ದ.ಕ , ಶಿವಮೊಗ್ಗ ದಲ್ಲಿ ಕಾಂಗ್ರೆಸ್, ಉಡುಪಿಯಲ್ಲಿ ಬಿಜೆಪಿ ಬೆಂಬಲಿಸಲು ಸತ್ಯಜಿತ್ ಸುರತ್ಕಲ್ ನಿರ್ಧರಿಸಲು ಕಾರಣ ಇದು! Sathyajith surathkal
Monday, April 1, 2024
ದ.ಕ , ಶಿವಮೊಗ್ಗ ದಲ್ಲಿ ಕಾಂಗ್ರೆಸ್, ಉಡುಪಿಯಲ್ಲಿ ಬಿಜೆಪಿ ಬೆಂಬಲಿಸಲು ಸತ್ಯಜಿತ್ ಸುರತ್ಕಲ್ ನಿರ್ಧರಿಸಲು ಕಾರಣ ಇದು!
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತ್ಯಜಿತ್ ಸುರತ್ಜಲ್ ಶ್ರೀ ನಾರಾಯಣಗುರು ವಿಚಾರ ವೇದಿಕೆಯಿಂದ ಮೂರು ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ತಿಳಿಸಿದರು.
ಅನೇಕ ವರ್ಷಗಳ ಬಳಿಕ ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಮೂವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ನೀಡಿದೆ. ಆದ್ದರಿಂದ ದ.ಕ.ಜಿಲ್ಲೆಯಲ್ಲಿ ಪದ್ಮರಾಜ್, ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಪ್ರಯತ್ನವನ್ನು ಶ್ರೀ ನಾರಾಯಣಗುರು ವಿಚಾರವೇದಿಕೆ ಮಾಡಲಿದೆ. ಈ ಮೂವರು ಗೆದ್ದಲ್ಲಿ ಸಮಾಜಕ್ಕೊಂದು ಬಲ ಬರಲಿದೆ. ಆದ್ದರಿಂದ ಸಮಾಜ ಬಾಂಧವರು ಪಕ್ಷಗಳನ್ನು ಬದಿಗೊತ್ತಿ ಈ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಸತ್ಯಜಿತ್ ಸುರತ್ಕಲ್ ಕರೆ ನೀಡಿದರು.