೆಲ್ಲಾ ಸಮಸ್ಯೆಗಳು ಕಳೆದು ಜೀವನದಲ್ಲಿ ಸುಖ ಬರುವ ಮುನ್ನ ಇಂತಹ ಕನಸುಗಳು ಕಾಣಿಸಿಕೊಳ್ಳುತ್ತವೆ