ಹೃದಯಾಘಾತದ ಮುಂಚೆ ಬರುವ ಲಕ್ಷಣಗಳು ಏನು
Friday, April 12, 2024
ಹೃದಯಾಘಾತದ ಬಗ್ಗೆ ನಿರ್ಲಕ್ಷ್ಯ ಬೇಡ ಎಚ್ಚರವಾಗಿರುವುದು ಅಗತ್ಯ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೃದಯ ಸಂಬಂಧಿ ಕಾಯಿಲೆಯಿಂದ ಪ್ರತಿ ವರ್ಷ ವಿಶ್ವದಾದ್ಯಂತ 17.9 ಮಿಲಿಯನ್ ಜನರು ಸಾಯುತ್ತಿದ್ದಾರಂತೆ. ಈ ಪೈಕಿ ಐದರಲ್ಲಿ ನಾಲ್ಕು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತವೆ. ಅದಲ್ಲದೆ, ಕೋವಿಡ್ ಸಮಯದ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿದೆ.
ಹೃದಯಾಘಾತವನ್ನು ಮೊದಲೇ ಪತ್ತೆ ಹಚ್ಚಿದರೆ ಜೀವ ಉಳಿಸಬಹುದು. ಇತ್ತೀಚಿನ ಸಂಶೋಧನೆಯು ಸುಮಾರು ಒಂದು ತಿಂಗಳ ಹಿಂದೆ ದೇಹದಲ್ಲಿ ಕಂಡುಬರುವ 7 ರೋಗಲಕ್ಷಣಗಳ ಬಗ್ಗೆ ಉಲ್ಲೇಖಿಸಿದೆ. ಈ ರೋಗಲಕ್ಷಣಗಳನ್ನು ನೀವು ಅರ್ಥಮಾಡಿಕೊಂಡರೆ ಹೃದಯಾಘಾತದಿಂದ ನಿಮ್ಮನ್ನು ಅಥವಾ ಬೇರೆಯವರನ್ನು ಉಳಿಸಬಹುದು
ಹೃದಯಾಘಾತವು ಇದ್ದಕ್ಕಿದ್ದಂತೆ ಬರುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ವಾಸ್ತವ ತೀರಾ ಭಿನ್ನವಾಗಿದೆ. ಹೃದಯಾಘಾತ ಸಂಭವಿಸುವ ಒಂದು ತಿಂಗಳ ಮೊದಲು. ದೇಹವು ಕೆಲವು ಬದಲಾವಣೆಗಳಿಗೆ ಒಳಗಾಗುತ್ತದೆ.
ಹೃದಯಾಘಾತದ ಆರಂಭಿಕ ಲಕ್ಷಣಗಳು
ಎದೆ ನೋವು ಎದೆಯ ಭಾರ ಹೆಚ್ಚಿದ ಹೃದಯ ಬಡಿತ
ಉಸಿರಾಟದ ತೊಂದರೆಗಳು ಎದೆ ಸುಡುವುದು ಆಯಾಸ
ನಿದ್ರೆ ಸಂಬಂಧಿತ ಸಮಸ್ಯೆಗಳು
ಪುರುಷರಿಗಿಂತ ಮಹಿಳೆಯರು ಹೃದಯಾಘಾತದ ಮೊದಲ ರೋಗಲಕ್ಷಣವನ್ನು ಅನುಭವಿಸುವ ಸಾಧ್ಯತೆ ಹೆಚ್ಚು ಎನ್ನಲಾಘಿದೆ. 50 ರಷ್ಟು ಮಹಿಳೆಯರು ಹೃದಯಾಘಾತಕ್ಕೂ ಮುನ್ನ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಎದೆ ನೋವು ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ.