
ಉಡುಪಿಯಲ್ಲಿ ಕೋಟಾಗೆ ಟಿಕೆಟ್ ನೀಡಿ BJP ಬಿಲ್ಲವರಿಗೆ ಅನ್ಯಾಯ ಮಾಡಿದೆ- ಸತ್ಯಜಿತ್ ಸುರತ್ಕಲ್
Wednesday, April 3, 2024
ಉಡುಪಿಯಲ್ಲಿ ಕೋಟಾಗೆ ಟಿಕೆಟ್ ನೀಡಿ ಬಿಜೆಪಿ ಬಿಲ್ಲವರಿಗೆ ಅನ್ಯಾಯ ಮಾಡಿದೆ- ಸತ್ಯಜಿತ್ ಸುರತ್ಕಲ್
ಮಂಗಳೂರಿನಲ್ಲಿ ಮಾತನಾಡಿದ ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಕೋಟ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ಬಿಲ್ಲವ ಸಮಾಜಕ್ಕೆ ಅನ್ಯಾಯ ಮಾಡಿದೆ. ಕೋಟ ಅವರು ಎಂಎಲ್ಸಿ ಹಾಗೂ ವಿಧಾನಪರಿಷತ್ ನ ವಿಪಕ್ಷ ನಾಯಕನ ಹುದ್ದೆಯಲ್ಲಿದ್ದವರು. ಇಂತಹ ಹುದ್ದೆ ಈ ಸಮಾಜಕ್ಕೆ ಮತ್ತೆ ದೊರಕಲು ಸಾಧ್ಯವಿಲ್ಲ. ಸಮಾಜದ ಬೇರೆಯವರಿಗೆ ಬಿಜೆಪಿ ಈ ಟಿಕೆಟ್ ಕೊಟ್ಟಿದ್ದರೆ ಅದಕ್ಕೊಂದು ಬೆಲೆಯಿತ್ತು. ಕೋಟ ಅವರಿಗೆ ಟಿಕೆಟ್ ಕೊಟ್ಟಿರುವುದು ಬಿಲ್ಲವ ಸಮಾಜಕ್ಕೆ ಲಾಭಕ್ಕಿಂತ ಹೆಚ್ಚು ಅನ್ಯಾಯವಾಗಿದೆ ಎಂದರು.