-->
ಪಂಚಮಿತ್ರ ವಾಟ್ಸಪ್ ಚಾಟ್ ಆರಂಭ: ವಾಟ್ಸಪ್ ಚಾಟ್ ಮೂಲಕ ಅನೇಕ ಸೇವೆ ಲಭ್ಯ

ಪಂಚಮಿತ್ರ ವಾಟ್ಸಪ್ ಚಾಟ್ ಆರಂಭ: ವಾಟ್ಸಪ್ ಚಾಟ್ ಮೂಲಕ ಅನೇಕ ಸೇವೆ ಲಭ್ಯ



ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಇಲಾಖೆಗಳ ಆಯ್ದ 89 ಸೇವೆ ಹಾಗೂ ಕುಂದುಕೊರತೆ ಬಗ್ಗೆ ಮಾಹಿತಿ 'ಪಂಚಮಿತ್ರ' ಹೊಸ ಪೋರ್ಟಲ್ ಹಾಗೂ ವಾಟ್ಸ್‌ಆ್ಯಪ್ ಚಾಟ್ ಡಿಜಿಟಲ್ ವೇದಿಕೆ ಮೂಲಕವೇ ಸಲ್ಲಿಸಲು ಅವಕಾಶ ಕಲ್ಪಿಸುವ ವಿನೂತನ ಪ್ರಯತ್ನವನ್ನು ರಾಜ್ಯ ಸರಕಾರ ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೊಳಿಸಿದೆ.


 ಅದಕ್ಕೆ ಪೂರಕವಾಗಿ ರಾಜ್ಯದ 5,991 ಗ್ರಾಮಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವತ್ತ ಹೆಜ್ಜೆ ಇಟ್ಟಿದೆ. ಅದರಂತೆ ಇನ್ನು ಮುಂದೆ ಸಾರ್ವಜನಿಕರು ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಆಯ್ದ ಸೇವೆಗಳನ್ನು 'ವಾಟ್ಸ್ಆ್ಯಪ್ ಚಾಟ್' ಸೇವೆ ಮೂಲಕವೇ ಪಡೆಯಲು ಅವಕಾಶವಾಗಲಿದೆ.


 ಜತೆಗೆ ಎಲ್ಲ ಗ್ರಾಮ ಪಂಚಾಯಿತಿಗಳ ಎಲ್ಲ ಸಭೆಗಳ ವೆಬ್ ಕಾಸ್ಟಿಂಗ್‌ ಆಗಲಿದ್ದು, ಸಾರ್ವಜನಿಕರು ನೇರವಾಗಿ ವೀಕ್ಷಿಸಲು ಅವಕಾಶವಾಗಲಿದೆ. ಈಗಾಗಲೇ 74,902 ಸಭೆಗಳ ವೆಬ್‌ಕಾಸ್ಟಿಂಗ್ ಆಗಿದ್ದು, 1 ಲಕ್ಷ ಸಭೆಗಳ ಶೆಡ್ಯೂಲ್ ಮಾಡಲಾಗಿದೆ. ಹಾಗಾಗಿ ಸಾರ್ವಜನಿಕರು ಇನ್ನು ಮುಂದೆ ಗ್ರಾಮ ಪಂಚಾಯಿತಿಗಳ ಮಾಸಿಕ ಸಭೆ, ಸ್ಥಾಯಿ ಸಮಿತಿ ಸಭೆಗಳನ್ನು ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಿಸಬಹುದಾಗಿದೆ.


 ಸಭೆಗಳ ನಡಾವಳಿ ವರದಿಯು ಆ ದಿನವೇ ಪೋರ್ಟಲ್‌ನಲ್ಲಿ ಅಪ್‌ಲೋಡ್ ಆಗುವುದರಿಂದ ಆ ಮೂಲಕವೂ ಸಭೆಯ ವಿವರಗಳನ್ನು ತಿಳಿಯಲು ನೆರವಾಗಲಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾರ್ವಜನಿಕರು ಅನಗತ್ಯವಾಗಿ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು. ಅಗತ್ಯ ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ಹೊಸ ಯೋಜನೆ ಜಾರಿಗೊಳಿಸಲಾಗಿದೆ. ಅದರಂತೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 17 ಸೇವೆಗಳು ಮತ್ತು ಇತರ ಇಲಾಖೆಗೆ ಸಂಬಂಧಿಸಿದ 72 ಸೇವೆಗಳು ಈ ಎರಡೂ ಡಿಜಿಟಲ್ ವೇದಿಕೆಗಳಲ್ಲಿ ಲಭ್ಯವಾಗಲಿದೆ.


ಬಳಸುವುದು ಹೇಗೆ?: ಈ ಡಿಜಿಟಲ್ ಸೇವೆ ಪಡೆಯಲು ಸ್ಮಾರ್ಟ್‌ಫೋನ್‌ ಅಗತ್ಯ. ಈ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ಚಾಟ್ ಶುರು ಮಾಡಬಹುದು. ಮೊದಲಿಗೆ 'ಹಾಯ್' ಎಂಬ ಸಂದೇಶ ಕಳುಹಿಸಬೇಕು. ಆಗ ಪರದೆ ಮೇಲೆ ಭಾಷೆ ಆಯ್ಕೆ ಅವಕಾಶ ಸಿಗಲಿದೆ. ಬಳಿಕ ಜಿಲ್ಲೆ, ತಾಲೂಕು ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೇವೆ, ಮಾಹಿತಿ, ಕುಂದುಕೊರತೆ ಎಂಬ ಮೂರು ಆಯ್ಕೆ ಮೂಡಲಿದ್ದು, ಮುಂದಿನ ಸೇವೆ ಪಡೆಯಬಹುದಾಗಿದೆ.


ಪಂಚಮಿತ್ರ' ಪೋರ್ಟಲ್‌/ ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಲಭ್ಯವಿರುವ ಸೇವೆ: ಕಟ್ಟಡ ನಿರ್ಮಾಣ ಪರವಾನಗಿ, ಹೊಸ ನೀರು ಪೂರೈಕೆ ಸಂಪರ್ಕ, ನೀರು ಸರಬರಾಜಿನ ಸಂಪರ್ಕ ಕಡಿತ, ಕುಡಿಯುವ ನೀರಿನ ನಿರ್ವಹಣೆ, ಬೀದಿದೀಪದ ನಿರ್ವಹಣೆ, ಗ್ರಾಮ ನೈರ್ಮಲ್ಯ ನಿರ್ವಹಣೆ, ಉದ್ದಿಮೆ ಪರವಾನಗಿ, ಸ್ವಾಧೀನ ಪ್ರಮಾಣ ಪತ್ರ, ನಾನಾ ಸೇವೆ ಸಂಬಂಧ ರಸ್ತೆ ಅಗೆತಕ್ಕೆ ಅನುಮತಿ, ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಜಾಬ್‌ಕಾರ್ಡ್‌ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು, ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ, ಹೊಸ/ ಅಸ್ತಿತ್ವದಲ್ಲಿರುವ ಓವರ್‌ ಗೌಂಡ್‌ ಕೇಬಲ್‌ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ.

ವಾಟ್ಸಾಪ್ ಚಾಟ್ ಸಂಖ್ಯೆ : 8277506000

Ads on article

Advertise in articles 1

advertising articles 2

Advertise under the article