ಭಾರತೀಯ ಮೂಲದ ಗಲ್ಫ್ ಉದ್ಯಮಿಯಿಂದ ಪುತ್ರನ 18ನೇ ವರ್ಷದ ಹುಟ್ಟುಹಬ್ಬಕ್ಕೆ 5ಕೋಟಿಯ ಲ್ಯಾಂಬೋರ್ಗಿನಿ ಕಾರು ಉಡುಗೊರೆ
Friday, April 12, 2024
ನವದೆಹಲಿ: ಗಲ್ಫ್ ದೇಶದಲ್ಲಿ ಉದ್ಯಮಿಯಾಗಿರುವ ಭಾರತೀಯ ಮೂಲದ ವ್ಯಕ್ತಿ ತಮ್ಮ 18 ವರ್ಷದ ಪುತ್ರನ ಹುಟ್ಟುಹಬ್ಬಕ್ಕೆ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಗಿಫ್ಟ್ ನೀಡಿದ್ದಾರೆ.
18 ವರ್ಷ ಪೂರ್ಣಗೊಂಡಿರುವ ತರುಣ್ ರುಂಗ್ವಾ ಎಂಬ ಹೆಸರಿನ ಯುವಕ ತನಗೆ ತಂದೆ ಉಡುಗೊರೆ ನೀಡಿರುವ ಕಾರಿನ ವೀಡಿಯೋ ಮಾಡಿ ಹೇಳಿಕೊಂಡಿದ್ದಾನೆ. ಇನ್ ಸ್ಟಾಗ್ರಾಮ್ ನಲ್ಲಿ ಹಾಕಿರುವ ಈ ವೀಡಿಯೋ ಭಾರೀ ವೈರಲ್ ಆಗಿದೆ. 5 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ಕಾರಿನ ಬಗ್ಗೆ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಹಾಕಿದ್ದಾರೆ.
ವಿವೇಕ್ ಕುಮಾರ್ ರುಂಗ್ವಾ ಎಂಬ ಉದ್ಯಮಿ ಯುಎಇಯಲ್ಲಿ ವಿಕೆಆರ್ ಗ್ರೂಪ್ ಹೆಸರಲ್ಲಿ ಉದ್ಯಮ ಹೊಂದಿದ್ದಾರೆ. ಲ್ಯಾಂಬೋರ್ಗಿನಿ ಹುರಾಕಾನ್ ಎಸ್ ಟಿಓ ಹೆಸರಿನ ಈ ಕಾರು 5 ಕೋಟಿಗೂ ಅಧಿಕ ಮೌಲ್ಯದ್ದು ಎನ್ನಲಾಗುತ್ತಿದೆ. ಕಾರಿನ ಬಗ್ಗೆ ತುಂಬ ಕ್ರೇಜ್ ಇಟ್ಟುಕೊಂಡಿರುವ ತರುಣ್ ರುಂಗ್ಟಾ ತನ್ನ ತಂದೆಯ ಗಿಫ್ಟ್ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.
ತನ್ನ ಮೇಲಿನ ಪ್ರೀತಿ ಮತ್ತು ಮಮಕಾರದಿಂದ ನನಗೆ ತಂದೆ ಗಿಫ್ಟ್ ನೀಡಿದ್ದಾರೆ. ನನ್ನ ಕನಸಿನ ಕಾರನ್ನು ಗಿಫ್ಟ್ ಕೊಟ್ಟು 18ನೇ ಬರ್ತ್ ಡೇಯನ್ನು ವಿಶಿಷ್ಟವಾಗಿಸಿದ್ದಾರೆ. ನಿಮ್ಮ ಪ್ರೀತಿ ಮತ್ತು ಸಪೋರ್ಟ್ ನನಗೆಲ್ಲದಕ್ಕೂ ದೊಡ್ಡದು ಎಂದು ಬರೆದುಕೊಂಡಿದ್ದು, ಲ್ಯಾಂಬೋರ್ಗಿನಿ ಎಂಥಸಿಯಾಸ್ಟ್ ಎಂದೂ ಕ್ಯಾಪ್ಷನ್ ಕೊಟ್ಟಿದ್ದಾನೆ. ಕಾರು ಶೋರೂಮ್ ನಲ್ಲೇ ಕೇಕ್ ಕಟ್ ಮಾಡಿದ್ದು, ಆನಂತರವೇ ಕಾರಿನ ಕೀಯನ್ನು ಕೊಟ್ಟು ಕಂಪನಿ ಕಡೆಯವರು ತಂದೆಯ ಮೂಲಕ ಗಿಫ್ಟ್ ಮಾಡಿಸಿದ್ದು ವೀಡಿಯೋದಲ್ಲಿದೆ.