-->
ಹೊಸ ಪಡಿತರ ಚೀಟಿ ಪಡೆಯುವವರಿಗೆ ಗುಡ್ ನ್ಯೂಸ್

ಹೊಸ ಪಡಿತರ ಚೀಟಿ ಪಡೆಯುವವರಿಗೆ ಗುಡ್ ನ್ಯೂಸ್


ರಾಜ್ಯದ ಅನೇಕ ಜನರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲ್ಲು ಬಯಸುವರಿಗೆ  ಗುಡ್ ನ್ಯೂಸ್ ನೀಡಿದೆ ರಾಜ್ಯ ಸರ್ಕಾರ
ಎಲ್ಲಾ ಅರ್ಜಿಯನ್ನು ಪರಿಶೀಲಿಸಿ ಏಪ್ರಿಲ್ 1ರಿಂದ ಹೊಸ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ರಾಜ್ಯ ಆಹಾರ ಇಲಾಖೆ ಮಾಹಿತಿ ನೀಡಿದೆ.
ಪಡಿತರ ಚೀಟಿಗಗೆ ಬಂದಿರುವ 2,95,986 ಅರ್ಜಿಗಳನ್ನು ಮಾರ್ಚ್ 31ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಹೊಸ ಪಡಿತರ ಚೀಟಿಗೆ ಇವರು ಅರ್ಜಿ ಸಲ್ಲಿಸಬಹುದು
* ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
* ಈಗಾಗಲೇ ಪಡಿತರ ಚೀಟಿಯನ್ನು ಹೊಂದಿರಬಾರದು.
* ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಬಹುದು
* ಕುಟುಂಬದ ಆದಾಯದ ಆಧಾರದ ಮೇಲೆ ಯಾವ ಪಡಿತರ ಚೀಟಿ ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.

ನೀವು https://ahara.kar.nic.inನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
*ವೋಟರ್ ಐಡಿ
*ಆಧಾರ್ ಕಾರ್ಡ್
*ವಯಸ್ಸಿನ ಪ್ರಮಾಣ ಪತ್ರ
*ಡ್ರೈವಿಂಗ್ ಲೈಸೆನ್ಸ್
*ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ
*ಮೊಬೈಲ್ ಸಂಖ್ಯೆ
*ಸ್ವಯಂ ಘೋಷಿತ ಪ್ರಮಾಣ ಪತ್ರ

Ads on article

Advertise in articles 1

advertising articles 2

Advertise under the article