ದ್ರಾಕ್ಷಿಯನ್ನು ಹೇಗೆ ತೊಳೆಯುವುದು
ಬೇಸಿಗೆ ಪ್ರಾರಂಭವಾಗಿದೆ ಬೇಸಿಗೆ ಧಗೆ ಹೆಚ್ಚಾಗಿದೆ ಜನರು ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹಣ್ಣಿನ ಜ್ಯೂಸ್ ಗಳು ಎಲ್ಲ ಕಾಲದ ಆರೋಗ್ಯ ಪ್ರಿಯರ ಫೇವರಿಟ್ ಆಗಿದ್ದು, ಆದರೆ ಈಗ ಕೀಟನಾಶಕಗಳದ್ದೇ ಚಿಂತೆಯಾಗಿದೆ. ಹಣ್ಣುಗಳಲ್ಲಿ ಎಲ್ಲರೂ ಹೆಚ್ಚಾಗಿ ಇಷ್ಟಪಡುವ ದ್ರಾಕ್ಷಿ ಹಣ್ಣು ಹೆಚ್ಚಾಗಿ ಕೀಟಬಾಧೆಗೆ ಒಳಗಾಗುವುದರಿಂದ ಅದಕ್ಕೇ ಕೀಟನಾಶಕ ಸಿಂಪಡಣೆ ಹೆಚ್ಚು.
ದ್ರಾಕ್ಷಿ ತೊಳೆಯದೆ ಸೇವನೆ ಮಾಡಿದ್ದಾರೆ ಎನ್ ಆಗುತ್ತೆ.
ಜಗತ್ತಿನ ಅತ್ಯಧಿಕ ಮಟ್ಟದ ಕೀಟನಾಶಕಗಳನ್ನು ಹೊಂದಿರುವ ಹಣ್ಣುಗಳಲ್ಲಿ ದ್ರಾಕ್ಷಿ ಇದ್ದೆಯಾಕೆಂದರೆ ದ್ರಾಕ್ಷಿ ಹಣ್ಣಿಗೆ ಕೀಟಬಾಧೆ ಹೆಚ್ಚು ಹಾಗಾಗೀ ಇಂತಹ ದ್ರಾಕ್ಷಿಯನ್ನು ಸ್ವಚ್ಛ ಮಾಡದೇ ಸೇವಿಸಿದರೆ ಆ ಸೂಕ್ಷ್ಮಜೀವಿಗಳು ದೇಹ ಸೇರಿ ಆಹಾರದಿಂದ ಹರಡುವ ಅನಾರೋಗ್ಯವನ್ನು ಉಂಟುಮಾಡಬಹುದು. ಹೀಗಾಗಿ ದ್ರಾಕ್ಷಿಯನ್ನು ತಿನ್ನುವ ಮೊದಲು ತೊಳೆದು ತಿನ್ನುವುದು ಒಳ್ಳೆಯದು.
ದ್ರಾಕ್ಷಿಯನ್ನು ಯಾವಾಗ ತೊಳೆಯಬೇಕು?
ಎಲ್ಲರೂ ದ್ರಾಕ್ಷಿಯನ್ನ ಮನೆಗೆ ತಂದೊಡನೆಯೇ ಎಲ್ಲವನ್ನೂ ನೀರು ಹಾಕಿ ಸ್ವಚ್ಛಗೊಳಿಸುತ್ತಾರೆmಹಾಗೆ ಮಾಡಬಾರದು ಯಾಕೆಂದರೆ ಎಲ್ಲ ದ್ರಾಕ್ಷಿ ಹಣ್ಣುಗಳನ್ನು ಏಕಕಾಲದಲ್ಲಿ ಸ್ವಚ್ಛಗೊಳಿಸಿದರೆ, ಆ ಸಮಯದಲ್ಲಿ ನೀವು ತಿನ್ನದೇ ಬಿಟ್ಟ ಹಣ್ಣಿಗೂ ಹೆಚ್ಚುವರಿ ತೇವಾಂಶ ಸೇರಿ ಅದು ಬೇಗ ಕೊಳೆಯುತ್ತದೆ ಹಾಗಾಗಿ ತಿನ್ನಲು ಇಚ್ಚಿಸಿದ ಪ್ರಮಾಣದಷ್ಟು ದ್ರಾಕ್ಷಿ ಹಣ್ಣನ್ನು ಮಾತ್ರ ತೊಳೆಯಬೇಕು.
ದ್ರಾಕ್ಷಿ ತೊಳೆಯುವುದು ಹೇಗೆ?
ದ್ರಾಕ್ಷಿ ತೊಳೆಯುವುದು ಕಷ್ಟದ ಕೆಲಸವೇನಲ್ಲ.. ಆದರೆ ಹಣ್ಣು ಸಾಧ್ಯವಾದಷ್ಟು ಕೀಟನಾಶಕ ರಹಿತ ಮತ್ತು ಸ್ವಚ್ಛತೆ ಖಚಿತಪಡಿಸಿಕೊಳ್ಳಲು ನೀವು ಕೆಲವು ಹಂತಗಗಳನ್ನು ಅನುಸರಿಸಬೇಕು. ಮೊದಲಿಗೆ ಒಂದು ಬಟ್ಟಲಿನಲ್ಲಿ ದ್ರಾಕ್ಷಿ ಹಣ್ಣುಗಳನ್ನು ಹಾಕಿ ನಲ್ಲಿಯಿಂದ ನೀರು ಬಿಡಿ.. ನಿ ಹೇಗೆ ಧಾನವಾಗಿ ಕೈಗಳಿಂದ ದ್ರಾಕ್ಷಿ ಹಣ್ಣನ್ನು ಸ್ವಚ್ಛಗೊಳಿಸಿ. ಬಳಿಕ ಈ ನೀರಿನಲ್ಲಿ ಸುಮಾರು 5 ರಿಂದ 10 ನಿಮಿಷಗಳ ಕಾಲ ದ್ರಾಕ್ಷಿಯನ್ನು ನೆನೆಸಿಡಿ. ಬಳಿಕ ಅದೇ ಪಾತ್ರೆಗೆ ಅಡುಗೆ ಉಪ್ಪು.. ಸೋಡಾ ಅಥವಾ ವಿನೆಗರ್ ಹಾಕಿ.. ಮತ್ತೆ ಸ್ವಚ್ಛಗೊಳಿಸಿ.
ಇದರಿಂದ ಹಣ್ಣಿನ ಮೇಲಿರುವ ಸುಮಾರು ಶೇ.75ರಿಂದ 80ರಷ್ಟು ಕಿಟನಾಶಕ ಸ್ವಚ್ಛವಾಗುತ್ತದೆ. ಬಳಿಕ ದ್ರಾಕ್ಷಿ ಹಣ್ಣನ್ನು ತೆಗೆದು ಮತ್ತೊಮ್ಮೆ ಸ್ವಚ್ಛವಾದ ನೀರಿನಲ್ಲಿ ಹಾಕಿ ಮತ್ತೊಮ್ಮೆ ಸ್ವಚ್ಛಗೊಳಿಸಿ. ಬಳಿಕ ಸ್ವಚ್ಛವಾದ ಟವಲ್ ನಲ್ಲಿ ದ್ರಾಕ್ಷಿ ಹಣ್ಣನ್ನು ಹಾಕಿ ಅದರ ಮೇಲಿರುವ ನೀರನ್ನು ಒರೆಸಿ. ಸಣ್ಣ ಸಣ್ಣ ರಂದ್ರಗಳಿರುವ ಪಾತ್ರೆಗೆ ಹಾಕಿ ಅದನ್ನು ಶೇಖರಿಸಿಟ್ಟು ಕೆಲ ಸಮಯದ ನಂತರ ಸೇವಿಸಿ.