-->
ವಾಕಿಂಗ್ ದೇಹಕ್ಕೆ ಎಷ್ಟು ಮುಖ್ಯ ,   ಸಂಶೋದನೆ ವಾಕಿಂಗ್ ಬಗ್ಗೆ  ಹೇಳುವುದೇನು

ವಾಕಿಂಗ್ ದೇಹಕ್ಕೆ ಎಷ್ಟು ಮುಖ್ಯ , ಸಂಶೋದನೆ ವಾಕಿಂಗ್ ಬಗ್ಗೆ ಹೇಳುವುದೇನು



 ಆಫೀಸಿನಲ್ಲಿ ಮತ್ತು ಮನೆಯಲ್ಲಿಯೂ ವರ್ಕ್ ಪ್ರಂ ಹೋಂ ಮಾಡುತ್ತ ಹೆಚ್ಚು ಸಮಯ ಕುಳಿತುಕೊಳ್ಳುವ ಕಾರಣ ನಾನಾ ರೋಗಗಳು ಅಮರಿಕೊಳ್ಳುತ್ತಿವೆಯಂತೆ. ಜಡ ಜೀವನಶೈಲಿಯು ಡಯಾಬಿಟಿಸ್, ಹೃದಯ ಸಮಸ್ಯೆಯಂತಹ ಕಾಯಿಲೆಗಳಿಗೆ ಅದರಿಂದ ಮರಣಕ್ಕೆ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದ್ದರಿಂದ, ನೀವು ಕುಳಿತುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು ಅವಶ್ಯಕ. 
ಅಮೇರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವಿದು ಸಂಶೋಧನಾ ತಂಡವು 11 ಸ್ವಯಂಸೇವಕರನ್ನು ನೇಮಿಸಿಕೊಂಡಿತು. ಎಂಟು ಗಂಟೆಗಳ ಕಾಲ ಕುರ್ಚಿಯಲ್ಲಿ ಕುಳಿತಿರಲು ಸೂಚಿಸಿತು. ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಲು, ಅವರ ಪೋನ್‌‌ಗಳನ್ನು ಓದಲು ಮತ್ತು ಬಳಸಲು ಅವರಿಗೆ ಅವಕಾಶ ನೀಡಲಾಯಿತು. 40ರಿಂದ 60 ವರ್ಷ ವಯಸ್ಸಿನ ಇವರಿಗೆ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇರಲಿಲ್ಲ. ಅವರು ಐದು ದಿನ ಮುಂದಿನ ಐದು ವಿಧಾನಗಳನ್ನು ಪರೀಕ್ಷಿಸಿದರು.
ಮೊದಲನೆಯದಾಗಿ, ಎಂಟು ಗಂಟೆಗಳ ಕಾಲ ವಾಕಿಂಗ್ ಇಲ್ಲ ನಂತರ ಪ್ರತಿ ಅರ್ಧ ಗಂಟೆಗೆ ಒಂದು ನಿಮಿಷ ಪ್ರತಿ ಗಂಟೆಗೆ ಒಂದು ನಿಮಿಷ ಪ್ರತಿ ಅರ್ಧ ಗಂಟೆಗೆ ಐದು ನಿಮಿಷಗಳು ಮತ್ತು ಅಂತಿಮವಾಗಿ ಪ್ರತಿ ಗಂಟೆಗೆ ಐದು ನಿಮಿಷಗಳು .
ಯಾವುದು ಉತ್ತಮವಾಗಿತ್ತು ಗೊತ್ತೆ?
ಪ್ರತಿ ಅರ್ಧ ಗಂಟೆಗೊಮ್ಮೆ ಕುಳಿತಲ್ಲಿಂದ ಎದ್ದು ಐದು ನಿಮಿಷಗಳ ನಡೆಯುವುದು ಒಳ್ಳೆಯದು.ನೀವು ಸುದೀರ್ಘ ಕಾಲ ಕುಳಿತುಕೊಳ್ಳುವುದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸುತ್ತದೆ.
 ಪ್ರತಿ ಬಾರಿಯೂ ಕಾರ್ಡಿಯೋಮೆಟಾಬಾಲಿಕ್ ಅಪಾಯಕಾರಿ ಅಂಶಗಳು ಕಡಿಮೆಯಾಗುತ್ತವೆ.  ಇಡೀ ದಿನ ಕುಳಿತುಕೊಳ್ಳುವುದಕ್ಕೆ ಹೋಲಿಸಿದರೆ ಇದು ರಕ್ತದಲ್ಲಿನ ಸಕ್ಕರೆಯ ಸ್ಟೈಕ್ ಅನ್ನು 58ಸಿರಷ್ಟು ಕಡಿಮೆ ಮಾಡುತ್ತದೆ ಎಂದು ವಿಶ್ವವಿದ್ಯಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಚಟುವಟಿಕೆಯಿಂದ ಇರುವುದು ಹೇಗೆ 
- ದಿನವಿಡೀ ಓಡಾಡಲು ಕಾರಣಗಳನ್ನು ಹುಡುಕಿಕೊಳ್ಳಿ,
- ಕುಡಿಯುವ ನೀರನ್ನು ಸಿಟ್ ನಿಂದ ದೂರವಿಡಿ. ಅದರ ನೆವದಲ್ಲಿ ಎದ್ದು ಓಡಾಡಿ.
-ಮೆಟ್ಟಿಲುಗಳನ್ನು ಹತ್ತಿ ಇಳಿಯಿರಿ. ಅದು ಇನ್ನಷ್ಟ ಉತ್ತಮ ಅದು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
-ಪೋನ್ ಬಂದಾಗ ಎದ್ದು ನಿಂತು ಓಡಾಡುತ್ತಾ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ
- ವರ್ಕ್ ಫ್ರಂ ಹೋಂ ಮಾಡುವವರಾದರೆ ಹಾಸಿಗೆ ಅಥವಾ ಫೋಮ್ ಬೆಡ್ ಮೇಲೆ ಕುಳಿತುಕೊಳ್ಳಬೇಡಿ

Ads on article

Advertise in articles 1

advertising articles 2

Advertise under the article