ಬೆಂಗಳೂರು: ಬೆಡ್‌ರೂಂ ಕಿಟಕಿ ಮುಚ್ಚದೇ ದಂಪತಿಯ ಕಾಮಕೇಳಿ - ಪಕ್ಕದ ಮನೆಯಾಕೆಯಿಂದ ಪೊಲೀಸ್ ದೂರು
Thursday, March 21, 2024
ಬೆಂಗಳೂರು: ತಮ್ಮ ಬೆಡ್‌ರೂಂ ಕಿಟಕಿಯನ್ನು ಮುಚ್ಚದೇ ಕಾಮಕೇಳಿ ನಡೆಸುತ್ತಿದ್ದ ದಂಪತಿಯ ವಿರುದ್ಧ ಪಕ್ಕದ ಮನೆಯ ಮಹಿಳೆಯೊಬ್ಬರು ಪೊಲೀಸ್ ದೂರು ನೀಡಿರುವ ವಿಚಿತ್ರ ಪ್ರಕರಣವೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ದಂಪತಿಯ ಪಕ್ಕದ ಮನೆಯ ನಿವಾಸಿ ಮಹಿಳೆಯೊಬ್ಬರು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದಂಪತಿ ತಮ್ಮ ಕೋಣೆಯ ಕಿಟಕಿಯನ್ನು ಮುಚ್ಚದೇ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಅಲ್ಲದೆ ವಿಕೃತವಾಗಿ ವರ್ತಿಸುತ್ತಾರೆ. ಅವರ ವರ್ತನೆಯಿಂದ ತಮಗೆ ಕಿರಿಕಿರಿಯಾಗುತ್ತಿದೆ ಎಂದು 44 ವರ್ಷದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಕಿಟಕಿಯ ಬಾಗಿಲು ಹಾಕಿಕೊಂಡು ಕಾಮಕೇಳಿಯಲ್ಲಿ ತೊಡಗಿ ಎಂದು ಹೇಳಿದರೆ, 'ನಮ್ಮ ಮನೆ, ನಮ್ಮ ಇಷ್ಟ' ಎಂಬ ಉತ್ತರ ದಂಪತಿಯಿಂದ ಬಂದಿದೆ. ಇದಕ್ಕೆ ಆಕ್ಷೇಪಿಸಿದಾಗ, ಪತಿ ತನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.