ಕೇರಳ: ಟ್ರಕ್ ಗೆ ಕಾರು ಗುದ್ದಿಸಿ ಶಿಕ್ಷಕಿಯೊಂದಿಗೆ ಆಕೆಯ ಅನ್ಯಕೋಮಿನ ಗೆಳೆಯ ಸಾವು
Monday, April 1, 2024
ಕೇರಳ: ರಾಜ್ಯದ ಎಝಂಕುಲಂ ಎಂಬಲ್ಲಿ ಕಂಟೈನರ್ ಲಾರಿಗೆ ಕಾರೊಂದು ಡಿಕ್ಕಿಯಾಗಿ ಶಿಕ್ಷಕಿ ಹಾಗೂ ಆಕೆಯ ಗೆಳೆಯ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ತರವಾದ ಟ್ವಿಸ್ಟ್ ದೊರಕಿದೆ. ಇಂದೊಂದು ಅಪಘಾತವೆಂದೇ ನಂಬಿದ್ದ ಪೊಲೀಸರಿಗೆ ಇದೊಂದು ಉದ್ದೇಶಪೂರ್ವಕವಾಗಿ ಮಾಡಿಕೊಂಡ ಅಪಘಾತ ಎಂದು ತಿಳಿದು ಬಂದಿದೆ.
ತುಂಬಮನ್ ಉತ್ತರ ಸರ್ಕಾರಿ ಜಿಎಚ್‌ಎಸ್‌ನ ಶಿಕ್ಷಕಿ ಅನುಜಾ ರವೀಂದ್ರನ್ (37) ಹಾಗೂ ಆಕೆಯ ಸ್ನೇಹಿತ ಮೊಹಮ್ಮದ್ ಹಾಶಿಮ್ ಪ್ರಕರಣದಲ್ಲಿ ಮೃತಪಟ್ಟವರು.
ಮೊಹಮ್ಮದ್ ಹಾಶಿಮ್ ಹಾಗೂ ಅನುಜಾ ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಅನ್ಯೋನ್ಯವಾಗಿದ್ದರು. ಅನುಜಾ ಇತರ ಶಿಕ್ಷಕರೊಂದಿಗೆ ಶಾಲಾ ವಿಹಾರಕ್ಕೆ ಹೋಗಿ ಹಿಂದಿರುಗುತ್ತಿದ್ದರು. ಈ ವೇಳೆ ಹಾಶಿಮ್ ಶಾಲಾ ವಾಹನವನ್ನು ತಡೆದು ಬಲವಂತವಾಗಿ ಅನುಜಾರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಹೋಗುವ ಮೊದಲು ಅನುಜಾ ಇತರ ಶಿಕ್ಷಕರಿಗೆ ಹಾಶಿಮ್ ನನ್ನು ತನ್ನ ಸಂಬಂಧಿ ವಿಷ್ಣು ಎಂದು ಪರಿಚಯಿಸಿದ್ದಾಳೆ ಎನ್ನಲಾಗಿದೆ.
ಕೆಲ ಹೊತ್ತಿನ ಬಳಿಕ ತನ್ನ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿರುವ ಅನುಜಾ ಅಳುತ್ತಾ ತಾನು ಸಾಯುತ್ತಿದ್ದೇನೆ ಎಂದಿದ್ದಾರೆ. ಇದರಿಂದ ಗಾಬರಿಯಾದ ಶಿಕ್ಷಕರು ಅನುಜಾ ತಂದೆ ಹಾಗೂ ಪತಿಗೆ ವಿಚಾರ ತಿಳಿಸಿದ್ದಾರೆ. ಆಗ ಅನುಜಾಗೆ ವಿಷ್ಣು ಎಂಬ ಸಂಬಂಧಿಯೇ ಇಲ್ಲವೆಂಬ ವಿಚಾರವೂ ಗೊತ್ತಾಗಿದೆ. ಸಹೋದ್ಯೋಗಿಗಳು ಮತ್ತೆ ಕರೆ ಮಾಡಿದರೆ ಕರೆ ಸ್ವೀಕರಿಸಿದ ಅನುಜಾ ತಾನು ಸುರಕ್ಷಿತವಾಗಿದ್ದೇನೆ ಎಂದಿದ್ದಾಳೆ. ಆದ್ದರದ ಶಿಕ್ಷಕರು ಆದೂರು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ವೇಳೆ ಅನುಜಾ ತಂದೆ ಹಾಗೂ ಸಹೋದರನೂ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಹಾಶೀಮ್ ಚಲಾಯಿಸುತ್ತಿದ್ದ ಕಾರು ಕಂಟೈನರ್ ಲಾರಿಗೆ ಢಿಕ್ಕಿಯಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ಕಾರನ್ನು ತುಂಡರಿಸಿ ಅನುಜಾ ಮತ್ತು ಹಾಶಿಮ್ ಇಬ್ಬರನ್ನೂ ಹೊರತೆಗೆಯಲಾಗಿದೆ. ಅಷ್ಟರಲ್ಲಾಗಲೇ ಅನುಜಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹಾಶಿಮ್ ಅವರನ್ನು ಆದೂರು ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಹಾಶಿಮ್ ನೊಂದಿಗೆ ಅನುಜಾಳ ಸಂಬಂಧ ಮನೆಯವರಿಗೆ ಗೊತ್ತಿರಲಿಲ್ಲ. ಹಾಶಿಮ್ ಮೂರು ವರ್ಷಗಳಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ.
ಪೊಲೀಸರ ಪ್ರಕಾರ ಹಾಶೀಮ್ ಉದ್ದೇಶಪೂರ್ವಕವಾಗಿಯೇ ವೇಗದಿಂದ ಕಾರನ್ನು ಟ್ರಕ್ ಗೆ ಗುದ್ದಿದ್ದಾನೆ. ಇದರಿಂದಾಗಿ ಇಬ್ಬರೂ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.