ಉಡುಪಿ ಗ್ಯಾಂಗ್ ವಾರ್ ಪ್ರಕರಣ ಆರೋಪಿಗಳಿಗೆ 14ದಿನ ನ್ಯಾಯಾಂಗ ಬಂಧನ
Tuesday, May 28, 2024
ಉಡುಪಿ : ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡು ರಸ್ತೆಯಲ್ಲಿ ನಡೆದ ಗರುಡ ಗ್ಯಾಂಗ್ ನಡುವಿನ ಗ್ಯಾಂಗ್ ವಾರ್ ಪ್ರಕರಣ ಸಂಬಂಧ ಬಂಧಿತರಾದ ಆರು ಮಂದಿ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಉಡುಪಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಾಪು ಕೊಂಬಗುಡ್ಡೆ ಮೂಲದ ಆಶಿಕ್, ತೋನ್ಸೆ ಹೂಡೆಯ ರಾಕೀಬ್ ಹಾಗೂ ಸಸ್ಟೈನ್, ಬ್ರಹ್ಮಾವರದ ಶರೀಫ್, ಕಾಪು ಮೂಲದ ಮಜೀದ್, ಅಲಾಝ್ ಪ್ರಕರಣದ ಬಂಧಿತ ಆರೋಪಿಗಳು. ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.