ಮದುವೆ ಆಲ್ಲಿ ಡ್ಯಾನ್ಸ್ ಮಾಡುತ್ತ ಸಾವನ್ನಪ್ಪಿದ ಮಾವ, ವಿಡಿಯೋ ಎಲ್ಲಡೆ ವೈರಲ್
Tuesday, April 30, 2024
ರಾಜಸ್ಥಾನದ ಝುಂಝುಂನ್ ಜಿಲ್ಲೆಯ ನವಲ್ಗರ್ ತೆಪ್ಪಿಲ್ನ ಲೊಚ್ಚಾ ಪ್ರದೇಶದ ಧನಿ ಎಂಬಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಕಮಲೇಶ್ ಧಾಕ ಎಂದು ಗುರುತಿಸಲಾಗಿದೆ. ಇವರು ವರನಿಗೆ ಸಂಬಂಧದಲ್ಲಿ ಮಾವನಾಗಿದ್ದು, ಅಳಿಯನ ಮದುವೆಯ ಖುಷಿಯಲ್ಲಿದ್ದ ಅವರು ಮಧ್ವ ಮೆರವಣಿಗೆಯಲ್ಲಿ ತಲೆ ಮೇಲೆ ಮಡಿಕೆ ಇಟ್ಟುಕೊಂಡು ಮಟ್ಕಾ ಡಾನ್ಸ್ ಮಾಡುತ್ತಿದ್ದರು.
ತಲೆಯ ಮೇಲೆ ನೀರು ಪೂರ್ತಿ ತುಂಬಿದ ಮಣ್ಣಿನ ಮಡಕೆ ಇಟ್ಟುಕೊಂಡು ಖುಷಿಯಿಂದ ಅವರು ನರ್ತಿಸುತ್ತಿದ್ದರು. ಆದರೆ ಒಮ್ಮಿಂದೊಮ್ಮೆಲೆ ಕಮಲೇಶ್ ಕುಸಿದು ಬಿದ್ದಿದ್ದಾರೆ. ಇದರಿಂದ ಅವರ ತಲೆಯಲ್ಲಿದ್ದ ಮಣ್ಣಿನ ಮಡಕೆ ಒಡೆದು ಹೋಗಿದೆ. ಕೂಡಲೇ ಅಲ್ಲಿದ್ದವರೆಲ್ಲಾ ಸೇರಿ ಕಮಲೇಶ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು, ಕಮಲೇಶ್ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಅವರಿಗೆ ಡಾನ್ಸ್ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿದ್ದು, ಇದರಿಂದ ಅವರು ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮದ್ದೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಮಡುಗಟ್ಟಿತ್ತು.
ಶ್ರಮ ಜೀವಿಯಾಗಿದ ಕಮಲೇಶ್ :
ನವಲ್ಗರ್ ಚೌಖನಿಯ ಗ್ಯಾಸ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಾಗೂ ಗ್ರಾಹಕರಿಗೆ ಮನೆ ಮನೆಗೆ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಬಂದು ಪೂರೈಕೆ ಮಾಡುತ್ತಿದ್ದರು. ಆದರೆ ಇವರ ದಿಢೀರ್ ಸಾವು ಗ್ರಾಮದಲ್ಲಿ ಬೇಸರದ ವಾತಾವರಣ ಸೃಷ್ಟಿ ಮಾಡಿದೆ. ನಂತರ ಅವರ ಅಂತ್ಯಕ್ರಿಯೆಯನ್ನು ಗ್ರಾಮಸ್ಥರೆಲ್ಲ ಸೇರಿ ನಡೆಸಿದ್ದು, ಬಳಿಕ ಮದ್ದೆ ಕಾರ್ಯ ಮುಗಿಸಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಕೋವಿಡ್ ನಂತರ ಇಂತಹ ಘಟನೆಗಳು ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ