-->
ಮತದಾರರಿಗೆ ಗುಡ್ ನ್ಯೂಸ್  , ಬೆಂಗಳೂರು ಸೇರಿ ಹಲವು ನಗರಗಳ ಮತಕಟ್ಟೆ ಯನ್ನು ಹುಡುಕುವುದು ಸುಲಭ

ಮತದಾರರಿಗೆ ಗುಡ್ ನ್ಯೂಸ್ , ಬೆಂಗಳೂರು ಸೇರಿ ಹಲವು ನಗರಗಳ ಮತಕಟ್ಟೆ ಯನ್ನು ಹುಡುಕುವುದು ಸುಲಭ


ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ದೇಶದಲ್ಲಿ ಹೊಸ ಪ್ರಯೋಗ ಕೈಗೊಂಡಿದೆ. 
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತಗಟ್ಟೆ ಸುಲಭವಾಗಿ ಹುಡುಕಲು ಸಾಧ್ಯವಾಗದಂತೆ ಮನೆ ಮನೆಗೆ
ನೀಡಲಾಗುವ ವೋಟರ್ ಸ್ಲಿಪ್ ಗಳಲ್ಲಿ ಮತಗಟ್ಟೆಯ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ.
ರಾಜ್ಯದ ನಗರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸೌಲಭ್ಯಗಳು ಕಲ್ಪಿಸಲಾಗುವುದು. ನಗರದ ನಿವಾಸಿಗಳು ಕ್ಯೂಆರ್ ಕೋಡ್ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲಾ ಮತದಾರರಿಗೆ ಒದಗಿಸಲಾಗುವುದು.
ಮತದಾನದ ಕೇಂದ್ರ, ದಿನಾಂಕ, ಸಮಯ ಮೊದಲಾದ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. ಆದರೆ, ಇದರಲ್ಲಿ ಮತದಾರರ ಫೋಟೋ ಇರುವುದಿಲ್ಲ. ಮತದಾರರ ಮಾಹಿತಿ ಚೀಟಿಯನ್ನು ಮತದಾರರ ಗುರುತಿನ ಪುರಾವೆಯಾಗಿ ಪರಿಗಣಿಸುವುದಿಲ್ಲ.
ಕೇಂದ್ರ ಚುನಾವಣಾ ಆಯೋಗ ವತಿಯಿಂದ ನಿಗದಿಪಡಿಸಲಾದ ಮತದಾರರ ಗುರುತಿನ ಚೀಟಿ ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಯಾವುದೇ ಇತರ ಗುರುತಿನ ಚೀಟಿಗಳನ್ನು ಗುರುತಿನ ಪುರಾವೆಯಾಗಿ ಬಳಸಬಹುದು

Ads on article

Advertise in articles 1

advertising articles 2

Advertise under the article