ನೀರು ಬಳಸುವಾಗ ಎಚ್ಚರವಿರಲಿ, ನೀರನ್ನು ಮಿತವಾಗಿ ಬಳಸಿ
ಮಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದರಿಂದ ಅಂತರ್ಜಲ ಕೂಡ ಬತ್ತಿ ಹೋಗುತ್ತಿದೆ. ಕುಡಿಯಲು ನೀರಿಲ್ಲದೇ ಜನರು ಪರದಾಡುವ ಸ್ಥಿತಿ ಬಂದಿದೆ. ಗಿಡ ಮರಗಳು, ಕೃಷಿ ಒಣಗುತ್ತಿದೆ. ಬದುಕು ಬದಲಾಗುತ್ತಿದೆ. ಗಾಳಿ, ನೀರು, ಪ್ರಕೃತಿ ಕೊರತೆಯಾಗುತ್ತಿದೆ. ಮನುಷ್ಯನ ಅತಿಯಾದ ಆಸೆ ಆತನನ್ನೇ ನಿಧಾನಕ್ಕೆ ಹಿಂಡಿ ಹಿಪ್ಪೆ ಮಾಡುತ್ತಿದೆ. ಗಾಳಿ, ನೀರನ್ನು ಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿದೆ.
ಪ್ರತಿ ಜೀವಿಗೂ ಬದುಕಲು ನೀರು ಬೇಕು. ಹೀಗಾಗಿ ಜಲ ಮೂಲಗಳ ಸಂರಕ್ಷಣೆ ಮಾಡುವುದು ಹಾಗೂ ನೀರು ಪೋಲು ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಎದುರಾಗುತ್ತಿದೆ. ಈಗ ನಾವು ನೀರನ್ನು ಮಿತವಾಗಿ ಬಳಸದಿದ್ದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಈಗಾಗಲೇ ಬೆಂಗಳೂರು ಸೇರಿ ಅನೇಕ ಕಡೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದೈನಂದಿನ ನೀರಿನ ಬಳಕೆ ಮೇಲೆ ಆಡಳಿತಗಳು ನಿರ್ಬಂಧ ಹೇರುತ್ತಿವೆ.
ಮುಂದಿನ ಪೀಳಿಗೆಗೂ ಸ್ವಲ್ಪ ನೀರು ಉಳಿಸಿ
ಮುಂದಿನ ಪೀಳಿಗೆಗೆ ನೀರಿನ ಅಭಾವ ತಡೆಯಲು ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು,
ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಬೇಕು.
ಮಿತವಾಗಿ ನೀರು ಬಳಸಬೇಕು ಹಾಗೂ ತ್ಯಾಜ್ಯ ನೀರನ್ನು ಸಂಸ್ಕರಿಸುವ ಮೂಲಕ ಮರುಬಳಕೆ ಮಾಡಬೇಕು.
ಪರಿಸರ ಉಳಿಸಬೇಕು.
ಪ್ರತಿ ಮನೆಯಲ್ಲೂ ಗಿಡ ಮರ ಬೆಳೆಸಬೇಕು.
ಅರಣ್ಯ ಪರಿಸರ ಕಾಪಾಡಬೇಕು.
ಈಗ ನಾವು ಮಾಡುವ ತಪ್ಪಿನ ಪ್ರತಿಫಲವನ್ನು ಮಕ್ಕಳು ಅನುಭವಿಸ ಬಾರದು, ಯೋಚನೆ ಮಾಡಿ ಮಿತವಾಗಿ ನೀರನ್ನು ಬಳಸಿ ಪರಿಸರವನ್ನು ರಕ್ಷಿಸಿ