ಬೇಸಿಗೆಯಲ್ಲಿ ನಮ್ಮ ಜೀವನ ಶೈಲಿ ಹೇಗಿರಬೇಕು
ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಬಿಸಿಲಿನಿಂದಾಗಿ ಶರೀರದಲ್ಲಿ ವಾತ ವೃದ್ಧಿಯಾಗುತ್ತದೆ. ಜೀರ್ಣಶಕ್ತಿ ದುರ್ಬಲವಾಗಿರುತ್ತದೆ . ಹಾಗಾಗಿ ಅಗ್ನಿಯನ್ನು ವೃದ್ಧಿಪಡಿಸಿ ಶರೀರಕ್ಕೆ ತಂಪನ್ನು ಮತ್ತು ಬಲವನ್ನು ಕೊಡುವ ಆಹಾರ - ಪಾನೀಯಗಳನ್ನು ಜೀವಿಸುವುದು ಉತ್ತಮ
ಯಾವ ರೀತಿಯ ಆಹಾರವನ್ನು ಸೇವಿಸುವುದು ಒಳ್ಳೆಯದು :
ಬಳಸುವ ಪದಾರ್ಥಗಳು ಜೀರ್ಣಕ್ಕೆ ಲಘುವಾಗಿದ್ದು ಸ್ವತಃ ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಿರುವುದು ಉತ್ತಮ
ಹಳೆಯ ಅಕ್ಕಿ, ಗೋಧಿಯ ಪದಾರ್ಥಗಳು, ಮೆಂತ್ಯ, ಬೇಳೆ-ಕಾಳುಗಳ ಬಳಕೆ ಮಿತವಾಗಿ ಬಳಸಿ ಬಳಸಿದ್ದರು ಸ್ವಲ್ಪ ತುಪ್ಪವನ್ನು ಸೇರಿಸಿ ಸಂಸ್ಕರಿಸಿ ಬಳಸುವುದು ಒಳ್ಳೆಯದು
ಕೊತ್ತಂಬರಿ, ಕರಿಬೇವು, ಗಣಿಕೆ, ಕೀರೆ-ಕಿಲಕೀರೆ-ಮುಳ್ಳುಕೀರೆ, ದಂಟು (ಹರಿವೆ) ಇತ್ಯಾದಿ ಸೊಪ್ಪುಗಳು, ಹಾಲು, ಕಡೆದ ಮಜ್ಜಿಗೆ (ಬೆಣ್ಣೆ
ತೆಗೆಯದೆ ಬಳಸಿ .
ಮಾವು, ಹಲಸು ಇತ್ಯಾದಿ ತಂಪನ್ನುಂಟುಮಾಡುವ ಹಣ್ಣುಗಳನ್ನೂ ಬಳಸಿ
ಅತಿ ಉಪ್ಪು-ಹುಳಿ-ಖಾರ ಪದಾರ್ಥಸೇವನೆ ಬೇಡ
ಎಂಥ ಪಾನೀಯಗಳನ್ನು ಬಳಸುವುದು ಉತ್ತಮ
ಎಳನೀರು ಅಥವಾ ಶರೀರಕ್ಕೆ ತಂಪನ್ನುಂಟುಮಾಡುವ ಇನ್ನಿತರ ಪದಾರ್ಥಗಳನ್ನೂ ಬಳಸಿ
ಶ್ರೀಗಂಧ / ಲಾವಂಚ /ಕಮಲದ ಗಡ್ಡೆ / ಧನಿಯಾ (ಕೊತ್ತಂಬರಿ ಬೀಜ) ಇತ್ಯಾದಿಗಳನ್ನು ಸೇರಿಸಿ ಬೆಳಿಗ್ಗೆ ಕುದಿಸಿಟ್ಟುಕೊಂಡು ತಣ್ಣಗಾದ /
ಎಳಬೆಚ್ಚನೆಯ ನೀರು ದಿನವಿಡೀ ಬಳಸಿ
ಈ ಕಾಲದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ.
ಯಾವ ರೀತಿ ಚಟುವಟಿಕೆ ಉತ್ತಮ ಬೇಸಿಗೆಯಲ್ಲಿ
ಹತ್ತಿಯ ಬಟ್ಟೆಗಳನ್ನು ಧರಿಸುವುದು.
ತಣ್ಣೀರಿನ ಸ್ನಾನ ಹಿತಕರವಾಗಿರುತ್ತದೆ
ಹಗಲು ನಿದ್ರೆ ಸ್ವಲ್ಪ ಪ್ರಮಾಣದಲ್ಲಿ ಮಾಡಿ
ತಂಪಾಗಿರುವ ಉದ್ಯಾನವನಗಳಲ್ಲಿ ವಿಹಾರ.
ವ್ಯಾಯಾಮ, ಅತಿಯಾದ ಬಿಸಿಲಿನ ಸೇವನೆ ಒಳ್ಳೆಯದಲ್ಲ.