ಮಂಗಳೂರು: 5ತಿಂಗಳ ಹಸುಗೂಸಿನ ಚಿಕಿತ್ಸೆಗೆ ಕೇವರ ಎರಡು ದಿನಗಳಲ್ಲಿ ಸಂಗ್ರಹವಾಯ್ತು ಬರೋಬ್ಬರಿ 60.62 ಲಕ್ಷ ರೂಪಾಯಿ
Thursday, May 2, 2024
ಮಂಗಳೂರು: ಹುಟ್ಟಿದ ಕೇವಲ ಐದೇ ತಿಂಗಳಿಗೆ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಹಸುಗೂಸು ಪ್ರಿಯೋನ್ ಸ್ಯಾಮ್ ಮೊಂತೇರೊ ಶಸ್ತ್ರಚಿಕಿತ್ಸೆಗೆ ಕೇವಲ ಎರಡು ದಿನಗಳಲ್ಲಿ ಬರೋಬ್ಬರಿ 60.62 ಲಕ್ಷ ರೂ. ಸಂಗ್ರಹವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಶಸ್ತ್ರಚಿಕಿತ್ಸೆಗೆ 50 ಲಕ್ಷ ರೂ. ಅವಶ್ಯಕಯಿತ್ತು. ಎರಡು ದಿನಗಳ ಹಿಂದೆ ಹೆತ್ತವರು ಈ ಬಗ್ಗೆ ದಾನಿಗಳಲ್ಲಿ ಮನವಿ ಮಾಡಿದ್ದರು. ಈ ಮನವಿಗೆ ದೇಶ - ವಿದೇಶಗಳಿಂದ ದಾನಿಗಳು ಸ್ಪಂದಿಸಿದ್ದು, ಕೇವಲ ಎರಡು ದಿನಗಳಲ್ಲಿ 60.62 ಲಕ್ಷ ರೂ. ಸಂಗ್ರಹವಾಗಿದೆ. ಸದ್ಯ ಮಗುವಿನ ಚಿಕಿತ್ಸೆಗೆ ಅಗತ್ಯವಿರುವಷ್ಟು ಹಣ ಸಂಗ್ರಹವಾಗಿದೆ. ಆದ್ದರಿಂದ ಇನ್ನು ಖಾತೆಗೆ ಹಣ ಹಾಕುವುದು ಬೇಡವೆಂದು ಮಗುವಿನ ಹೆತ್ತವರು ಕೊಣಾಜೆ ನಿವಾಸಿ ಸಂತೋಷ್ ಮೊಂತೇರೊ ಮತ್ತು ಪ್ರಿಯಾ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು ಅವರು, ಐದು ತಿಂಗಳ ಪ್ರಿಯೋನ್ ಸ್ಯಾಮ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸಹಕರಿಸುವಂತೆ ತಿಳಿಸಿದ್ದರು. ಮಗುವಿನ ತಾಯಿ ಪ್ರಿಯಾ ಮಗುವಿನ ಸ್ಥಿತಿಯ ಕುರಿತು ನಾರಾಯಣ ಹೃದಯಾಲಯ ಆಸ್ಪತ್ರೆಯಿಂದ ವೀಡಿಯೋ - ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು. ಇದೋಗ ಎಲ್ಲ ಜಾತಿ ಧರ್ಮ ಬೇಧ ಮರೆತು ಎಲ್ಲರೂ, ಸಂಘ - ಸಂಸ್ಥೆಗಳು, ದಾನಿಗಳು ಸಹಾಯಹಸ್ತ ದೊರಕಿದೆ. ನಾರಾಯಣ ಹೃದಯಾಲಯದಲ್ಲಿ ಮಗುವಿಗೆ ಒಂದು ಹಂತದ ಶಸ್ತ್ರ ಚಿಕಿತ್ಸೆ ನಡೆದಿದ್ದು, ಮಗು ಆರೋಗ್ಯವಾಗಿದೆ ಎಂದು ಮಗುವಿನ ಹೆತ್ತವರಿಂದ ಮಾಹಿತಿ ಬಂದಿದೆ.