ಉಪ್ಪಿನ ಕಾಯಿ ಅತಿಯಾದರೆ ಆಗುವ ಅಪಾಯವೇನು
Saturday, March 30, 2024
ಉಪ್ಪಿನಕಾಯಿಯನ್ನೂ ಇಷ್ಟಪಡದ್ದವರು ಯಾರು ಇಲ್ಲ ಊಟದ ಜೊತೆ ನೆಂಜಿಕೊಳ್ಳಲು ಉಪ್ಪಿನಕಾಯಿ ಯಿದ್ರೆ ಸಾಕು ಬೇರೆಯನ್ನು ಬೇಡ ಅನ್ನುವರೆ ಹೆಚ್ಚು.ಅತಿಯಾದರೆ ಅಮೃತವೂ ವಿಷವೇ ಎಂಬಂತೆ ಉಪ್ಪಿನಕಾಯಿ ಜಾಸ್ತಿಯಾದ್ರೆ ಆದ್ರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ.
ಉಪ್ಪಿನ ಕಾಯಿ ಹೆಚ್ಚು ತಿಂದರೆ ಆಗುವ ತೊಂದರೆ ಏನು:
ಉಪ್ಪಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಎಣ್ಣೆ ಬಳಸಿರುತ್ತಾರೆ.
ಉಪ್ಪಿನಕಾಯಿಗೆ ಬಳಸುವ ಮಸಾಲೆಯನ್ನು ಹೆಚ್ಚಾಗಿ ಕುದಿಸುವುದೂ ಇಲ್ಲ. ಹಾಗಾಗಿ ಇದರಿಂದ ಕೊಲೆಸ್ಟ್ರಾಲ್ ಸಮಸ್ಯೆ ಹಾಗೂ ಬಿಪಿ ಹೆಚ್ಚುವ ಸಾಧ್ಯತೆ ಹೆಚ್ಚು
ಅಧ್ಯಯನವೊಂದರ ಪ್ರಕಾರ ಉಪ್ಪಿನಕಾಯಿ ಅತಿಯಾಗಿ ಸೇವಿಸುವುದರಿಂದ ಕ್ಯಾನ್ಸರ್ ಹಾಗೂ ಅಸಿಡಿಟಿ ಬರುವ ಸಾಧ್ಯತೆ ಇರುತ್ತದೆ. ಉಪ್ಪಿನಕಾಯಿ ವಿಪರೀತ ಸೇವನೆಯಿಂದ ಹೊಟ್ಟೆಯಲ್ಲಿ ಆಮ್ಮಿಯತೆ ಹೆಚ್ಚುತ್ತದೆ. ಹುಳಿ ತೇಗು, ಗ್ಯಾಸ್ಟಿಕ್, ಹೊಟ್ಟೆನೋವಿನಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಹೆಚ್ಚಿನ ಪ್ರಮಾಣದ ಸೋಡಿಯಂ ಇದ್ದು ಬಿಪಿ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಉಪ್ಪಿನಕಾಯಿ ತಯಾರಿಕೆ ವೇಳೆ ಬಳಸುವ ವಿನೆಗರ್ ನಿಂದಾಗಿ ಅಲ್ಸರ್ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.
ಉಪ್ಪಿನಕಾಯಿ ಸಂರಕ್ಷಣೆಗೆಂದು ಬಳಸುವ ಪ್ರಿಸರ್ವೇಟಿವ್ ನಿಂದಲೂ ಆರೋಗ್ಯಕ್ಕೆ ಸಮಸ್ಯೆಗಳು ಉಂಟಾಗುತ್ತದೆ.
ಉಪ್ಪಿನ ಕಾಯಿಯನ್ನು ಅತಿಯಾಗಿ ಸೇವಿಸುವುದನ್ನು ನಿಲ್ಲಿಸಿ ಆರೋಗ್ಯವಾಗಿರಿ