ಮಾಲವ್ಯ ರಾಜಯೋಗದ ಪ್ರಭಾವದಿಂದ ಈ 6 ರಾಶಿಯವರಿಗೆ ಅಪಾರ ಸಂಪತ್ತು ಪ್ರಾಪ್ತಿ..!
Friday, May 10, 2024
ಮಕರ ರಾಶಿ
ಆರ್ಥಿಕ ವಿಚಾರದಲ್ಲಿ ಮಾಲವ್ಯ ರಾಜಯೋಗ ಎನ್ನುವುದು ಮಕರ ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ. ಯಾವುದೇ ಕೆಲಸಕ್ಕೆ ಕೈ ಹಾಕಿದ್ರು ಕೂಡ ಮಕರ ರಾಶಿಯವರು ಕೈ ತುಂಬಾ ಹಣವನ್ನು ಹಾಗೂ ಲಾಭವನ್ನು ಯಾವುದೇ ಅನುಮಾನವಿಲ್ಲದೆ ಸಂಪಾದನೆ ಮಾಡಬಹುದಾಗಿದೆ. ಬಿಜಿನೆಸ್ ಮಾಡುವವರಿಗೆ ಈ ಗೋಚಾರ ಫಲ ಸಾಕಷ್ಟು ಸಕಾರಾತ್ಮಕ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ವ್ಯಾಪಾರದಲ್ಲಿ ಉನ್ನತಿಯನ್ನು ಸಾಧಿಸಲಿದ್ದೀರಿ ಹಾಗೂ ಆದಾಯ ಮಾತ್ರವಲ್ಲದೆ ಉಳಿತಾಯವನ್ನು ಕೂಡ ಈ ಸಂದರ್ಭದಲ್ಲಿ ಯೋಚಿಸಿ ಲಾಭ ಆಗುವ ರೀತಿಯಲ್ಲಿ ಮಾಡಿದ್ದೀರಿ.
ಸಿಂಹ ರಾಶಿ
ಸಿಂಹ ರಾಶಿಯವರ ರಾಶಿ ಚಕ್ರದ ಹತ್ತನೇ ಸ್ಥಾನದಲ್ಲಿ ಶುಕ್ರ ಈ ಸಂದರ್ಭದಲ್ಲಿ ಪ್ರವೇಶ ಮಾಡುತ್ತಾನೆ. ಇದು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಪರಿಣಾಮಗಳನ್ನು ಹಾಗೂ ಘಟನೆಗಳು ನಡೆಯುವುದಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ ನೀವು ಒಂದೇ ಸ್ಥಾನದಲ್ಲಿ ಸಾಕಷ್ಟು ವರ್ಷಗಳಿಂದ ಕಷ್ಟಪಟ್ಟು ಕೆಲಸ ಮಾಡುತ್ತಾ ಇದ್ದರೂ ಕೂಡ ಯಾವುದೇ ಪ್ರಮೋಷನ್ ಬರ್ತಾ ಇಲ್ಲ ಅಂದ್ರೆ ಇನ್ಮುಂದೆ ಅದಕ್ಕಾಗಿ ಕಾಯಬೇಕಾದ ಅಗತ್ಯವಿಲ್ಲ ಯಾಕೆಂದರೆ ಈ ಸಮಯದಲ್ಲಿ ನಿಮಗೆ ಖಂಡಿತವಾಗಿ ಬಹು ದಿನಗಳಿಂದ ನೀವು ಕಾಯುತ್ತಿದ್ದ ಪ್ರಮೋಷನ್ ಅನ್ನು ನೀಡಲಾಗುತ್ತದೆ. ಈ ಸಮಯದಲ್ಲಿ ನೀವು ವ್ಯಾಪಾರವನ್ನು ಪ್ರಾರಂಭ ಮಾಡಿದರೆ ಕೈತುಂಬ ಲಾಭವನ್ನು ಗಳಿಸುವುದು ಖಂಡಿತ. .
ವೃಶ್ಚಿಕ ರಾಶಿ
ಮಾಲವ್ಯ ರಾಜಯೋಗ ಎನ್ನುವುದು ವೃಶ್ಚಿಕ ರಾಶಿ ಅವರಿಗೆ ಈ ಸಂದರ್ಭದಲ್ಲಿ ಸುಖ ಹಾಗೂ ಐಷಾರಾಮಿತನವನ್ನು ಹೆಚ್ಚಿಸುವಂತಹ ಪರಿಣಾಮವನ್ನು ಬೀರಲಿದೆ. ಇನ್ನು ವ್ಯಾಪಾರ ಮಾಡುತ್ತಿರುವಂತಹ ವೃಶ್ಚಿಕ ರಾಶಿಯವರ ವ್ಯಾಪಾರದಲ್ಲಿ ಸಾಕಷ್ಟು ಚಿಕ್ಕಪುಟ್ಟ ಸಮಸ್ಯೆಗಳು ಆಗಾಗ ಕಂಡು ಬರಲಿವೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಮಾಲವ್ಯ ರಾಜಯೋಗ ಎನ್ನುವುದು ನಿಜಕ್ಕೂ ಕೂಡ ಸಾಕಷ್ಟು ಲಾಭದಾಯಕವಾಗಿ ಪರಿಣಮಿಸಲಿದೆ ಹಾಗೂ ಹಣದ ವಿಚಾರದ ಬಗ್ಗೆ ಮಾತನಾಡುವುದಾದರೆ ಕೈ ತುಂಬಾ ಹಣ ಸಂಪಾದನೆ ಮಾಡುವಂತಹ ಅವಕಾಶವನ್ನು ವೃಷಭ ರಾಶಿಯವರು ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದಾರೆ. ಶುಕ್ರನ ಗೋಚಾರ ಎನ್ನುವುದು ವೃಷಭ ರಾಶಿಯವರ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಘಟನೆಗಳು ನಡೆಯುವುದಕ್ಕೆ ಕಾರಣವಾಗುತ್ತವೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಶುಕ್ರನ ಈ ಗೋಚಾರ ಫಲ ಎನ್ನುವುದು ಶುಭ ಪರಿಣಾಮದ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕನ್ಯಾ ರಾಶಿಯವರು ಒಂದು ವೇಳೆ ಹೊಸ ಬ್ಯುಸಿನೆಸ್ ಐಡಿಯಾವನ್ನು ಕಾರ್ಯರೂಪಕ್ಕೆ ತರಬೇಕು ಎನ್ನುವಂತಹ ಯೋಜನೆಯಲ್ಲಿ ಇದ್ದರೆ ಈ ಸಂದರ್ಭದಲ್ಲಿ ಆ ಪ್ರಯತ್ನವನ್ನು ಮಾಡಬಹುದಾಗಿದೆ .