ಬೆಳ್ತಂಗಡಿ: 6 ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತ ಸಾವು
Sunday, May 26, 2024
ಮಂಗಳೂರು:ಆರು ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದ ನವವಿವಾಹಿತ ಯುವಕನೋರ್ವ ಮನೆಯ ಬಳಿಯಿರುವ ಕೆರೆಗೆ ಜಾರಿಬಿದ್ದು ಮೃತಪಟ್ಟ ಘಟನೆ ಶನಿವಾರ ರಾತ್ರಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದಲ್ಲಿ ನಡೆದಿದೆ.
ಶೈಲೇಶ್
ಶೆಟ್ಟಿ(38) ಮೃತಪಟ್ಟವರು.
ಕೃಷಿಕರಾಗಿದ್ದ
ಶೈಲೇಶ್ ಶೆಟ್ಟಿಗೆ 6 ತಿಂಗಳ ಹಿಂದೆಯಷ್ಟೇ
ವಿವಾಹವಾಗಿತ್ತು. ಇವರು ತಮ್ಮ ಮನೆಯ ಕೆರೆಯ ಬಳಿಗೆ ಹೋದವರು ಶನಿವಾರ ರಾತ್ರಿ ಸುಮಾರು 8:30ರ ಸುಮಾರಿಗೆ ಜಾರಿಬಿದ್ದು
ಕೆಸರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನಾ
ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಬೆಳ್ತಂಗಡಿ
ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ಈ ಬಗ್ಗೆ ಹೆಚ್ಚಿನ
ಮಾಹಿತಿ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.