24 ವರ್ಷಗಳ ಬಳಿಕ ಗುರು - ಶುಕ್ರ ಸಂಯೋಗ! ಈ ಮೂರು ರಾಶಿಯವರಿಗೆ ಬಹಳ ಸಂಕಷ್ಟ..!
Sunday, May 12, 2024
ವೃಷಭ ರಾಶಿ
ಗುರು ಮತ್ತು ಶುಕ್ರ ಜೊತೆಯಾಗಿ ಅಸ್ತಮಿಸಿರುವುದರಿಂದ ವೃಷಭ ರಾಶಿಯ ಜನರಿಗೆ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ಈ ಸಂದರ್ಭದಲ್ಲಿ ಈ ರಾಶಿಯ ಜನರು ವೃತ್ತಿ ಸಂಬಂಧಿತ ತೊಂದರೆಗಳನ್ನು ಎದುರಿಸಬಹುದು. ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಸಣ್ಣ ಕೆಲಸ ಮಾಡಿ ಮುಗಿಸುವುದಕ್ಕೂ ಹೆಚ್ಚಿನ ಶ್ರಮ ಹಾಕಬೇಕಾಗಿ ಬರುತ್ತದೆ. ಮೇಲಧಿಕಾರಿಗಳ ಜೊತೆ ಮನಸ್ತಾಪ ಉಂಟಾಗಬಹುದು. ಅದರಿಂದ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗಿ ಬರುತ್ತದೆ.
ಸಿಂಹ ರಾಶಿ
ಗುರು ಮತ್ತು ಶುಕ್ರ ಸೇರಿಕೊಂಡು ಸಿಂಹ ರಾಶಿಯವರಿಗೂ ತೊಂದರೆ ಉಂಟು ಮಾಡಲಿದ್ದಾರೆ. ವಿಶೇಷವಾಗಿ ವೃತ್ತಿ ಜೀವನದಲ್ಲಿ ದೊಡ್ಡ ದೊಡ್ಡ ಹಂಪ್ ಗಳು ಎದುರಾಗಲಿವೆ. ಸುಗಮ ಪ್ರಯಾಣ ಇರುವುದಿಲ್ಲ. ಕೆಲಸಕ್ಕೆ ಸಂಬಂಧಿಸಿದಂತೆ ದೂರದೂರಿನ ಪ್ರವಾಸ ಮಾಡಬೇಕಾಗಿ ಬರಬಹುದು. ಆದರೆ ಅದರಿಂದ ನಯಾ ಪೈಸೆ ಪ್ರಯೋಜನ ಆಗುವುದಿಲ್ಲ.
ವೃಶ್ಚಿಕ ರಾಶಿ
ಶುಕ್ರ ಮತ್ತು ಗುರು ಅಸ್ತಮಿಸಿರುವುದರಿಂದ ವೃಶ್ಚಿಕ ರಾಶಿಗೂ ತೊಂದರೆ ಎದುರಾಗಲಿದೆ. ಅನನುಕೂಲಗಳೇ ಎದುರಿಗೆ ಕಾಣಿಸುತ್ತದೆ. ಅದೃಷ್ಟದ ಬೆಂಬಲ ಇರುವುದಿಲ್ಲ. ಅದರಿಂದ ಮಾಡುವ ಪ್ರತೀ ಕೆಲಸದಲ್ಲೂ ಅಡೆತಡೆ ಎದುರಾಗುತ್ತದೆ. ವೃತ್ತಿ ಜೀವನದಲ್ಲಿ ಸಣ್ಣ ಕೆಲಸ ಪೂರ್ತಿ ಗೊಳಿಸುವುದಕ್ಕೂ ಭಾರಿ ಶ್ರಮ ಹಾಕಬೇಕಾಗುತ್ತದೆ. ಬೇರೆಯವರ ನೆರವು ಸಿಗುವುದಿಲ್ಲ. ಒತ್ತಡದ ವಾತಾವರಣ ಸೃಷ್ಟಿಯಾಗುತ್ತದೆ.