ಪತಿಯ ಅನುಮಾನಕ್ಕೆ 'ಪೊಲೀಸ್' ಪತ್ನಿ ಬಲಿ - ಪತಿ ಅರೆಸ್ಟ್
Monday, April 1, 2024
ಕಾಪು: ಇಲ್ಲಿನ ಕಾಪು ಠಾಣಾ ಮಹಿಳಾ ಸಿಬಂದಿ ಜ್ಯೋತಿ(32) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ರವಿ ಕುಮಾರ್(35) ಬಂಧಿತ ಆರೋಪಿ. ರವಿ ಕುಮಾರ್ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2017ರಲ್ಲಿ ಈತ ಜ್ಯೋತಿಯನ್ನು ಮದುವೆಯಾಗಿದ್ದ. ಜ್ಯೋತಿ ಕಾಪು ಠಾಣಾ ಸಿಬ್ಬಂದಿಯಾಗಿದ್ದರು. ಆದ್ದರಿಂದ ಇವರಿಬ್ಬರು ಠಾಣೆಯ ಸಮೀಪದಲ್ಲೇ ಇರುವ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು.
ಎರಡು ದಿನಗಳ ಹಿಂದೆ ಜ್ಯೋತಿ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ರೂಮಿನಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ತನ್ನ ಸಾವಿಗೆ ತನ್ನ ಪತಿಯ ಅನುಮಾನವೇ ಕಾರಣ ಎಂದು ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ಮೃತಳ ತಾಯಿ ದೇವಮ್ಮ ವಿಟ್ಲಾಪುರ ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ 306, 498(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.