ಭಾರತೀಯರ ಆರೋಗ್ಯದ ಸ್ಥಿತಿಯ ಬಗ್ಗೆ WHO ಹೇಳುವುದು ಏನು, ಭಾರತದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಲು ಕಾರಣವೇನು
ನಾವು ಪಿಟ್ ಆಗಿದ್ದೇವೆ ಎಂದು ಭಾವಿಸುತ್ತೇವೆ ಅದ್ದರೆ ವಿಶ್ವ ಆರೋಗ್ಯ ಸಂಸ್ಥೆಯು ಭಾರತದ ಆರೋಗ್ಯದ ಸ್ಥಿತಿಯ ಬಗ್ಗೆ ಹೇಳುತ್ತಿರುವುದೆ ಬೇರೆ ಭಾರತದಲ್ಲಿ ಪೋಷಕಾಂಶದ ಕೊರತೆ ಹಾಗೂ ಬೊಜ್ಜಿನ ಸಮಸ್ಯೆ ಮಿತಿ ಮೀರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಭಾರತದಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶ ಎಲ್ಲರನ್ನೂ ಬೆಚ್ಚಿಬೀಲಿಸುತ್ತಿದೆ
ಭಾರತ ದಲ್ಲಿ ಒಂದಡೆ ಕೋಟಿಗಟ್ಟಲೆ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದರೆ ಇನ್ನೊಂದೆಡೆ ಬೊಜ್ಜು ಇಲ್ಲಿನ ದೊಡ್ಡ ರೋಗವಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದೈಹಿಕ ಚಟುವಟಿಕೆಯಲ್ಲಿನ ಕೊರತೆಯ ಜೊತೆ ಪೌಷ್ಟಿಕಾಂಶದ ಸಮಸ್ಯೆಯೇ ಅಧಿಕ ತೂಕ ಮತ್ತು ಬೊಜ್ಜಿಗೆ ಕಾರಣ ಎಂದು ಕೂಡ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ಡೇಟಾದಲ್ಲಿ ಏನೆಲ್ಲ ಇದೆ?
ಜಾಗತಿಕವಾಗಿ ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆ 1975ಕ್ಕೆ ಹೋಲಿಕೆ ಮಾಡಿದ್ರೆ ಈಗ ಮೂರು ಪಟ್ಟು ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಕಳೆದ 15 ವರ್ಷಗಳಿಂದ ಇದ್ರ ಮೇಲೆ ಕೆಲಸ ಮಾಡ್ತಿದೆ. ಅದು ಭಾರತದ 15 ರಿಂದ 49 ವರ್ಷ ವಯಸ್ಸಿನ ಮಹಿಳೆಯರು ಮತ್ತು 15 ರಿಂದ 49 ವರ್ಷ ವಯಸ್ಸಿನ ಪುರುಷರು ಅಧಿಕ ತೂಕದ ಸಮಸ್ಯೆ ಬಗ್ಗೆ ವಿಶ್ಲೇಷಣೆ ನಡೆಸಿದೆ. ಬಂದ ವರದಿಯಲ್ಲಿ ಭಾರತದ ಮಹಿಳೆಯರ ಬೊಜ್ಜು ಶೇಕಡಾ 12.6 ರಿಂದ ಶೇಕಡಾ 24 ಕ್ಕೆ ಏರಿದೆ. ಇನ್ನು ಪುರುಷರಲ್ಲಿ ಶೇಕಡಾ 9.3 ರಿಂದ ಶೇಕಡಾ 22.9ರಷ್ಟು ಏರಿಕೆ ಕಂಡು ಬಂದಿದೆ. ಭಾರತದಲ್ಲಿ 20 ವರ್ಷ ಮೇಲ್ಪಟ್ಟ 4.4 ಕೋಟಿ ಮಹಿಳೆಯರು ಮತ್ತು 2.6 ಕೋಟಿ ಪುರುಷರು ಬೊಜ್ಜು ಹೊಂದಿರುವುದು ತಿಲಿದಿದೆ
ವಿಶ್ವದ ಇತರ ದೇಶಗಳಿಗೆ ಹೋಲಿಕೆ ಮಾಡಿದ್ರೆ ಬೊಜ್ಜು ಹರಡುವುದರಲ್ಲಿ ಭಾರತದ ಮಹಿಳೆಯರು 197 ದೇಶಗಳಲ್ಲಿ 182 ನೇ ಸ್ಥಾನದಲ್ಲಿದ್ದಾರೆ. ಪುರುಷರು 180 ನೇ ಸ್ಥಾನದಲ್ಲಿದ್ದಾರೆ.
ನೀತಿ ಆಯೋಗ ಕೂಡ ಕೆಲ ದಿನಗಳ ಹಿಂದೆ ಸ್ಕೂಲಕಾಯದ ಬಗ್ಗೆ ವರದಿ ನೀಡಿತ್ತು ಅದ್ರ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಸ್ಕೂಲಕಾಯ ಹೊಂದಿರುವ ರಾಜ್ಯದಲ್ಲಿ ಪಂಜಾಬ್ ಮುಂದಿದೆ. ಪಂಜಾಬ್‌ನಲ್ಲಿ ಸುಮಾರು ಶೇಕಡಾ 14.2ರಷ್ಟು ಮಹಿಳೆಯರು ಮತ್ತು ಶೇಕಡಾ 8.3 ರಷ್ಟು ಪುರುಷರು ಬೊಜ್ಜಿನ ಸಮಸ್ಯೆ ಹೊಂದಿದ್ದಾರೆ.
ಕೇರಳವು ಭಾರತದ ಅತ್ಯಂತ ಆರೋಗ್ಯಕರ ರಾಜ್ಯವಾಗಿದೆ.
ಸ್ಥಲಕಾಯಕ್ಕೆ ಕಾರಣ: ಸ್ಕೂಲಕಾಯ ಕೊಬ್ಬಿನ ಅಸಹಜ ಅಥವಾ ಅತಿಯಾದ ಶೇಖರಣೆ, ಬೊಜ್ಜಿನಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. 25ಕ್ಕಿಂತ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಷನ್ ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ. 30 ಕ್ಕಿಂತ ಹೆಚ್ಚು ಬಾಡಿ ಮಾಸ್ ಇಂಡೆಕ್ಷನ್ ಸ್ಕೂಲಕಾಯತೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಸ್ಕೂಲಕಾಯದಿಂದ ಬರುವ ಖಾಯಿಲೆಗಳ ಸಂಖ್ಯೆ ಹೆಚ್ಚಾಗ್ತಿದೆ. ಸ್ಕೂಲಕಾಯದಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದ ಸಮಸ್ಯೆ ಜನರನ್ನು ತೀವ್ರವಾಗಿ ಕಾಡುತ್ತದೆ.
ಬೊಜ್ಜು ಹದಿಹರೆಯದವರಲ್ಲಿ ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತಿದೆ :
ಸ್ಕೂಲಕಾಯ ಹೆಚ್ಚಾಗಲು ಪ್ರಮುಖ ಕಾರಣ, ಸಾಂಪ್ರದಾಯಿಕ ಆಹಾರ ಮತ್ತು ದೈಹಿಕ ಚಟುವಟಿಕೆಯಲ್ಲಿ ಇಳಿಕೆ. ಕೆಲಸದ ಒತ್ತಡದಿಂದಾಗಿ ಮಹಿಳೆಯರು ದೈಹಿಕ ಚಟುವಟಿಕೆಗೆ ಹೆಚ್ಚು ಸಮಯ ನೀಡುತ್ತಿಲ್ಲ.
ವ್ಯಾಯಾಮ ಯೋಗ ವಾಕಿಂಗ್ ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆ ಆಗಿದೆ.ಅತಿ ಹೆಚ್ಚು ಸಮಯ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಈ ಬೊಜ್ಜಿಗೆ ಕಾರಣವಾಗ್ತಿದೆ. ಅಲ್ಲದೆ ಸಂಸ್ಕರಿಸಿದ ಆಹಾರ ಕೂಡ ಮುಖ್ಯವಾಗ್ತಿದೆ.ಆರೋಗ್ಯದ ಮೇಲೆ ಗಮನವಿರಲಿಯಾಕೆಂದರೆ "ಆರೋಗ್ಯವೇ ಭಾಗ್ಯ"