-->
ಗೃಹಲಕ್ಷ್ಮೀ ಯೋಜನೆ ನಿಲ್ಲಿಸಿದರೆ ಒಳ್ಳೆಯದು, ಮಹಿಳೆಯರು 2 ಸಾವಿರದಿಂದ ಬದುಕುವುದಲ್ಲ- BJP ನಾಯಕಿಯ  ಹೇಳಿಕೆ

ಗೃಹಲಕ್ಷ್ಮೀ ಯೋಜನೆ ನಿಲ್ಲಿಸಿದರೆ ಒಳ್ಳೆಯದು, ಮಹಿಳೆಯರು 2 ಸಾವಿರದಿಂದ ಬದುಕುವುದಲ್ಲ- BJP ನಾಯಕಿಯ ಹೇಳಿಕೆ

 


ಮಂಗಳೂರು: ಗೃಹಲಕ್ಷ್ಮೀ ಯೋಜನೆ ನಿಲ್ಲಿಸಿದರೆ ಒಳ್ಳೆಯದು ಎಂದು ದ.ಕ ಬಿಜೆಪಿ ನಾಯಕಿ ಸುಮನ ಶರಣ್ ಹೇಳಿದ್ದಾರೆ.


ಮಂಗಳೂರಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಅವರು ಗೃಹಲಕ್ಷ್ಮಿ‌ ಯೋಜನೆ ನಿಲ್ಲಿಸಿದರೆ ಒಳ್ಳೆಯದು. ಮಹಿಳೆಯರು ಅಸಮರ್ಥರಲ್ಲ. ಅವರು 2 ಸಾವಿರದಿಂದ ಬದುಕುವುದಲ್ಲ ಎಂದು ಹೇಳಿದ್ದಾರೆ.





ಮಹಿಳೆಯರು ಪಡೆದುಕೊಂಡ ಹಣದ ನೆಗೆಟಿವ್ ತುಂಬಾ ಇದೆ. ಗೃಹಲಕ್ಷ್ಮೀ ತೆಗೆದುಕೊಂಡವರು ಕೂಡ ಈ  ಬಾರಿ ಬಿಜೆಪಿಗೆ ಮತ ಹಾಕುತ್ತಾರೆ. ಖಜಾನೆ ಖಾಲಿಯಾಗಿದ್ದು, ಶಾಸಕರಿಗೆ ಅಭಿವೃದ್ದಿಗೆ ಹಣ ಬರುತ್ತಿಲ್ಲ. ನಾವು ಆಡಳಿತ ಮಾಡುವ‌ ಮಂಗಳೂರು ಮಹಾನಗರ ಪಾಲಿಕೆಗೆ ಹಣ ಬರುತ್ತಿಲ್ಲ. ಈ ಬಿಟ್ಟಿ ಯೋಜನೆಯಿಂದ ಹೀಗೆ ಆಗಿದೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article