ಭಾರತೀಯ ಮೂಲದ ನೆಲ್ಲೂರು ತಳಿಯ ಹಸು ವಿಶ್ವದಲ್ಲೇ ದುಬಾರಿ
ಒಂದು ಹಸುವಿನ ಬೆಲೆ 40 ಕೋಟಿಯಿದ್ದೆ ಎಂದರೆ ಯಾರಿಗೂ ನಂಬಿಕೆ ಬರುವುದಿಲ್ಲ ಆದರೆ ನಿಜ ನಾಲ್ವತ್ತು ಕೋಟಿ ದುಡ್ಡು ಕೊಟ್ಟು
ಬ್ರೆಜಿಲ್ ದೇಶದ ಅರಾಂಡು ಎಂಬ ಪ್ರದೇಶದಲ್ಲಿ ನಡೆದ ಹರಾಜಿನಲ್ಲಿ ಕುಬೇರ ರೈತರೊಬ್ಬರು ಭಾರಿ ಮೊತ್ತವನ್ನು ಕೊಟ್ಟು 'ವಿಯಾಟಿನ್-19 ಎಫ್‌ಐವಿ ಮಾರಾ ಇಮೊವಿಸ್' ಎಂದು ಹೆಸರಿಸಲಾಗಿದ್ದ ಹಸುವನ್ನು ತೆಗೆದುಕೊಂಡು ಹೋಗುವುದನ್ನು ನೋಡಿದ್ದಾರೆ ಶಾಕ್ ಆಗುತ್ತೆ
ಹಾದಿಯುದ್ದಕ್ಕೂ ಇದೊಂದು ಅದ್ಭುತ ಜೀವಿ ಎಂದೆನಿಸಿತು. ಇದು ಮೂಲತಃ ಆಂಧ್ರ ಪ್ರದೇಶದ ನೆಲ್ಲೂರಿನ ತಳಿ. ಕಡು ಕಠಿಣ ಹವಾಮಾನಕ್ಕೂ ಕೊಂಚ ಕೂಡ ಅಂಜುವುದಿಲ್ಲ ಅಳುಕುವುದಿಲ್ಲ.
ರೋಗ ಬರುವುದಿಲ್ಲ. ಸಾಂಕ್ರಾಮಿಕ ರೋಗ ಹಬ್ಬಿದರೂ ಇದಕ್ಕೆ ತಾಕುವುದಿಲ್ಲ.
ನೆಲ್ಲೂರು ತಳಿಯ ಹಸು ವಿಶೇಷವೇನು
ಬಿಳಿ ಮೈ ಬಣ್ಣ, ಉಣ್ಣೆಯಂತಹ ಚರ್ಮ, ಎತ್ತರದ ಭುಜುಕ್ಕೆ ಹೆಸರುವಾಸಿಯಾಗಿದೆ. ನೆಲ್ಲೂರಿನಿಂದ ಬ್ರೆಜಿಲ್‌ಗೆ ಬಂದು ಇಲ್ಲಿ ನೆಲೆಯೂರಿ ಪ್ರವರ್ಧಮಾನಕ್ಕೆ ಬಂದಿದೆ. ನೆಲ್ಲೂರು ತಳಿಗೆ ದೊಡ್ಡ ಗತ ಇತಿಹಾಸವಿದೆ. ಅನುವಂಶಿಕ ಉತ್ಕೃಷ್ಟತೆಗೆ ಅನನ್ಯವಾದ ಹೆಸರು ಸಂಪಾದಿಸಿದೆ.
ಇದರ ವಂಶವಾಹಿ ಗುಣಗಳು, ಭ್ರೂಣದಿಂದ ಹುಟ್ಟುವ ಸಂತತಿ ಕೂಡ ಅಸಾಧಾರಣ ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂದು ಪಾಲ್ಗೊಂಡಿದ್ದ ಬಿಡ್‌ದಾರರು ಹೊಗಳಿದ್ದಾರೆ.