ಯುಗಾದಿ ಹಬ್ಬದ ಹಿಂದಿನ ಕಥೆಯ ಬಗ್ಗೆ ನಿಮಗೆಷ್ಟು ಗೊತ್ತು
ಹಬ್ಬದ ಆಚರಣೆಯ ಸುತ್ತಮುತ್ತ ಹರಡಿರುವ ಕಥೆಗಳು ಸಂಪ್ರದಾಯ ಎಲ್ಲರನ್ನು ಆಕರ್ಷಿಸುತ್ತದೆ .ಆದರಲ್ಲಿಯು ಯುಗಾದಿ ಹಬ್ಬದ ದಿನ ರಾತ್ರಿ ಕಾದು ಕೂತು ಹುಡುಕಿ ಚಂದಿರನ ನೋಡುವ ಸಂಪ್ರದಾಯದ ಹಿಂದೆ ಇರುವ ಕಥೆ ಎಲ್ಲರನ್ನೂ ಸಹ ಸೆಳೆಯುತ್ತದೆ.
ಚಂದ್ರಮಾನ ಯುಗಾದಿ ಎಂದು ಕೂಡ ಯುಗಾದಿ ಹಬ್ಬಕ್ಕೆ ಕರೆಯುತ್ತಾರೆ.
ಯುಗಾದಿ ಹಬ್ಬದ ದಿನ ಹಬ್ಬದ ಊಟ ಮುಗಿಸಿ ರಾತ್ರಿ ಚಂದ್ರನ ನೋಡುವುದು ಏಷ್ಟು ಮಜಾಯಿದ್ದೆಯೋ ಅಷ್ಟೇ ಮಜಾ
ಚಂದ್ರನ ನೋಡುವುದರ ಹಿಂದೆ ಇರುವ ಧಾರ್ಮಿಕ ಕಥೆ ಕೂಡ ಅಷ್ಟೇ ಸೊಗಸಾಗಿದೆ .
ಗಣೇಶ ಚತುರ್ಥಿ ಸಮಯದಲ್ಲಿ ಗಣೇಶ ಎಲ್ಲಾರ ಮನೆಯ ಮೋದಕ ಕಡುಬು ತಿಂದು ಹೊಟ್ಟೆ ದೊಡ್ಡ ಮಾಡಿಕೊಂಡು ಗದ್ದೆ ಬಯಲಲ್ಲಿ ಬರುವಾಗ ಜಾರಿ ಬಿದ್ದು ಗಣೇಶನ ಹೊಟ್ಟೆ ಒಡೆದು ಹೋಗುತ್ತದೆ ಅಗ ಗಣೇಶ ಪಕ್ಕದಲ್ಲಿ ಹರಿದು ಹೋಗುತ್ತಿದ ಹಾವು ಹಿಡಿದು ಹೊಟ್ಟೆಗೆ ಕಟ್ಟುಕೊಳ್ಳುತ್ತಾನೆ ಇದನ್ನೆಲ್ಲ ಮೇಲಿನಿಂದ ನೋಡುತ್ತಿದ ಚಂದ್ರ ಜೋರಾಗಿ ನಗುತ್ತಾನೆ ಅಗ ಗಣೇಶನಿಗೆ ಸಿಟ್ಟು ಬಂದು ತನ್ನ ಒಂದಿ ದಂತವನ್ನು ಮುರಿದು ಚಂದ್ರನ ಮೇಲೆ ಎಸೆದು "ಗಣೇಶ
ಚತುರ್ಥಿ ಅಂದು ಚಂದ್ರನ ನೋಡಿದ್ದವರಿಗೆ ಅಪವಾದ ತಪ್ಪಿದ್ದಲ್ಲ ಎಂಬ ಶಾಪವನ್ನು ಕೊಡುತ್ತಾನೆ".
ಇದರಿಂದ ತನ್ನ ತಪ್ಪಿನ ಅರಿವಾಗಿ ಚಂದಿರ ಕ್ಷಮೆಯನ್ನು ಕೇಳುತ್ತಾ ಶಾಪದ ಪರಿಹಾರವನ್ನು ಯಾಚಿಸುತ್ತೇನೆ ಅಗ ಗಣೇಶ ನೀನು ಯೋಚನೆ ಮಾಡುವುದು ಬೇಡ ಗಣೇಶ ಹಬ್ಬದ ದಿನ ಚಂದ್ರನನ್ನು ನೋಡಿದವರು ಯುಗಾದಿ ಹಬ್ಬದ ದಿನ ಚಂದ್ರನನ್ನು ನೋಡಿದರೆ ಅವರ ಶಾಪ ವಿಮೋಚನೆ ಆಗುತ್ತದೆ ಎಂದು ಹೇಳಿ ಅಭಯವನ್ನೂ ನೀಡುತ್ತಾನೆ ಎಂಬ ವದಂತಿಯಿದ್ದೆ . ಹಾಗಾಗಿ ಯುಗಾದಿ ಹಬ್ಬದ ದಿನ ಚಂದಿರನು ನೋಡುವ ಪದ್ಧತಿ ರೂಡಿಯಾಲ್ಲಿ ಉಂಟು
ಯುಗಾದಿ ಹಬ್ಬದ ದಿನ ಆಚರಣೆಯಲ್ಲಿ ಇರುವ ಇನ್ನೊಂದು ಪದ್ಧತಿ ಬೇವು ಬೆಲ್ಲ ಸೇವಿಸುವುದು. ಈ ಬೇವು ಬೆಲ್ಲವು ಜೀವನದ ಸುಖ ದುಃಖ ಸೂಚಿಸುತ್ತದೆ
ಬೇವು ಬೆಲ್ಲ ತಿಂದು ಒಳ್ಳೇ ಮಾತಾಡು ಎಂದು ಹೇಳುವ ಸಂಪ್ರದಾಯಯಿದ್ದೆ ಜೀವನದಲ್ಲಿ ಬೇವು ಬೆಲ್ಲ ಅಂದ್ರೆ ಸುಖ ದುಃಖ ಎರಡು ಸಮನಾಗಿ ಇರಬೇಕು ಎಂಬುದನ್ನು ಸೂಚಿಸುತ್ತದೆ.
ಏನೇ ಇರಲಿ ಈ ಕಥೆಗಳು ಪದ್ಧತಿಗಳು ಎಲ್ಲಾರನ್ನು ಒಮ್ಮೆಲೆ ಜುಮ್ಮು ಎನಿಸುವುದಲ್ಲದೇ ಹಲವು ನೀತಿಪಾಠವನ್ನು ಕಳಿಸುತ್ತಾದೆ