26ರ ಯುವತಿಗೆ 22ಮಕ್ಕಳು: 105 ಮಕ್ಕಳನ್ನೇ ಪಡೆಯುವುದು ಈಕೆಯ ಗುರಿಯಂತೆ
Wednesday, April 3, 2024
ನವದೆಹಲಿ: ಈಕೆಗೆ ಇನ್ನೂ 26 ವರ್ಷ. ಆದರೆ ಈಕೆ 22 ಮಕ್ಕಳ ತಾಯಿ ಎಂದರೆ ನೀವು ನಂಬಲೇಬೇಕು. ಹೌದು ಕ್ರಿಸ್ಟಿನಾ ಓಜ್‌ಟುರ್ಕ್ ಎಂಬ ಈ ಯುವತಿ ತನ್ನ 58 ವರ್ಷದ ಪತಿ ಗ್ಯಾಲಿಪ್‌ನೊಂದಿಗೆ 22 ಮಗುವನ್ನು ಆರೈಕೆ ಮಾಡುತ್ತಿದ್ದಾಳೆ. 2020ರಿಂದ ಇಲ್ಲಿಯವರೆಗೆ ಈ ದಂಪತಿ 22 ಶಿಶುಗಳನ್ನು ತಂದೆ - ತಾಯಿಗಳಾಗಿದ್ದಾರೆ. ಇವರಿಗೆ 105 ಮಕ್ಕಳನ್ನು ಹೊಂದುವ ಮೂಲಕ ತಮ್ಮ ಕುಟುಂಬವನ್ನು ಮತ್ತಷ್ಟು ವಿಸ್ತರಿಸುವ ಕನಸು ಕಂಡಿದೆ.
ಸದ್ಯ ಜಾರ್ಜಿಯಾದಲ್ಲಿ ನೆಲೆಸಿರುವ ಕ್ರಿಸ್ಟಿನಾ ಒಜ್ಜುರ್ಕ್ ಮತ್ತು ಆಕೆಯ ಮಿಲಿಯನೇರ್ ಪತಿ ಗ್ಯಾಲಿಪ್ ಸದ್ಯ 22 ಮಗುವಿನ ಪೋಷಕರು. ಕ್ರಿಸ್ಟಿನಾ ತನ್ನ ಮೊದಲ ಮಗುವನ್ನು 17ನೇ ವಯಸ್ಸಿನಲ್ಲಿ ಸ್ವಾಗತಿಸಿದ್ದಾರೆ. ಈ ಹಿಂದೆ 2014ರಲ್ಲಿ ಮೊದಲ ಪತಿಗೆ ಜನಿಸಿದ ಒಂದು ಮಗುವನ್ನು ಇಂದಿಗೂ ಸಾಕುತ್ತಿರುವ ಕ್ರಿಸ್ಟಿನಾಗೆ ಒಟ್ಟು 22 ಮಕ್ಕಳಿದ್ದಾರೆ. 22ರ ಪೈಕಿ 20 ದತ್ತು ಮಕ್ಕಳು.
2020ರ ಮಾರ್ಚ್ ನಿಂದ 2021ರ ಜುಲೈವರೆಗೆ ಈ ದಂಪತಿ ಮಕ್ಕಳನ್ನು ದತ್ತು ಕೊಟ್ಟ ಪೋಷಕರಿಗೆ 168,000 ಯುರೋ ಹಣ ಪಾವತಿಸಿದ್ದಾರೆ. ಹೆಚ್ಚುವರಿಯಾಗಿ 16 ಲೈವ್-ಇನ್ ದಾದಿಯರಿಗೆ ವಾರ್ಷಿಕವಾಗಿ 96,000 ಡಾಲರ್ ಹಣವನ್ನು ಮಕ್ಕಳ ಆರೈಕೆಗೆಂದೇ ವ್ಯಯಿಸುತ್ತಾರೆ. ಇಬ್ಬರನ್ನು ಹೊರತುಪಡಿಸಿ ಎಲ್ಲಾ ಮಕ್ಕಳು 2020ರಲ್ಲಿ ಜನಿಸಿವೆ. ಕ್ರಿಸ್ಟಿನಾ ಅವರ ಹಿರಿಯ ಮಗು ವಿಕ್ಟೋರಿಯಾ ಮೊದಲ ಪತಿಗೆ ಜನಿಸಿದೆ. ಇನ್ನು ಎರಡನೇ ಮಗು ಒಲಿವಿಯಾ 2021ರ ಜನವರಿಯಲ್ಲಿ ಹುಟ್ಟಿದೆ.
20 ಮಕ್ಕಳಲ್ಲಿ ಮುಸ್ತಫಾ, ಮರ್ಯಮ್, ಐರಿನ್, ಆಲಿಸ್, ಹಸನ್, ಜೂಡಿ, ಹಾರ್ಪರ್, ತೆರೇಸಾ, ಹುಸೇನ್, ಅನ್ನಾ, ಇಸಾಬೆಲ್ಲಾ, ಇಸ್ಮಾಯಿಲ್, ಮೆಹ್ಮತ್‌ಗೆ ಮೂರು ವರ್ಷ ವಯಸ್ಸು. ಇನ್ನು ಅಹ್ಮತ್, ಅಲಿ, ಕ್ರಿಸ್ಟಿನಾ, ಅಲೆನಾ, ಸಾರಾ, ಲಾಕ್‌ಮನ್ ಮತ್ತು ಆಲ್ಪರ್ಸ್ಟಾನ್‌ಗೆ ಎರಡು ವರ್ಷ ವಯಸ್ಸು. ದಂಪತಿಗಳು ತಮ್ಮ ಕುಟುಂಬವನ್ನು ಮತ್ತಷ್ಟು ವಿಸ್ತರಿಸಲು ಬಯಸಿದ್ದು, 100ಕ್ಕೂ ಹೆಚ್ಚು ಮಕ್ಕಳನ್ನು ಹೊಂದುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ದತ್ತು ಪಡೆಯುವ ಪ್ರಯಾಣವನ್ನು ಮುಂದುವರಿಸುವ ಮೊದಲು ಪ್ರಸ್ತುತ ಜನಿಸಿರುವ ಮಕ್ಕಳು ದೊಡ್ಡವರಾಗುವವರೆಗೆ ಈ ಪ್ಲಾನ್ ಮುಂದೂಡಲು ಇದೀಗ ದಂಪತಿ ನಿರ್ಧರಿಸಿದ್ದಾರೆ.